ಬಿಗ್‌ಬಾಸ್‌ ಸೀಸನ್ 11 ರ ಪ್ರೋಮೋದಿಂದ ಕಿಚ್ಚ ಸುದೀಪ್ ಹೆಸರನ್ನು ತೆಗೆದುಹಾಕಿರುವುದು ಅಭಿಮಾನಿಗಳಿಗೆ ಆಘಾತ ನೀಡಿದೆ. ಕಿಚ್ಚನಿಲ್ಲದೆ ಬಿಗ್‌ಬಾಸ್‌ ನೋಡುವುದಿಲ್ಲ ಎಂದು ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ ಇನ್ನೂ ಸ್ಪಷ್ಟನೆ ನೀಡಿಲ್ಲ.

ಬೆಂಗಳೂರು (ಸೆ.10): ಕನ್ನಡ ಬಿಗ್‌ಬಾಸ್‌ ಸೀಸನ್ 11 ಆರಂಭಕ್ಕೆ ಇನ್ನೇನು ಕೆಲವೇ ದಿನಗಳಿದೆ. ಮೊದಲ ಪ್ರೋಮೋ ಕೂಡ ರಿಲೀಸ್‌ ಮಾಡಿರುವ ಕಲರ್ಸ್ ಕನ್ನಡ ಈಗ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಮೊದಲ ಪ್ರೋಮೋದಲ್ಲಿ ಬಳಸಿದ್ದ ಕಿಚ್ಚ ಸುದೀಪ ಎಂಬ ಹ್ಯಾಶ್ ಟ್ಯಾಗ್ ಅನ್ನು ಈಗ ತೆಗದು ಹಾಕಿದೆ. ಸದ್ಯ ಇದುವೇ ಬಿಗ್‌ಬಾಸ್‌ ನ ಶಾಕಿಂಗ್‌ ಸುದ್ದಿ. 

ಕಳೆದ 10 ವರ್ಷಗಳಿಂದ ಕಿಚ್ಚ ಸುದೀಪ್‌ ಅವರೇ ಶೋ ನ ರೂವಾರಿಯಾಗಿ ಬಹಳ ಅಚ್ಚುಕಟ್ಟಾಗಿ ಶೋ ನಡೆಸಿಕೊಂಡು ಬಂದಿದ್ದರು. ಈ ಬಾರಿಯೂ ಸೀಸನ್‌ 11 ಗೆ ಅವರೇ ಶೋ ನಡೆಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಅವರು ಶೋ ನಡೆಸುವುದು ಅನುಮಾನ ಎನ್ನುವ ಶಂಕೆ ಆರಂಭವಾಗಿದೆ.

ಕಿಚ್ಚನಿದ್ದರೆ ಶೋ ಗೆ ಒಂದು ಕಳೆ. ಅವರಿಲ್ಲದ ಬಿಗ್‌ಬಾಸ್‌ ನೋಡುವುದಿಲ್ಲ ಎಂದು ಅಭಿಮಾನಿಗಳು ಈಗ ಕಮೆಂಟ್‌ ಮಾಡುತ್ತಿದ್ದಾರೆ. ಯಾವಾಗ ಕಲರ್ಸ್ ಕನ್ನಡ ಬಿಬಿಕೆ11 ಪ್ರೋಮೋದಿಂದ ಹ್ಯಾಶ್ ಟ್ಯಾಗ್ ತೆಗೆಯಿತೂ ಅಂದಿನಿಂದ ಕಿಚ್ಚನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನನಗೆ ಮಾತ್ರ ವಯಸ್ಸಾಗ್ತಿದೆ ಅಂತ ಅಪ್ಪನ ಜೊತೆ ಇರೋ ಅವನ ಫೋಟೊ ಶೇರ್ ಮಾಡಿದ ಕಿಚ್ಚನ ಮಗಳು!

ಭಾರತದ ಎಲ್ಲಾ ಭಾಷೆಯ ಬಿಗ್‌ಬಾಸ್‌ ನಲ್ಲಿ ನಿರೂಪಕರು ಬದಲಾವಣೆಯಾದ ಉದಾಹರಣೆಗಳಿವೆ. ಆದರೆ ಕನ್ನಡದಲ್ಲಿ ಮಾತ್ರ ಬರೋಬ್ಬರಿ 10 ಸೀಸನ್ ನಿರೂಪಣೆ ಮಾಡಿದ ಇತಿಹಾಸ ಕಿಚ್ಚನದು. ಇದು ಕನ್ನಡದ ಗತ್ತು ಕಿಚ್ಚನ ತಾಕತ್ತು ಎಂದರೆ ತಪ್ಪಲ್ಲ.

ಈ ಬಾರಿ ಕಿಚ್ಚ ತನ್ನ ಹುಟ್ಟುಹಬ್ಬಕ್ಕೂ ಮುನ್ನ ನಡೆಸಿದ ಪ್ರೆಸ್‌ ಮೀಟ್‌ ನಲ್ಲಿ ಬಿಗ್‌ಬಾಸ್ ಬಗ್ಗೆ ಕೇಳಿದ್ದಕ್ಕೆ ಕಾರ್ಯಕ್ರಮ ನಿರೂಪಣೆ ಮಾಡ್ತೇನೆ ಅಥವಾ ಮಾಡುವುದಿಲ್ಲ ಎಂಬ ಬಗ್ಗೆ ಏನೂ ಹೇಳಿಲ್ಲ. ಆದರೆ ಅಡ್ಡಗೋಡೆ ಮೇಲೆ ದೀಪವಿಟ್ಟ ಹಾಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಮಾಡಲು ನಾನು ಎಷ್ಟು ಕಷ್ಟ ಪಡುತ್ತೇನೆ ಗೊತ್ತಾ? ಸಿನಿಮಾಗೆ ಅಂತ ಟೈಂ ಕೊಡ್ಲಾ? ಬಿಗ್ಬಾಸ್ ಗೆ ಅಂತ ಟೈಂ ಕೊಡ್ಲಾ? ಅಥವಾ ನನಗೆ ಅಂತ ಟೈಂ ಕೊಡ್ಲ ಎಂದು ಉತ್ತರಿಸಿ ಗೊಂದಲ ಸೃಷ್ಟಿಸಿದ್ದರು.

ಅದಾಗಿ ಎರಡು ದಿನದಲ್ಲಿ ಕಲರ್ಸ್ ಕನ್ನಡ ತನ್ನ ಪೇಜ್‌ ನಲ್ಲಿ ಪ್ರೋಮೋ ರಿಲೀಸ್‌ ಮಾಡಿ ಕಿಚ್ಚ ಸುದೀಪ ಎಂದು ಹ್ಯಾಶ್ ಟ್ಯಾಗ್ ಬಳಸಿತ್ತು. ಇದರಿಂದ ಕಿಚ್ಚ ಇರುವುದು ಖಚಿತ ಎಂದು ಬಿಗ್‌ವಾಸ್‌ ಫ್ಯಾನ್ಸ್ ಖುಷಿಯಾಗಿದ್ದರು.

ನಾದಬ್ರಹ್ಮ ಹಂಸಲೇಖರ ಮಕ್ಕಳು ಏನ್ಮಾಡ್ತಿದ್ದಾರೆ? ಪ್ರೀತಿಯ ಮಗಳ ಸಾಧನೆ ಇದು

ಆದರೆ ಅದನ್ನೀಗ 1 ವಾರದ ಬಳಿಕ ತನ್ನ ಪೇಜ್‌ ನಿಂದ ಎಡಿಟ್‌ ಮಾಡಿದೆ. ಇದು ಕಿಚ್ಚನ ಅಭಿಮಾನಿಗಳ ಬೇಸರ ಮತ್ತು ಕೋಪಕ್ಕೆ ಕಾರಣವಾಗಿದೆ. ಯಾಕೆಂದರೆ ಇತ್ತೀಚೆಗೆ ಬಿಗ್‌ಬಾಸ್‌ ಕನ್ನಡ ಸೀಸನ್ 11 ರ ಪ್ರೋಮೋ ಶೂಟಿಂಗ್ ಸೆಟ್‌ನಿಂದ ಎರಡು ಫೋಟೋಗಳು ಸೋರಿಕೆಯಾಗಿತ್ತು ಎನ್ನಲಾಗಿತ್ತು. ಈ ಫೋಟೋ ಬಿಬಿಕೆ ಶೂಟಿಂಗ್‌ ನದ್ದೂ ಅಥವಾ ಬೇರೆಯದ್ದಾ ಎಂದು ಗೊಂದಲಕ್ಕೆ ಕಾರಣ ವಾಗಿದೆ. 

ಇನ್ನು ಕೆಲವರು ಕಮೆಂಟ್‌ ಮಾಡಿ ಕಿಚ್ಚನಿಲ್ಲದಿದ್ದರೆ ಶೋ ನೋಡೋದು ವ್ಯರ್ಥ. ನಮ್ಮ ಮನಸ್ಸಿನ ಜೊತೆಗೆ ಕಲರ್ಸ್ ಕನ್ನಡ ಆಟವಾಡುತ್ತಿದೆ. ಸ್ಪಷ್ಟವಾಗಿ ಏನನ್ನೂ ಹೇಳದೆ ಹೀಗೆ ಮಾಡುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇದೆಲ್ಲದಕ್ಕೂ ಭವಿಷ್ಯದಲ್ಲಿ ಕಲರ್ಸ್ ಕನ್ನಡ ವಾಹಿನಿ ಮತ್ತು ಬಿಗ್‌ ಬಾಸ್ ಟೀಂ ಉತ್ತರ ಕೊಡಬೇಕಿದೆ.