ದರ್ಶನ್ ಪತ್ನಿ ವಿಜಯಲಕ್ಷ್ಮೀ ಜತೆ ಸಿಎಂ ಸಿದ್ದರಾಮಯ್ಯ ಸೊಸೆ ಸ್ಮಿತಾ ಪಾರ್ಟಿ, ಕುತೂಹಲ ಕೆರಳಿಸಿದ ಫೋಟೋ!

By Gowthami K  |  First Published Sep 10, 2024, 6:34 PM IST

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು, ಸ್ನೇಹಿತೆ ಶ್ರುತಿ ರಮೇಶ್ ಕುಮಾರ್ ಅವರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಕೂಡ ಭಾಗವಹಿಸಿದ್ದು, ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.


ನಟ ದರ್ಶನ್‌ ತೂಗುದೀಪ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂತು. 3991 ಪುಟಗಳ ಚಾರ್ಚ್ ಶೀಟ್‌ ಕೂಡ ಸಲ್ಲಿಕೆಯಾಗಿದೆ. ದರ್ಶನ್ ಜೈಲು ಸೇರಿದ ಬಳಿಕ ಕೇವಲ ದೇವಾಲಯ ಮತ್ತು ಜೈಲು ಭೇಟಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಪತ್ನಿ ವಿಜಯಲಕ್ಷ್ಮೀ  ಈಗ  ಸ್ನೇಹಿತರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಪ್ರಕರಣದ ಬಳಿಕ ಯಾವುದೇ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ವಿಜಯಲಕ್ಷ್ಮೀ ತಮ್ಮ ಆತ್ಮೀಯ ಸ್ನೇಹಿತೆ ಶ್ರುತಿ ರಮೇಶ್‌ ಕುಮಾರ್‌ ಅವರ ಜನ್ಮದಿನದ ಸಂಭ್ರಮದಲ್ಲಿ   ಖುಷಿಯಿಂದಲೇ ಭಾಗಿಯಾಗಿದ್ದಾರೆ.

Tap to resize

Latest Videos

ಬಿಗ್‌ಬಾಸ್‌ ನೆಪದಲ್ಲಿ ಕಿಚ್ಚನ ಅಭಿಮಾನಿಗಳ ಮನಸ್ಸಿನ ಜೊತೆಗೆ ಆಟವಾಡ್ತಿದೆಯಾ ಕಲರ್ಸ್ ಕನ್ನಡ!

ಆದರೆ ವಿಷ್ಯ ಇದಲ್ಲ. ಈ ಅದ್ದೂರಿ ಬರ್ತಡೇ ಪಾರ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಭಾಗವಹಿಸಿದ್ದಾರೆ. ಹೆಚ್ಚಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ಸಿದ್ದರಾಮಯ್ಯ ಅವರ ಪುತ್ರ, ದಿವಂಗತ ರಾಕೇಶ್ ಅವರ ಪತ್ನಿ ಸ್ಮಿತಾ ರಾಕೇಶ್  ಈಗ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಸೊಸೆ ಸ್ಮಿತಾ ಅವರ ಜೊತೆಗಿರುವ ಫೋಟೋವನ್ನು ಸ್ನೇಹಿತೆ ಶ್ರುತಿ ರಮೇಶ್‌ ಕುಮಾರ್‌ ಹಂಚಿಕೊಂಡಿದ್ದು, ಇದೇ ಫೋಟೋದಲ್ಲಿ ವಿಜಯಲಕ್ಷ್ಮಿ ಕೂಡ ಇದ್ದಾರೆ. ಹೀಗಾಗಿ ಇವರಿಬ್ಬರು ಹೇಗೆ ಸ್ನೇಹಿತರು ಎಂದು ನೆಟ್ಟಿಗರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. 

ಹಲವು ವರ್ಷಗಳಿಂದ ಸಿದ್ದರಾಮಯ್ಯ ಸೊಸೆ ಸ್ಮಿತಾ ಮತ್ತು ವಿಜಯಲಕ್ಷ್ಮಿ ಸ್ನೇಹಿತೆಯರಾಗಿದ್ದಾರೆ ಎನ್ನಲಾಗಿದೆ. ಸ್ಮಿತಾರಾಕೇಶ್ ರವರ ಹೆಸರಿನಲ್ಲಿ ಲೇ ಮೆರಿಡಿಯನ್ ಎಂಬ 5 ಸ್ಟಾರ್ ಹೋಟೆಲ್ ಇದ್ದು ಅದನ್ನು ಈಗ ಮುಚ್ಚಲಾಗಿದೆ. ಸದ್ಯ ರಾಕೇಶ್ ಸಿದ್ದರಾಮಯ್ಯನವರ ಹೆಸರಿನಲ್ಲಿದ್ದ ಶುಗರ್ ಫ್ಯಾಕ್ಟರಿ ಎಂಬ ಪಬ್‌(ಕೋರಮಂಗಲದಲ್ಲಿದೆ) ಅನ್ನು ಪಾಲುದಾರಿಕೆಯಲ್ಲಿ ಸ್ಮಿತಾರವರು ನೋಡಿಕೊಳ್ಳುತ್ತಿದ್ದಾರೆ. ಸ್ಮಿತಾ ಅವರು ಉದ್ಯಮದಲ್ಲಿ ತನನ್ನು ತಾನು ತೊಡಗಿಸಿಕೊಂಡಿದ್ದಾರೆ. 2023ರ ವಿಧಾನ ಸಭೆ ಎಲೆಕ್ಷನ್‌ ನಲ್ಲಿ ಮಾವ ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದರು.

ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕರೆ!

ಈ ಫೋಟೋಗೆ ನೆಟ್ಟಿಗರು ಕಮೆಂಟ್ ಮಾಡಿ "ಖಾಸಗಿ ವಿಷಯ ಸ್ನೇಹ ಬೇರೆ ರಾಜಕೀಯ ಬೇರೆ ಇವರಿಬ್ಬರೂ ಒಳ್ಳೆಯ ಮನಸು ಹೃದಯ ಉಳ್ಳವರು ಇದರಲ್ಲಿ ಕೊಳಕು ಮಾತುಗಳು ಬೇಕಿಲ್ಲ" ಎಂದಿದ್ದಾರೆ.

ಕಳೆದ ಬಾರಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವೆಡ್ಡಿಂಗ್ ಪಾರ್ಟಿಯನ್ನು ಶ್ರುತಿ ರಮೇಶ್ ಅವರೇ  ದುಬೈನಲ್ಲಿ ಮಾಡಿದ್ದರು ಎಂದು ಹೇಳಲಾಗುತ್ತದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ,  "ವಿಜಿ ನಿಮ್ಮದು ಎಷ್ಟು ಒಳ್ಳೆಯ ಮನಸ್ಸು. ನಿಮ್ಮ ಆಪ್ತರು ಖುಷಿಯಾಗಿ ಇರಬೇಕೆಂದು ಎಷ್ಟೆಲ್ಲಾ ಪ್ರಯತ್ನ ಪಡ್ತೀರಿ. ನಾವು ಜೀವನದಲ್ಲಿ ಒಂದು ಹಂತಕ್ಕೆ ಬಂದಿದ್ದರೂ, ಇಂದಿಗೂ ಕೂಡ ಉತ್ತಮ ಸ್ನೇಹಿತೆಯರಾಗಿ ಇರೋದಕ್ಕೆ ಖುಷಿಯಾಗುತ್ತಿದೆ. ನನ್ನ ಈ ದಿನ ಸ್ಪೆಷಲ್‌ ಆಗಿರಬೇಕು ಎನ್ನುವ ಕಾರಣಕ್ಕೆ ಇಷ್ಟು ದೂರದಿಂದ ಬಂದಿರೋದಕ್ಕೆ ತುಂಬಾ ಥ್ಯಾಂಕ್ಸ್‌. ನೀವು ನನ್ನ ಆತ್ಮೀಯ ಫ್ರೆಂಡ್‌ ಎಂದು ಹೇಳಿಕೊಳ್ಳೋದಕ್ಕೆ ನಾನು ಅದೃಷ್ಟವಂತೆ ಎಂದು ಶ್ರುತಿ ರಮೇಶ್‌ ಕುಮಾರ್‌  ಬರೆದುಕೊಂಡಿದ್ದಾರೆ.

click me!