ಅಧಿಕಾರಿಗಳು ಕೈಯಲ್ಲಿ ಸರ್ಕಾರದ ಅನುದಾನ ಇದ್ದರೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದಿರುವುದು, ನಿಗಮಗಳ ಯೋಜನೆಗಳಿಗೆ ಹಣ ಬಳಸದೆ ಇಟ್ಟುಕೊಂಡಿರುವುದು, ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸದೆ ಕೈಕಟ್ಟಿ ಕೂತಿರುವುದನ್ನು ಕಂಡು ಸಿಡಿಮಿಡಿಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಜ.08): ಸಮಾಜ ಕಲ್ಯಾಣ ಇಲಾಖೆ ಹಾಗೂ ಇಲಾಖೆಯಡಿ ಬರುವ ವಿವಿಧ ನಿಗಮಗಳಲ್ಲಿ ಕೋಟಿ ಕೋಟಿ ಅನುದಾನ ಇದ್ದರೂ ಖರ್ಚು ಮಾಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಕೂಡಲೇ ನೋಟಿಸ್ ನೀಡಿ, ಉತ್ತರ ಸಮರ್ಪಕವಾಗಿಲ್ಲದಿದ್ದರೆ ತಕ್ಷಣ ಅಮಾನತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಖಡಕ್ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳು ಕೈಯಲ್ಲಿ ಸರ್ಕಾರದ ಅನುದಾನ ಇದ್ದರೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದಿರುವುದು, ನಿಗಮಗಳ ಯೋಜನೆಗಳಿಗೆ ಹಣ ಬಳಸದೆ ಇಟ್ಟುಕೊಂಡಿರುವುದು, ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನೂ ಅನುಷ್ಠಾನಗೊಳಿಸದೆ ಕೈಕಟ್ಟಿ ಕೂತಿರುವುದನ್ನು ಕಂಡು ಸಿಡಿಮಿಡಿಗೊಂಡರು.
ಎಚ್‌ಎಂಪಿವಿ ಅಪಾಯಕಾರಿಯಲ್ಲ, ಭಯ ಬೇಡ, ಜಾಗ್ರತೆ ವಹಿಸಿ: ಸಿಎಂ ಸಿದ್ದರಾಮಯ್ಯ
ಫಲಾನುಭವಿಗಳಿಗೆ ಕೊಡಲು ಕೊಟ್ಟ ಹಣ ಇಟ್ಟುಕೊಂಡು ಕೂರುವುದಕ್ಕಾ ನೀವು ಇರೋದು? ವರ್ಷದ ಕೊನೇ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಾರ್ಚ್ ಅಂತ್ಯದವರೆಗೆ ಕಾಯದೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇಲಾಖೆಯ 739 ಕೋಟಿ ಉಳಿಕೆ:
2024-25ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿದ್ದ ₹5,377 ಕೋಟಿ ಅನುದಾನದ ಪೈಕಿ ಈವರೆಗೆ 3,631 ಕೋಟಿ ಬಿಡುಗಡೆಯಾಗಿದೆ. ₹2.892 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಇನ್ನೂ 2739 ಕೋಟಿ ಹಾಗೇ ಉಳಿದಿದೆ. ಅಂಬೇಡ್ಕರ್ ನಿಗಮದಲ್ಲಿ 1900 ಕೋಟಿ, ಭೋವಿ ನಿಗಮದಲ್ಲಿ 107 ಕೋಟಿ ಸೇರಿ ಎಲ್ಲ ನಿಗಮಗಳಲ್ಲೂ ನೂರಾರು ಕೋಟಿ ಹಣ ಯಾಕೆ ಖರ್ಚು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೆಪ್ಟೆಂಬರ್ ಒಳಗೆ ವಿದ್ಯಾರ್ಥಿವೇತನ:
ಇನ್ನು ಮುಂದೆ ಪ್ರತಿ ವರ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಸೆಪ್ಟೆಂಬರ್ ಅಂತ್ಯದೊಳಗೆ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ನವೆಂಬರ್ ಅಂತ್ಯದ ಒಳಗಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಆಧಾರ್ ಮತ್ತಿತರರ ಕಾರಣಗಳಿಂದ ವಿದ್ಯಾರ್ಥಿ ವೇತನದಲ್ಲಿ ಏಳಂಬವಾಗಬಾರದು ಎಂದು ಸೂಚಿಸಿದರು,
ಪ್ರತಿ ತಾಲೂಕಿನಲ್ಲಿಯೂ ಪಿಯು ವಸತಿ ಕಾಲೇಜು
ರಾಜ್ಯದ ಎಲ್ಲ ಹೋಬಳಿಗಳಲ್ಲಿ ವಸತಿ ಶಾಲೆ, ಪ್ರತಿ ತಾಲೂಕಿಗೆ 1 ಪಿಯು ವಸತಿ ಕಾಲೇಜು ಸ್ಥಾಪಿಸುವುದು ಸರ್ಕಾರದ ಗುರಿ. ಈ ಹಿನ್ನೆಲೆಯಲ್ಲಿ ಬಾಕಿ ಇರುವ 92 ಹೋಬಳಿ ಹಾಗೂ ತಾಲೂಕುಗಳಲ್ಲಿ 2 ವರ್ಷದಲ್ಲಿ ವಸತಿ ಶಾಲೆ ಮತ್ತು ಕಾಲೇಜು ಸ್ಥಾಪನೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಂತ್ರಿಗಳಿಂದ ಸರಣಿ ಔತಣ: ಕಾಂಗ್ರೆಸ್ ಬಣ ರಾಜಕಾರಣ ಉಲ್ಬಣ!
ನಿರ್ಮಾಣ ಹಂತದಲ್ಲಿರುವ 90 ಕಟ್ಟಡಗಳ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಎಲ್ಲಾ ಮಂಜೂರಾದ ಹುದ್ದೆಗಳನ್ನು ಭರ್ತಿ, ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಕೌಶಲ್ಯ ತರಬೇತಿ, ಶಿಕ್ಷಕರಿಗೆ ನಿರಂತರ ತರಬೇತಿ ನೀಡಲು ಕ್ರಮ ವಹಿಸಿ. ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸುವ ಬಗ್ಗೆ ಪರಿಶೀಲಿಸುವಂತೆಯೂ ಸೂಚಿಸಿದರು.
ಮನೆ ನಿರ್ಮಾಣ ವೆಚ್ಚ ನೆನಿರ್ಮಾಣ ವೆಚ್ಚ ಪರಿಷ್ಕರಣೆ ಪರಿಶೀಲಿಸಿ
ವಿವಿಧ ನಿಗಮಗಳಲ್ಲಿ ಗಂಗಾಕಲ್ಯಾಣ ಯೋಜನೆ ಅಡಿ ಬೋರ್‌ವೆಲ್ ಸಂಖ್ಯೆ ಹೆಚ್ಚಿಸುವ, ವಸತಿ ನಿರ್ಮಾಣಕ್ಕೆ ನೀಡುವ ಯೂನಿಟ್ ವೆಚ್ಚ ಪರಿಷ್ಕರಿಸುವ ಬಗ್ಗೆ ಪರಿಶೀಸಿಲದು ಸಿಎಂ ಸೂಚಿಸಿದರು. ನಿಗಮಗಳಿಗೆ ಬಜೆಟ್‌ನಲ್ಲಿ 446 ಕೋಟಿ ರು. ಒದಗಿ ಸಲಾಗಿದ್ದು, ಈವರೆಗೆ 260 ಕೋಟಿ ವೆಚ್ಚವಾಗಿದೆ. ವಸತಿ ನಿರ್ಮಾಣಕ್ಕೆ ಲಭ್ಯವಿರುವ ಅನುದಾನದಲ್ಲಿ ನಿರ್ಮಾಣ ಕಾರ್ಯ ಆರಂಭಿಸಿರುವ ಮನೆಗಳನ್ನು ಪೂರ್ಣಗೊಳಿಸಿ. ನಿರ್ಮಾಣದ ಯೂನಿಟ್ ವೆಚ್ಚ ಪರಿಷ್ಕರಿಸುವ ಪರಿಶೀಲಿಸಿ. ಬೆಂಗಳೂರಿನಲ್ಲಿ 500 ಮಂದಿಸಾಮರ್ಥದನಿರಾಶ್ರಿತರ ಶಿಬಿರ ಆರಂಭಿಸಲು ತಕ್ಷಣ ಜಮೀನು ಗುರುತಿಸಿ, ಕಾರ್ಯಾರಂಭಿಸಬೇಕು ಎಂದರು.