ಆಗಸ್ಟ್ ತಿಂಗಳಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ಮೂರು ರುಪಾಯಿಯಷ್ಟು ಹೆಚ್ಚಿಸಿ ನೇರ ರೈತರ ಬ್ಯಾಂಕ್ ಅಕೌಂಟ್‌ಗೆ ಆ ಹಣ ಹಾಕಲಾಗುತ್ತಿದೆ. ಮತ್ತೆ ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಸೂಚನೆ ನೀಡಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ ಸ್ಪಷ್ಟಪಡಿಸಿದರು.
ಹೊಸಪೇಟೆ (ಡಿ.16): ಆಗಸ್ಟ್ ತಿಂಗಳಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ ಮೂರು ರುಪಾಯಿಯಷ್ಟು ಹೆಚ್ಚಿಸಿ ನೇರ ರೈತರ ಬ್ಯಾಂಕ್ ಅಕೌಂಟ್‌ಗೆ ಆ ಹಣ ಹಾಕಲಾಗುತ್ತಿದೆ. ಮತ್ತೆ ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಸೂಚನೆ ನೀಡಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ ಸ್ಪಷ್ಟಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಮುಲ್ ಸೇರಿ ಇತರೆ ಉತ್ಪನ್ನಗಳ ದರ ಹೆಚ್ಚೇ ಇದೆ. ಕರ್ನಾಟಕದಲ್ಲಿ ಮಾತ್ರ ನಂದಿನಿ ಹಾಲಿನ ದರ ಕಡಿಮೆ ಇದೆ. ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟಗಳ ಬೇಡಿಕೆ ಇದೆ. ಈ ಬಗ್ಗೆ ಪಶುಸಂಗೋಪನಾ ಸಚಿವರು ಸದನದಲ್ಲಿ ಹೇಳಿಕೆ ನೀಡಿರಬಹುದು.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೆ ನಮಗೆ ಹಾಲಿನ ದರ ಏರಿಕೆಗೆ ಸೂಚನೆ ನೀಡಿಲ್ಲ. ಹಾಗಾಗಿ ಪಶುಸಂಗೋಪನೆ ಸಚಿವರ ಜತೆಗೆ ಚರ್ಚಿಸಿ ವಿಷಯ ತಿಳಿದುಕೊಳ್ಳುವೆ ಎಂದರು. ನಾಲ್ಕೈದು ತಿಂಗಳ ಹಿಂದಷ್ಟೇ ಹಾಲಿನ ದರ ಏರಿಕೆ ಮಾಡಲಾಗಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದರ ಏರಿಕೆ ಬಗ್ಗೆ ಇನ್ನೂ ಸೂಚನೆ ನೀಡಿಲ್ಲ ಎಂದರು. ಕೆಎಂಎಫ್ ಉತ್ಪನ್ನಗಳ ಮಾರಾಟಕ್ಕೆ ನಾವು ಏಜೆನ್ಸಿಗಳಿಗೆ ಟಾರ್ಗೆಟ್ ನೀಡುತ್ತೇವೆ. ಇದರಲ್ಲಿ ಯಾವುದೇ ಲೋಪ ಇಲ್ಲ. ನಾವು ಉತ್ಪನ್ನ ಮಾರಾಟ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ತಿಂಗಳಾಂತ್ಯಕ್ಕೆ ರೈತರಿಗೆ ಬೆಳೆ ವಿಮೆ ಪಾವತಿ: ಸಚಿವ ಚಲುವರಾಯಸ್ವಾಮಿ ಭರವಸೆ
ಹಾಲು ಖರೀದಿ ದರ ಕಡಿತ ವಿರೋಧಿಸಿ ಧರಣಿ: ರೈತರಿಗೆ ಹಾಲಿನ ದರ ಕಡಿತಗೊಳಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ರೈತರನ್ನು ಹಗಲು ದರೋಡೆ ಮಾಡಲು ಹೊರಟಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಆಕ್ರೋಶ ವ್ಯಕ್ತಪಡಿಸಿದರು. ಗೌರಿಬಿದನೂರು ನಗರ ಹೊರವಲಯದ ಹಾಲು ಶೀತಲ ಕೇಂದ್ರದ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಮಾತನಾಡಿ, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ತಾಲೂಕು ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನನಗೆ ಮಂತ್ರಿಯನ್ನೇ ಮಾಡಲಿಲ್ಲ, ಇನ್ನು ಸಿಎಂ ಮಾಡ್ತಾರಾ?: ಶಾಸಕ ಯತ್ನಾಳ
19ರಂದು ಕೋಚಿಮುಲ್ ಸಭೆ: ಮನವಿ ಪತ್ರ ಸ್ವೀಕರಿಸಿದ ಕೋಚಿಮುಲ್ ನಿರ್ದೇಶಕ ಜೆ. ಕಾಂತರಾಜು ಮಾತನಾಡಿ, ನಾನು ಒಬ್ಬನೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಆದ್ದರಿಂದ. ಡಿ. 19ರಂದು ಕೋಲಾರದಲ್ಲಿ ಸಭೆ ಇದೆ ಪ್ರತಿ ತಾಲೂಕಿನಿಂದ ರೈತರು ಬಂದು ತಮ್ಮ ಸಮಸ್ಯೆಗಳನ್ನು ಹಂಚಿಕೊಡರೆ ಎಲ್ಲರೂ ಸೇರಿ ಏನಾದರೂ ಒಂದು ತೀರ್ಮಾನಕ್ಕೆ ಬರಬಹುದು ಎಂದರು. ನೂರು ಶಿಬಿರ ವ್ಯವಸ್ಥಾಪಕ ಶ್ರೀನಿವಾಸಗೌಡ, ರೈತ ಮುಖಂಡ ಲೋಕೇಶಗೌಡ, ರೈತ ಸಂಘದ ಉಪಾಧ್ಯಕ್ಷ ರಾಮಚಂದ್ರರೆಡ್ಡಿ, ಪ್ರಧಾನ ಕಾರ್ಯದರ್ಶಿ ಸನತ್ ಕುಮಾರ್, ಶ್ರೀನಿವಾಸ್, ಅಶ್ವತ್ಥನಾರಾಯಣ ಗೌಡ, ಸರಸಿಂಹಮೂರ್ತಿ, ಶಿವಶಂಕರ, ಸತ್ಯನಾರಾಯಣ ಮತ್ತಿತರರು ಇದ್ದರು.