ಏಯ್ ಕೂಡ್ರಿ, ಭಾಷಣದ ವೇಳೆ ಹೊರಟ ಜನರನ್ನು ಗದರಿಸಿ ಕೂರಿಸಿದ ಸಿಎಂ ಸಿದ್ದರಾಮಯ್ಯ

Published : Nov 09, 2025, 04:46 PM IST
Siddaramaiah

ಸಾರಾಂಶ

ಏಯ್ ಕೂಡ್ರಿ, ಭಾಷಣದ ವೇಳೆ ಹೊರಟ ಜನರನ್ನು ಗದರಿಸಿ ಕೂರಿಸಿದ ಸಿಎಂ ಸಿದ್ದರಾಮಯ್ಯ, ಕೂಡ್ಲಿಗೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಭಾಷಣದ ನಡುವೇ ಹೌದೋ, ಅಲ್ವೋ ಎಂಬ ಪ್ರಶ್ನೆಗೆ ಎಲ್ಲರೂ ಮೌನವಾಗಿ ಕುಳಿತಿದ್ದು ಸಿದ್ದರಾಮಯ್ಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ವಿಜಯನಗರ (ನ.09) ಏಯ್, ಎಲ್ಲಿ ಹೊರಟಿದ್ದೀರಿ, ಕೂಡ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವರನ್ನು ಗದರಿಸಿದ ಘಟನೆ ಕೂಡ್ಲಿ ಕಾರ್ಯಕ್ರಮದಲ್ಲಿ ನಡೆದಿದೆ. ವಿಜಯನಗರದ ಕೂಡ್ಲಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಜನರು ತಡವಾಗುತ್ತಿದೆ ಎಂದು ಹೊರಡಲು ಸಜ್ಜಾಗಿದ್ದಾರೆ. ಹಲವರು ಕಾರ್ಯಕ್ರಮದ ಸಭೆಯಿಂದ ಎದ್ದು ಹೊರಡಲು ಮುಂದಾಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಎದ್ದವರನ್ನು ಗದರಿಸಿ ಕೂರಿಸಿದ ಘಟನೆ ನಡೆದಿದೆ.

ಮುಖ್ಯಮಂತ್ರಿ ಭಾಷದ ನಡುವೆ ಎದ್ದು ಹೊರಟ ಜನರಿಗೆ ವಾರ್ನಿಂಗ್

ಕೂಡ್ಲಿಗೆ ಕಾರ್ಯಕ್ರಮದಲ್ಲಿ ಹಲವು ಭಾಗದಿಂದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖ ನಾಯಕರ ಭಾಷಣಧ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ತಮಗೆ ತಡವಾಗುತ್ತಿದೆ ಎಂದು ಜನರು ಸಭೆಯಿಂದ ಎದ್ದು ಹೊರಡಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸಿದ್ದರಾಮಯ್ಯ, ಏಯ್ ಕೂಡ್ರಿ ಎಂದು ಗದರಿಸಿದ್ದಾರೆ.

ಲೀಡರ್‌ಗಳು ಕೈ ಎತ್ತಲ್ವಾ? ಸಿದ್ದರಾಮಯ್ಯ ಪ್ರಶ್ನೆ

ಸಿದ್ದರಾಮಯ್ಯ ತಮ್ಮ ಭಾಷಣದ ನಡುವೆ ಪ್ರತಿಯೊಂದು ಕುಟುಂಬಕ್ಕೂ 200 ಯುನಿಟ್ ಉಚಿತವಾಗಿ ನೀಡುತ್ತಿದ್ದೇವೆ. ಹೌದೋ ಅಲ್ವೋ ಎಂದು ಸಿಎಂ ಸಿದ್ದರಾಮಯ್ಯ ಜನರನ್ನ ಪ್ರಶ್ನಿಸಿದ್ದಾರೆ. ಆದರೆ ಜನರು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನ್ನಿದ್ದರು. ನೀವು ಕೈ ಎತ್ತಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ವೇಳೆಯೂ ಜನರು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು. ಇದೇ ವೇಳೆ ಮುಖಂಡರತ್ತ ತಿರುಗಿದ ಸಿದ್ದರಾಮಯ್ಯ, ನನೋಡಿ ನೀವು ಲೀಡರ್‌ಗಳು ಕೈ ಎತ್ತಲ್ವಾ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಮುಖಂಡರನ್ನು ಪ್ರಶ್ನಿಸಿದ ಬೆನ್ನಲ್ಲೇ ನಾಯಕರು ತಾ ಮುಂದು ತಾಮುಂದು ಎಂದು ಕೈಎತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯಗೆ ಬೆಂಬ ಸೂಚಿಸಿದ್ದಾರೆ.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿ ವಿರುದ್ದ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷದವರು ಹೇಳ್ತಾರೆ, ಗ್ಯಾರಂಟಿ ಕೊಟ್ಟು ಹಣವಿಲ್ಲ ಅಂತ ಹೇಳುತ್ತಾರೆ. ಹಾಗಾದರೆ ಸಾವಿರಾರು ಕೋಟಿ ರೂಪಾಯಿ ಹಣ ಹೇಗೆ ಬಂತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯವರು ಸುಳ್ಳಿನ ಸರದಾರರು, ಅವರ ಮನೆಯ ದೇವರು ಸುಳ್ಳು . ಮತಗಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇಲ್ಲ. ಅವರಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದಿದ್ದಾರೆ. ನಾನಾ ರಾಜ್ಯಗಳಲ್ಲಿ ಮತಗಳ್ಳತನ ಮಾಡಿದ್ದಾರೆ. ಮಹದೇವಪುರದಲ್ಲಿ ಒಂದೇ ಮನೆಯಲ್ಲಿ 80 ಮತಗಳು ಇರೋದು ಸಾಧ್ಯವೇ? ಬಿಜೆಪಿಯವರಿಗೆ ಅಧಿಕಾರ ಬಿಟ್ಟು ಇರೋಕಾಗೋಲ್ಲ. ನೀರಿನಲ್ಲಿ ಮೀನು ಹೇಗೆ ಹೊರಗಡೆ ಬಂದಾಗ ಸಾಯುತ್ತೋ ಹಾಗೆ ಆಗಿದೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!