ಬಿಹಾರದಂತೆ ರಾಜ್ಯದಲ್ಲೂ ಜಾತಿಗಣತಿ ಜಾರಿಗೆ ಸಿಎಂ ನಿರ್ಧರಿಸಬೇಕು: ಸತೀಶ ಜಾರಕಿಹೊಳಿ

Published : Oct 04, 2023, 04:48 AM IST
ಬಿಹಾರದಂತೆ ರಾಜ್ಯದಲ್ಲೂ ಜಾತಿಗಣತಿ ಜಾರಿಗೆ ಸಿಎಂ ನಿರ್ಧರಿಸಬೇಕು: ಸತೀಶ ಜಾರಕಿಹೊಳಿ

ಸಾರಾಂಶ

 ಜಾತಿ ಗಣತಿ ವರದಿ ಜಾರಿ ಮಾಡುವುದು ಒಳ್ಳೆಯದು. ನಮ್ಮದು ಸುಮಾರು ವರ್ಷಗಳ ಹಿಂದೆ ತಯಾರಾಗಿದೆ. ಸರ್ಕಾರ, ಸಿಎಂ ನಿರ್ಧಾರ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿ (ಅ.4) : ಜಾತಿ ಗಣತಿ ವರದಿ ಜಾರಿ ಮಾಡುವುದು ಒಳ್ಳೆಯದು. ನಮ್ಮದು ಸುಮಾರು ವರ್ಷಗಳ ಹಿಂದೆ ತಯಾರಾಗಿದೆ. ಸರ್ಕಾರ, ಸಿಎಂ ನಿರ್ಧಾರ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಸರ್ಕಾರದ ಜಾತಿ ಜನಗಣತಿ ಮಾಡಿರುವ ಕ್ರಮ ಸ್ವಾಗತಿಸಿದರು. ಯಾವ ಸಮುದಾಯಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು, ಹೆಚ್ಚಿನ ಅನುದಾನ ಕೊಡಬೇಕಾ? ಅಥವಾ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಲೆಕ್ಕಾಚಾರದಲ್ಲಿ ಬಹಳ ಒಳ್ಳೆಯ ಬೆಳವಣಿಗೆಯಾಗಿದೆ. ಇದು ನಮ್ಮಲ್ಲಿಯೂ ಆಗಬೇಕು ಎಂಬುವುದು ನಮ್ಮ ಆಸೆ ಇದೆ ಎಂದರು.

ಜಾತಿ ಗಣತಿ ಮಾಡಲು ಮೋದಿಗೇಕೆ ಭಯ?: ರಾಹುಲ್‌ ಪ್ರಶ್ನೆ

ಕಳೆದ ಬಾರಿ ಚುನಾವಣೆ ವೇಳೆಗೆ ಮಾಡಲು ಆಗಲಿಲ್ಲ. ನಮ್ಮ ಸರ್ಕಾರ ಹಂತದಲ್ಲಿ ಚರ್ಚೆ ಆಗುತ್ತಿದ್ದು ಆದಷ್ಟು ಬೇಗ ಸರ್ಕಾರ ಗಮನ ಹರಿಸಬೇಕು. ಜನಗಣತಿ ವರದಿಗೆ ₹ 200 ಕೋಟಿ ಖರ್ಚು ಮಾಡಿರಬೇಕು, ಆದಷ್ಟು ಬೇಗ ವರದಿ ಜಾರಿ ಆಗಬೇಕು ಎಂದರು.

ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಯಾರೇ ಬಂದರೂ ಸ್ವಾಗತ. ಆದರೆ ರಮೇಶ ಕತ್ತಿ ಕಾಂಗ್ರೆಸ್ ಸೇರುತ್ತಿರುವ ವಿಚಾರ ನನ್ನ ಗಮನಕ್ಕೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬಿಜೆಪಿ ಟಿಕೆಟ್ ಸಿಗದಿದ್ರೆ ರಮೇಶ್ ಕತ್ತಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಇಲ್ಲ. ನಾವು ಮುಂಚೆಯೇ ಘೋಷಣೆ ಮಾಡುತ್ತಿದ್ದೇವೆ. ವಿಧಾನಸಭೆ ಚುನಾವಣೆ ವೇಳೆ ಘೋಷಣೆ ಮಾಡಿದ ರೀತಿ ಇಲ್ಲಿಯೂ ಮಾಡುತ್ತೇವೆ ಎಂದರು.

ಸರ್ಕಾರ ಜನವರಿ ಹಾಗೂ ಸಂಕ್ರಾಂತಿ ವೇಳೆಗೆ ಪತನವಾಗುತ್ತದೆ ಎಂಬ ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿಯವರೆಗೂ ಸರ್ಕಾರ ಇರುತ್ತದೆ. ಆದಾಗ ನೋಡೋಣ ಎಂದರು. ಅಲ್ಲಿಯವರೆಗೆ ಸರ್ಕಾರ ಇರುತ್ತೋ ಇಲ್ವೋ ಡೌಟ್ ಇದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಡೌಟೇ ನಮ್ಮ ಡೌಟ್. ಅಲ್ಲಿಯವರೆಗೆ ಇದ್ದೆ ಇರ್ತೀವಿ ಅದಾದ್ಮೇಲೆ ನೋಡೋಣ ಎಂದಷ್ಟೇ ಉತ್ತರಿಸಿದರು.

ಕುರುಬ ಸಮಾಜವನ್ನು ಎಸ್ಟಿ ಪಂಗಡಕ್ಕೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ. ರಾಜ್ಯ ಸರ್ಕಾರದ್ದು ಕೇವಲ ಕೇಂದ್ರಕ್ಕೆ ಶಿಫಾರಸು ಮಾಡುವುದಷ್ಟೇ ಕೆಲಸ ಎಂದರು.

ಇನ್ನು ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣದ ಕುರಿತು ವಿಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಒಂದು ಮೂಲೆಯಲ್ಲಿ ಆಗಿದ್ದು ಎಲ್ಲರೂ ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು. ಎಲ್ಲೋ ಘಟನೆ ಆಗುತ್ತೆ, ಆಗಬಾರದು ಅಂತೇನಿಲ್ಲ. ಬೇರೆ ಬೇರೆ ಘಟನೆ ಬೇರೆ ಬೇರೆ ಕಾರಣಗಳಿಗೆ ಆಗುತ್ತವೆ. ಎಲ್ಲವೂ ಹಿಂದೂ ಮುಸ್ಲಿಂ ಅಂತಾ ಹೇಳಲಿಕ್ಕಾಗಲ್ಲ. ವೈಯಕ್ತಿಕವಾಗಿ ಬಹಳಷ್ಟು ಸಮಸ್ಯೆ ಇರುತ್ತವೆ. ಪೊಲೀಸ್ ತನಿಖೆ ಬಳಿಕ ಸತ್ಯಾಂಶ ಹೊರ ಬಂದೇ ಬರುತ್ತದೆ ಎಂದ ಅವರು, ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಮಾಡದಂತೆ ಆಗ್ರಹಿಸುತ್ತಿರುವುದು ನಿಜ. ವ್ಯಾಪಾರಕ್ಕೆ ಸಮಸ್ಯೆ ಆಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈ ರೀತಿ ಘಟನೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹೇಳುವವರು ಹೇಳುತ್ತಾರೆ. ಅವರ ಕಾಲದಲ್ಲಿ ನೂರಕ್ಕೆ ನೂರರಷ್ಟು ಶಾಂತವಿತ್ತಾ? ಅವರ ಕಾಲದಲ್ಲಿ ಏನೂ ಆಗಿಲ್ವಾ? ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ಆಗಿಲ್ವಾ? ನ್ಯಾಯಾಲಯದಲ್ಲಿ ಯಾವ ಪ್ರಕರಣ ದಾಖಲಾಗಿಲ್ವಾ? ಹೇಳಲಿಕ್ಕೆ ಹೇಳುತ್ತಾರೆ ಎಂದರು.

 

ಮತಾಂತರ ಮಾಡುವವರ ಕೈಗೆ ಕರ್ನಾಟಕ ಜಾತಿಗಣತಿ ವರದಿ ಲಭ್ಯ: ಪ್ರಶಾಂತ ಸಂಬರಗಿ ಆರೋಪ

ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಅಥವಾ ಬೆಳಗಾವಿ ಕ್ಷೇತ್ರದಿಂದ ನಿಮ್ಮ ಪುತ್ರ ಅಥವಾ ಪುತ್ರಿ ಸ್ಪರ್ಧೆ ನಡೆಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಇನ್ನೂ ನಿರ್ಣಯವಾಗಿಲ್ಲ. ಈಗಾಗಲೇ ಅಧ್ಯಕ್ಷರು ವೀಕ್ಷಕರನ್ನು ಎಲ್ಲ ಕ್ಷೇತ್ರಗಳಿಗೆ ನೇಮಕ ಮಾಡಿದ್ದಾರೆ. ಈ ತಿಂಗಳಲ್ಲಿ ಸಭೆ ಮಾಡಿ ನಿರ್ಣಯ ಮಾಡುತ್ತೇವೆ. ಯಾರು ಲೋಕಸಭೆ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಅರ್ಜಿ ಕೊಡಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌