ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೆಲವಂದಿಷ್ಟು ಮಾಹಿತಿ ಕೊಟ್ಟಿದ್ದಾರೆ. ಅವು ಈ ಕೆಳಗಿನಂತಿವೆ.
ಬೆಂಗಳುರು, (ಏ.18): ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಿರುವ ಸಿಎಂ ನೇತೃತ್ವದ ರಾಜ್ಯ ಸರ್ಕಾರ, ಏಪ್ರಿಲ್ 20 ರಿಂದ ಭಾಗಶಃ ಲಾಕ್‌ಡೌನ್ ಸಡಿಲಿಕೆಯಾಗಲಿದೆ.
ಕೊರೋನಾ ವೈರಸ್ ಹೆಚ್ಚಾದ ಪ್ರದೇಶಗಳಲ್ಲಿ ಕಂಟೆನ್ಮೆಂಟ್ ಝೋನ್ ಹಾಗೂ ಲಾಕ್‌ಡೌನ್ ಸಡಿಲ ಬಗ್ಗೆ ಸಾಧಕ-ಬಾಧಕ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅವರು ಹಿರಿಯ ಅಧಿಕಾರಿಗಳೊಂದಿಗೆ ಇಂದು (ಶನಿವಾರ) ಸಭೆ ನಡೆಸಿದರು.
ನೀವು ವಾಸವಿರೋ ವಾರ್ಡ್ ಹಾಟ್ ಸ್ಪಾಟಾ? ನಾರ್ಮಲ್ಲಾ?: ತಿಳಿದುಕೊಳ್ಳಿ..!
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಟೆನ್ಮಂಟ್ ಜೋನ್ ಹೊರತುಪಡಿಸಿ ಉಳಿದ ಕಡೆ ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದ್ರೆ, ಅಂತರ್ ಜಿಲ್ಲೆಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕಂಟೈನ್ಮೆಂಟ್ ಜೋನ್ಗಳು ಸಂಪೂರ್ಣ ಬಂದ್ ಆಗಿರಲಿವೆ. ಅಂತಹ ಮನೆಗಳಿಗೆ ನಾವೇ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತೇವೆ. ಸದ್ಯಕ್ಕೆ ಯಾರಿಗೂ ಹೊಸ ಪಾಸ್ ವಿತರಣೆ ಮಾಡುವುದಿಲ್ಲ ಎಂದರು.
ಅಗತ್ಯ ವಸ್ತುಗಳ ರವಾನೆಗೆ ಯಾವುದೇ ಅಡ್ಡಿಯಿಲ್ಲ. ಮರಳು, ಜಲ್ಲಿ, ಕಬ್ಬಿಣ ಇಂತಹ ಸರಕುಗಳ ರವಾನೆಗೆ ತೊಂದರೆಯಿಲ್ಲ. ಇನ್ನು, ರಾಜ್ಯದಲ್ಲಿ ಐಟಿ ಬಿಟಿ ಕಂಪನಿಯ ಶೇಕಡಾ 30 ರಿಂದ 33 ರಷ್ಟು ನೌಕರರು ಕಚೇರಿಗೆ ತೆರಳಬಹುದು ಎಂದು ತಿಳಿಸಿದರು.
ಇನ್ನು ಬಹುಮುಖ್ಯವಾಗಿರುವ ಅಂತರ್ ಜಿಲ್ಲೆಯ ಪ್ರಯಾಣಕ್ಕೆ ಮೊದಲಿನಂತೆ ನಿರ್ಬಂಧ ಹೇರಲಾಗಿದೆ. ಮದ್ಯ ಮಾರಾಟಕ್ಕೆ ಸದ್ಯ ಅವಕಾಶವಿಲ್ಲ. ಮೇ 3ರ ನಂತರವೇ ಮದ್ಯ ಮಾರಾಟದ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದರು.
ಹಾಗಾದ್ರೆ, ಸಭೆಯಲ್ಲಿ ನಡೆದ ಚರ್ಚೆಗಳೇನು..? ಸರ್ಕಾರ ತೆಗೆದುಕೊಂಡ ನಿರ್ಧಾರಗಳೇನು.. ಎನ್ನುವ ಮುಖ್ಯಾಂಶಗಳು ಈ ಕೆಳಗಿನಂತಿವೆ.
* ಇಲ್ಲಿಯವರೆಗೆ ಪಾಸ್ ಕೊಟ್ಟಿರೋದು ಮೇ 3ರ ವರೆಗೆ ಅನುಮತಿ ಮುಂದೂಡಲಾಗಿದೆ.
* ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೆ ತೊಂದರೆ ಇಲ್ಲ...
* 20ರ ನಂತರ ಐಟಿ ಬಿಟಿ ಕೆಲಸಕ್ಕೆ ಶೇ33 ರಷ್ಟು ಅನುಮತಿ
* ಅಂತರ ಜಿಲ್ಲಾ ಓಡಾಟವಿಲ್ಲ, ಮಾಸ್ಕ ಕಡ್ಡಾಯ, ಸಮಾಜಿಕ ಅಂತರ ಕಡ್ಡಾಯ
* ಯಾವುದೇ ಕಾರಣಕ್ಕೂ ಹೊಸ ಪಾಸ ವಿತರಣೆ ಇಲ್ಲ
* ಎಂಟು ಜಿಲ್ಲೆಯಲ್ಲಿ ಮತ್ತು ಬೆಂಗಳೂರಿನಲ್ಲಿ 32 ಸ್ಥಳಗಳನ್ನ ಕಂಟೋನಮೆಂಟ್ ಸ್ಥಳ ಎಂದು ಗುರುತಿಸಲಾಗಿದೆ
* 20 ರ ನಂತರ ದ್ವಿಚಕ್ರ ವಾಹಾನ ಓಡಾಟಕ್ಕೆ ಅನುಮತಿ ನೀಡಲಾಗಿದೆ(ಅಂತರ ಜಿಲ್ಲೆಗೆ ಸಂಚಾರವಿಲ್ಲ)
* ಯಾವುದೇ ಕಾರಣಕ್ಕೂ ಮದ್ಯ ಮಾರಾಟವಿಲ್ಲ.
* ಕಟ್ಟಡ ಕಾಮಗಾರಿಗೆ ಅವಕಾಶ
* ಕಟ್ಟಡ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ (ಕರ್ಮಿಕರು ಮಾಸ್ಕ್ ಕಡ್ಡಾಯ)