ಕೋವಿಡ್​ ಲಸಿಕೆ: ಮಹತ್ವದ ಹೆಜ್ಜೆ ಇಟ್ಟ ಯಡಿಯೂರಪ್ಪ ಸರ್ಕಾರ!

By Suvarna News  |  First Published Apr 22, 2021, 10:17 PM IST

ಕೇಂದ್ರ ಸರ್ಕಾರ ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​ ಲಸಿಕೆ ಪಡೆಯುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೂಡ ಲಸಿಕೆ ಖರೀದಿಗೆ ಮುಂದಾಗಿದೆ.


ಬೆಂಗಳೂರು, (ಏ.22):1 ಕೋಟಿ ಡೋಸ್‌ ಕೊರೋನಾ ಲಸಿಕೆ ಖರೀದಿಗೆ ರಾಜ್ಯ ಸರಕಾರ ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಗುರುವಾರ) ಅನುಮೋದನೆ ನೀಡಿದ್ದಾರೆ.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​ ಲಸಿಕೆ ಪಡೆಯುವಂತೆ ಕೇಂದ್ರ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ವಿತರಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

Tap to resize

Latest Videos

undefined

18 ವರ್ಷ ಮೇಲ್ಪಟ್ಟವರು ಲಸಿಕೆ ನೋಂದಣಿ ಮಾಡಿಕೊಳ್ಳುವುದು ಹೇಗೆ? ಯಾವಾಗಿನಿಂದ?

45 ವರ್ಷ ಮೇಲ್ಪಟ್ಟವರಿಗೆ ನೀಡಲೆಂದು ಕೇಂದ್ರ ಸರಕಾರ ಉಚಿತವಾಗಿ ಲಸಿಕೆಗಳನ್ನು ರಾಜ್ಯ ಸರಕಾರಗಳಿಗೆ ಪೂರೈಸಲಿದೆ. ಆದರೆ 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ನೀಡಲಾಗುತ್ತದೆಯಾದರೂ, ಕೇಂದ್ರ ಲಸಿಕೆ ನೀಡುವುದಿಲ್ಲ.

ಇವರಿಗೆ ಒಂದೋ ಖಾಸಗಿಯವರು ಲಸಿಕೆ ನೀಡಬೇಕು; ಇದಕ್ಕೆ ಲಸಿಕೆ ಪಡೆದುಕೊಳ್ಳುವವರು ಹಣ ಪಾವತಿಸಬೇಕಾಗುತ್ತದೆ. ಅಥವಾ ರಾಜ್ಯ ಸರಕಾರಗಳು ಲಸಿಕೆ ಖರೀದಿಸಿ ಉಚಿತವಾಗಿ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ಸರ್ಕಾರ 400 ಕೋಟಿ ರೂ. ಕೊಟ್ಟು 1 ಕೋಟಿ ಡೋಸ್‌ ಲಸಿಕೆಯನ್ನು ಸೀರಂ ಇನ್ಸ್‌ಟ್ಯೂಟ್‌ನಿಂದ ಖರೀದಿಸಲು ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. 

Chief Minister has approved purchase of 1 crore doses of COVID Vaccine at a cost of Rs 400 Crores, in first phase. This will be used for vaccination of persons between 18 to 44 years.

— Dr Sudhakar K (@mla_sudhakar)
click me!