
ಬಾಗಲಕೋಟೆ : ಇಸ್ರೇಲ್‌ನಲ್ಲಿ ಸಿಲುಕಿರುವ ರಬಕವಿ-ಬನಹಟ್ಟಿಯ ಪೂಜಾ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧೈರ್ಯ ತುಂಬಿದರು. ಬುಧವಾರ ಸಂಜೆ ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪೂಜಾ ಕುಟುಂಬಸ್ಥರಿಗೆ ಧೈರ್ಯ ಹೇಳುವಂತೆ ಮನವಿ ಮಾಡಿದರು. ತಮ್ಮ ಮೊಬೈಲ್ ಮೂಲಕವೇ ಪೂಜಾ ಅವರ ತಾಯಿಗೆ ಕರೆ ಮಾಡಿಕೊಟ್ಟು ಮಾತನಾಡಿಸಿದರು. ಪೂಜಾ ತಾಯಿಯೊಂದಿಗೆ ಮಾತನಾಡಿದ ಸಿಎಂ, ಪೂಜಾ ಅವರೊಂದಿಗೆ ನಾನು ಮಾತನಾಡಿದ್ದೇನೆ, ಅವರು ಸುರಕ್ಷಿತವಾಗಿದ್ದಾರೆ. ನೀವು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ಧೈರ್ಯ ತುಂಬಿದರು.
ಇದಕ್ಕೂ ಮೊದಲು, ಸಚಿವ ತಿಮ್ಮಾಪೂರ ಅವರು ಪೂಜಾ ಅವರೊಂದಿಗೆ ಮಾತನಾಡಿ, ಇಸ್ರೇಲ್‌ನಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಏನೇ ಇದ್ದರೂ ನನ್ನನ್ನು ಸಂಪರ್ಕಿಸಿ. ರಾಜ್ಯ ಸರ್ಕಾರ ನಿಮ್ಮ ಜೊತೆಗೆ ಇರಲಿದೆ ಎಂದು ಸಚಿವರು ಧೈರ್ಯ ಹೇಳಿದರು. ಈ ಸಂದರ್ಭದಲ್ಲಿ ಸದ್ಯ ನನಗೆ ಯಾವುದೇ ರೀತಿಯ ತೊಂದರೆ ಇಲ್ಲ ಸುರಕ್ಷಿತವಾಗಿದ್ದೇನೆ ಎಂದು ಪೂಜಾ ಅವರು ಮಾಹಿತಿ ನೀಡಿದರು. ಪೂಜಾ ಅವರು ಇಸ್ರೇಲ್ ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರಾ? ಕೈ ನಾಯಕರ ಕೆಣಕಿದ ಬೊಮ್ಮಾಯಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ