ಮುಂದಿನ ಸಿಎಂ ಹೇಳಿಕೆ ಕೋಲಾಹಲ, ಪುತ್ರನಿಂದ ವಿವರಣೆ ಪಡೆದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

Published : Oct 24, 2025, 08:05 PM IST
 Yathindra Siddaramaiah

ಸಾರಾಂಶ

ಮುಂದಿನ ಸಿಎಂ ಹೇಳಿಕೆ ಕೋಲಾಹಲ, ಪುತ್ರನಿಂದ ವಿವರಣೆ ಪಡೆದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಸಿದ್ದರಾಮಯ್ಯ ನಿವೃತ್ತಿ ಬಳಿಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬಹುದು ಅನ್ನೋ ಹೇಳಿಕೆ ಕುರಿತು ಇದೀಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಅ.24) ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಬದಲಾವಣೆ, ಹಂಚಿಕೆ ಸೇರಿದಂತೆ ಹಲವು ಚರ್ಚೆಗಳು ನಡೆಯುತ್ತಲೇ ಇದೆ. ಪ್ರತಿ ಭಾರಿ ಹೈಕಮಾಂಡ್ ಮಧ್ಯಪ್ರವೇಶಿಸಿ ಈ ಚರ್ಚೆಗೆ ಅಲ್ಪ ವಿರಾಮ ಹಾಕಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಇತ್ತೀಚೆಗೆ ನೀಡಿದ ಹೇಳಿಕೆ ರಾಜ್ಯದಲ್ಲಿ ಮತ್ತೆ ಬಾರಿ ಸಂಚಲನ ಸೃಷ್ಟಿಸಿತ್ತು. ಸಿಎಂ ಸಿದ್ದರಾಮಯ್ಯ 2028ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಿದ್ದರಾಮಯ್ಯ ಸ್ಥಾನ ತುಂಬಬಲ್ಲ ಶಕ್ತಿ ಸತೀಶ್ ಜಾರಕಿಹೊಳಿಗಿದೆ. ಸತೀಶ್ ಜಾರಕಿಹೊಳಿ ನಾಯಕರನ್ನು ಮುನ್ನಡಸಬೇಕು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಕುರಿತು ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ. ಇತ್ತ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ಕೂಡ ನೀಡಲಾಗಿದೆ. ಇದೀಗ ಸಿದ್ದರಾಮಯ್ಯ ಈ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ನಾನು ಯತೀಂದ್ರನನ್ನೇ ಈ ಕುರಿತು ಕೇಳಿದ್ದೇನೆ. ಅವರು ಇವರೇ ಸಿಎಂ ಆಗಬೇಕು ಎಂದಿಲ್ಲ. ಸೈದ್ದಾಂತಿಕವಾಗಿ ಮಾತ್ರ ಎಂದಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ವಿಚಾರ ಯತೀಂದ್ರ ಬಳಿಯೇ ಕೇಳಿದೆ

ಸಿಎಂ ಹೇಳಿಕೆ ವಿಚಾರವನ್ನು ಯತೀಂದ್ರ ಬಳಿಯೇ ಕೇಳಿದ್ದೇನೆ. ಸೈದ್ಧಾಂತಿಕವಾಗಿ ಮಾತನಾಡಿದ್ದೇನೆ ಅಂದಿದ್ದಾರೆ. ಇಂತವರೇ ಮುಖ್ಯಮಂತ್ರಿ ಅಂತ ಹೇಳಿಲ್ಲ. ಹೇಳಿಕೆಯನ್ನು ತಿರುಚಿ ಬರೆಯಲಾಗಿದೆ ಎಂದಿದ್ದಾರೆ. ಇಂತವರೇ ಸಿಎಂ ಆಗಬೇಕು ಅಂತ ಹೇಳಿಲ್ಲ. ಇದೇ ವೇಳೆ ತಿರುಚಿ ಏನಾದ್ರೂ ಹೇಳಿದರಾ ಅಂತ ಕೇಳಿದೆ. ಇಲ್ಲ ನಾನು ಸೈದ್ದಾಂತಿಕವಾಗಿ ಮಾತನಾಡದ್ದು ಎಂದಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಯಾರೋ ನಿಮ್ಮಂತವರು ಕೇಳಿರಬಹುದು

ಮಾಧ್ಯಮಳು ಪ್ರಶ್ನೆ ಮಾಡಿರುತ್ತಾರೆ, ಅದಕ್ಕೆ ಉತ್ತರಿಸಿದ್ದಾರೆ ಅಷ್ಟೇ, ಈಗ ನಾನು ಸಹಕಾರ ಸಪ್ತಾಹದ ಕುರಿತು ಮಾತನಾಡುತ್ತಿದ್ದೆ. ಈಗ ನೀವು ಯತೀಂದ್ರನ ಕುರಿತು ಕೇಳಲಿಲ್ಲವೇ? ಹೀಗೆ ಅಲ್ಲೂ ಕೇಳಿರುತ್ತಾರೆ. ಅದಕ್ಕೆ ಯತೀಂದ್ರ ಸಿದ್ದರಾಮಯ್ಯ ಉತ್ತರ ಕೊಟ್ಟಿರುತ್ತಾರೆ ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಅಖಿಲ ಭಾರತ ಸಹಕಾರ ಸಪ್ತಾಹ ಕುರಿತು ಮಾಹಿತಿ ನೀಡಿದ ಸಿಎಂ

ಇದೇ ವೇಳೆ ಅಖಿಲ ಭಾರತ ಸಹಕಾರ ಸಪ್ತಾಹ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಏಳು ದಿನಗಳ ಕಾಲ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ. ಇದು 72ನೇ ಅಖಿಲ ಭಾರತ ಸಹಕಾರ ಸಪ್ತಾಹವಾಗಿದೆ. ಇಂದು ಪೂರ್ವಭಾವಿ ಸಭೆ ನಡೆಸಲಾಗಿದೆ. ನೆಹರೂ ಅವರ ಜಯಂತಿ ದಿನ ಉದ್ಘಾಟನೆ ಮಾಡಲಾಗುತ್ತದೆ ಎಂದಿದ್ದಾರೆ. 12 ಗಂಟೆಗೆ ಅರಮನೆ ಮೈದಾನದಲ್ಲಿ ಆಚರಣೆ ಮಾಡುತ್ತಾ ಇದ್ದೇವೆ. ಸಹಕಾರ ಸಚಿವನಾಗಿ, ಸಿಎಂ ಆಗಿ ನಾನು ಉದ್ಘಾಟನೆ ಮಾಡುತ್ತಿದ್ದೇನೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!