
ಬೆಂಗಳೂರು(ಜ.28): ಅಮೆರಿಕದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬೆಂಗಳೂರಿಗೆ ವಾಪಸಾಗಿರುವ ನಟ ಶಿವರಾಜ್ ಕುಮಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಅವರು ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಅವರ ಕುಶಲೋಪರಿ ವಿಚಾರಿಸಿದರು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಸ್ತ್ರ ಚಿಕಿತ್ಸೆಯ ಮರುದಿನವೇ ಶಿವರಾಜ್‌ಕುಮಾರ್‌ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದೆ ಎಂದು ಹೇಳಿದರು.
ಸತತ 6 ಗಂಟೆ ಕಾಲ ನಡೆದ ಸರ್ಜರಿ ಯಶಸ್ವಿ, ನಟ ಶಿವರಾಜ್ ಕುಮಾರ್ ಐಸಿಯುಗೆ ಶಿಫ್ಟ್!
ನಾನು ಕ್ಯಾನ್ಸರ್‌ಗೆ ಕುಗ್ಗಲಿಲ್ಲ, ಧೈರ್ಯವಾಗಿ ಎದುರಿಸಿ ಗೆದ್ದು ಬಂದೆ: ನಟ ಶಿವರಾಜ್ ಕುಮಾರ್
ಚಿಕಿತ್ಸೆಗಾಗಿ ಬೆಂಗಳೂರಿನಿಂದ ಅಮೆರಿಕಾಗೆ ಹೊರಡಲು ನಿಂತಾಗ ತುಂಬಾ ಭಯ ಆಯಿತು. ಏನೇ ಆದರೂ ಧೈರ್ಯವಾಗಿ ಎದುರಿಸಬೇಕೆಂದು ನಿರ್ಧರಿಸಿಕೊಂಡೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಎಲ್ಲರ ಆಶೀರ್ವಾದದಿಂದ ಆರೋಗ್ಯವಂತನಾಗಿ ಮರಳಿ ಬಂದಿದ್ದೇನೆ ಎಂದು ನಟ ಶಿವರಾಜ್ ಕುಮಾರ್ ಅವರು ಹೇಳಿದ್ದರು.
ಅಮೆರಿಕದಲ್ಲಿ ಚಿಕಿತ್ಸೆ ಮುಗಿಸಿಕೊಂಡು ಒಂದು ತಿಂಗಳ ನಂತರ ಬೆಂಗಳೂರಿಗೆ ವಾಪಸ್ ಬಂದ ನಟ ಶಿವರಾಜ್ ಕುಮಾರ್ ಅವರು ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದರು. 'ಇದೊಂದು ತುಂಬಾ ರಿಸ್ಕಿ ಸರ್ಜರಿ ಎಂದು ಮೊದಲೇ ಗೊತ್ತಿತ್ತು. ಈ ಕಾರಣಕ್ಕೆ ಮೊದಲ ದಿನ ಭಯ ಆಯಿತು. ಹೀಗಾಗಿ ಆಪರೇಷನ್‌ಗೆ ಒಳಗಾಗುವ ಮೊದಲು ಏನೆಲ್ಲಾ ಮಾಡಬೇಕು ಆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದ್ದೆ.
ಬೆಂಗಳೂರಿನಿಂದ 21 ಗಂಟೆ ಪ್ರಯಾಣಿಸಿ ಅಮೆರಿಕದ ಆಸ್ಪತ್ರೆ ಮುಂದೆ ನಿಂತಾಗ ಸ್ವಲ್ಪ ಧೈರ್ಯ ಬಂತು. ಆಪರೇಷನ್ ಆದ ಇಡೀ ದಿನ ಒಂದು ಸರ್ಕಸ್ ರೀತಿ ಇತ್ತು. ಒಂದೇ ದಿನ ಆರು ಸರ್ಜರಿ ಆಗಿದೆ. ಆದರೆ, ಎಷ್ಟು ಹೊಲಿಗೆ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ವೈದ್ಯರು, ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಹೀಗೆ ಎಲ್ಲರ ಆರೈಕೆ ಮತ್ತು ಆಶೀರ್ವಾದದಿಂದ ಕೊನೆಗೂ ಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ನನ್ನ ಪತ್ನಿ ಗೀತಾ ತಾಯಿಗಿಂತ ಹೆಚ್ಚಾಗಿ ನನ್ನ ಈ ಸಂದರ್ಭದಲ್ಲಿ ನೋಡಿಕೊಂಡರು.
ನಟ ಶಿವರಾಜ್ ಕುಮಾರ್ ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರಿ, ಬಿಜೆಪಿ ದೂರು ದಾಖಲು!
ಈ ಬಾರಿ ನನ್ನ ಮಗಳು ಕೂಡ ಜೊತೆಯಾದರು. ಇವರ ಪ್ರೀತಿಯನ್ನು ಮಾತಿನಲ್ಲಿ ಹೇಳಲಾಗದು. ನಿನ್ನ ಧೈರ್ಯಕ್ಕೆ ಮೆಚ್ಚಿದೆ ಅಂತ ವೈದ್ಯರು ನನಗೆ ಹೇಳಿದರು. ಧೈರ್ಯ ತುಂಬುವವರು ಜೊತೆಗಿದ್ದರೆ ಯಾವುದೇ ಸಮಸ್ಯೆಯನ್ನು ಗೆದ್ದು ಬರಬಹುದು ಎನ್ನುವುದಕ್ಕೆ ಇವರ ಪ್ರೀತಿನೇ ಸಾಕ್ಷಿ' ಎಂದರು. 'ಆಪರೇಷನ್ ಆದ ಎರಡನೇ ದಿನಕ್ಕೆ ಎದ್ದು ನಡೆಯಕ್ಕೆ ಶುರು ಮಾಡಿದೆ.
ಚಿಕಿತ್ಸೆ ಮಾಡಿರುವ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡೋಣ ಅಂತವೈದ್ಯರು ಹೇಳಿದ್ದಾರೆ. ಆಪರೇಷನ್ ವೇಳೆ ನಾಲ್ಕು ದಿನ ಲಿಕ್ವಿಡ್ ಊಟವೇ ಮಾಡಿದ್ದೇನೆ. ಡಿಸ್ಟಾರ್ಜ್ ಆದ ನಂತರ ಒಂದೊಂದೇ ಟ್ಯೂಬ್ ಕ್ಲಿಯರ್ ಮಾಡಿದರು' ಎಂದು ಶಿವರಾಜ್ ಕುಮಾರ್ ಹೇಳಿದರು. ಇದೇ ಸಂದರ್ಭದಲ್ಲಿ ಸಿನಿಮಾಗಳಲ್ಲಿ ನಟಿಸುವ ಕುರಿತು ಮಾತನಾಡಿದ ಶಿವರಾಜ್ ಕುಮಾರ್, 'ನಾನು ಸಿನಿಮಾಗಳಲ್ಲಿ ಈಗ ಕೆಲಸಮಾಡಬಹುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ