ಆಕ್ಸಿಜನ್‌ ಸರಬರಾಜು : ಮಹತ್ವದ ನಿರ್ಧಾರ ಕೈಗೊಂಡ ಸಿಎಂ ಬಿಎಸ್‌ವೈ

Kannadaprabha News   | Asianet News
Published : May 04, 2021, 09:44 AM IST
ಆಕ್ಸಿಜನ್‌ ಸರಬರಾಜು : ಮಹತ್ವದ ನಿರ್ಧಾರ ಕೈಗೊಂಡ ಸಿಎಂ ಬಿಎಸ್‌ವೈ

ಸಾರಾಂಶ

ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ನೋವುಗಳು ಹೆಚ್ಚಾಗಿವೆ. ಕೊರೋನಾವೂ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಹತ್ವದ ಆದೇಶ ಹೊರಡಿಸಿದ್ದಾರೆ. 

ಬೆಂಗಳೂರು (ಮೇ.04):  ಕೊರೋನಾ ಸೋಂಕಿತರಿಗೆ ಆಮ್ಲಜನಕ ಸಿಗದೆ ತೊಂದರೆಗೆ ಒಳಗಾಗುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಉತ್ಪಾದನೆ ಹೆಚ್ಚಳ ಮಾಡಿ ತುರ್ತು ಸರಬರಾಜು ಮಾಡುವಂತೆ ಆಮ್ಲಜನಕ ಉತ್ಪಾದಕರು ಹಾಗೂ ಸರಬರಾಜುದಾರರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಆಮ್ಲಜನಕ ಉತ್ಪಾದಕರು ಹಾಗೂ ಸರಬರಾಜು ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಆಮ್ಲಜನಕ ಉತ್ಪಾದನೆ, ಸರಬರಾಜಿನಲ್ಲಿ ಆಗುತ್ತಿರುವ ಸಮಸ್ಯೆ, ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿ, ಹೆಚ್ಚಿನ ಆಮ್ಲಜನಕ ಉತ್ಪಾದನೆಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಅವರು ಉತ್ಪಾದಕರಿಗೆ ಭರವಸೆ ನೀಡಿದರು.

ಪ್ರಮುಖವಾಗಿ ಲಭ್ಯವಿರುವ ಟ್ಯಾಂಕರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಮತ್ತು ಉತ್ಪಾದನಾ ಪ್ರಮಾಣ ಹೆಚ್ಚಳ ಮಾಡುವ ಚರ್ಚಿಸಲಾಯಿತು. ಉಳಿದಂತೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಆಕ್ಸಿಜನ್‌ ಕೋಟಾದಲ್ಲಿ ಯಾವುದೇ ರೀತಿ ಕಡಿತವಾಗದಂತೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್‌ ಟ್ಯಾಂಕರ್‌ಗಳ ಫಿಲ್ಲಿಂಗ್‌ ಅವಧಿಯನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳುವುದು. ಆಕ್ಸಿಜನ್‌ ಟ್ಯಾಂಕರ್‌ಗಳು ತಡೆ ರಹಿತ ಪ್ರಯಾಣಕ್ಕಾಗಿ ಹಸಿರು ಕಾರಿಡಾರ್‌ಗಳನ್ನು ಒದಗಿಸುವುದು. ಟೋಲ್‌ಗಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಟೋಲ್‌ಗಳಿಗೆ ನಿರ್ದೇಶನ ನೀಡುವುದು. ನೈಟ್ರೋಜನ್‌, ಆರ್ಗನ್‌ ಅನಿಲಗಳ ಸಾಗಣೆ ಟ್ಯಾಂಕರ್‌ಗಳನ್ನು ಆಕ್ಸಿಜನ್‌ ಸಾಗಣೆಗೆ ಪರಿವರ್ತಿಸಲು ಕ್ರಮ ವಹಿಸಲು ನಿರ್ಧರಿಸಲಾಯಿತು.

ಕೊರೋನಾ ಸಂಕಷ್ಟದಿಂದ ತುರ್ತು ಕ್ಯಾಬಿನೆಟ್ ಸಭೆ ಕರೆದ ಮುಖ್ಯಮಂತ್ರಿ; ಮಹತ್ವದ ನಿರ್ಧಾರ! ...

ತುರ್ತು ಅಗತ್ಯಕ್ಕಾಗಿ ಆಕ್ಸಿಜನ್‌ ವಾಹನಗಳ ಚಾಲನೆಗಾಗಿ ಎಲ್‌ಪಿಜಿ ಟ್ಯಾಂಕರ್‌ಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು ಅಗತ್ಯವಿದ್ದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು. ಆಕ್ಸಿಜನ್‌ ಉತ್ಪಾದಕರು ಮತ್ತು ಸರಬರಾಜುದಾರರು ಆಕ್ಸಿಜನ್‌ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಿಯೋಜಿಸಲ್ಪಟ್ಟಅಧಿಕಾರಿಗೆ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಡೆರಹಿತವಾಗಿ ಆಕ್ಸಿಜನ್‌ ಪೂರೈಕೆ ಮಾಡಬೇಕು. ಲಭ್ಯವಿರುವ ಟ್ಯಾಂಕರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಸೂಚಿಸಲಾಯಿತು.

ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ಆಮ್ಲಜನಕ ಉತ್ಪಾದಕ ಕಂಪನಿಗಳಾದ ಬಳ್ಳಾರಿಯ ಜೆಎಸ್‌ಡಬ್ಲ್ಯು ಇಂಡಸ್ಟ್ರೀಯಲ್‌ ಗ್ಯಾಸಸ್‌, ಮಹದೇವಪುರದ ಭೋರುಕ ಗ್ಯಾಸ್‌, ಪ್ರಾಕ್ಷೈರ್‌ ಇಂಡಿಯಾ ಲಿ., ಯೂನಿವರ್ಸಲ್‌ ಏರ್‌ ಪ್ರಾಡಕ್ಟ್, ಏರ್‌ ವಾಟರ್‌ ಇಂಡಿಯಾ ಲಿ., ಐನಾಕ್ಸ್‌ ಬೆಲಾಕ್ಷಿ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!