ಬಿಪಿಎಲ್‌ ಕಾರ್ಡ್‌ ತಕ್ಷಣ ವಾಪಸ್‌ ಮಾಡಲು ಸಿಎಂ ಸ್ಪಷ್ಟನೆ

By Kannadaprabha NewsFirst Published Feb 17, 2021, 9:14 AM IST
Highlights

ಬಿಪಿಎಲ್ ಕಾರ್ಡ್ ಬಳಕೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಕ್ಷಣವೇ ವಾಪಸ್ ಮಾಡುವಂತೆ ಆದೇಶಿಸಿದ್ದಾರೆ. 

ಶಿವ​ಮೊ​ಗ್ಗ (ಫೆ.17): ಬಿಪಿ​ಎಲ್‌ ಕಾರ್ಡ್‌ ವಿಚಾರ​ವಾಗಿ ಸರ್ಕಾರದ ನೀತಿ​ಯಲ್ಲಿ ಯಾವುದೇ ಬದ​ಲಾ​ವಣೆ ಇಲ್ಲ ಎಂದು ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಸ್ಪಷ್ಟಪಡಿ​ಸಿ​ದ್ದಾರೆ. ಆದರೆ, ಬಡ​ವರ ಹೆಸ​ರಲ್ಲಿ ಶ್ರೀಮಂತರು ಮಾತ್ರ ಬಿಪಿ​ಎಲ್‌ ಕಾರ್ಡ್‌ ಸೌಲಭ್ಯ ಪಡೆ​ಯು​ವು​ದನ್ನು ತಪ್ಪಿ​ಸಲು ಕ್ರಮ ಕೈಗೊ​ಳ್ಳು​ವಂತೆ ಅಧಿ​ಕಾ​ರಿ​ಗ​ಳಿಗೆ ಸೂಚಿಸಿ​ದ್ದೇನೆ ಎಂದು ತಿಳಿ​ಸಿ​ದ್ದಾ​ರೆ.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ಬಿಪಿ​ಎಲ್‌ ಸೌಲಭ್ಯ ಕೇವಲ ಬಡವರಿಗೆ ಮಾತ್ರ ಸಿಗಬೇಕು. ಆದರೆ ಬಡ​ವರ ಹೆಸ​ರಲ್ಲಿ ಶ್ರೀಮಂತರು ಬಿಪಿಎಲ್‌ ಕಾರ್ಡ್‌ ಸೌಲಭ್ಯ ಪಡೆಯುವುದು ತಪ್ಪ​ಬೇಕು. ಕಾನೂನುಬಾಹಿರವಾಗಿ ಬಿಪಿಎಲ್‌ ಕಾರ್ಡ್‌ ಪಡೆದವರು ಸ್ವಯಂಪ್ರೇರಿತವಾಗಿ ಅದನ್ನು ತಕ್ಷಣ ವಾಪಸ್‌ ಮಾಡಬೇಕು. ಇಲ್ಲದಿದ್ದರೆ ಗುರುತಿಸಿ ಹಣ ವಸೂಲು ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬಿಪಿಎಲ್‌ ಕಾರ್ಡ್‌ಗೆ ಈಗ ಜಾರಿಯಲ್ಲಿರುವ ಮಾನದಂಡಗಳೇ ಮುಂದುವರಿಯುತ್ತೆ: ಕತ್ತಿ ಸ್ಪಷ್ಟನೆ ..

ಏರ್ಪೋರ್ಟ್‌ ವರ್ಷದೊಳಗೆ ಆರಂಭ:  ಇಲ್ಲಿನ ಹೊರವಲಯದ ಸೋಗಾನೆಯಲ್ಲಿ .384 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ವರ್ಷದ ಒಳಗಾಗಿ ಕಾರ್ಯಾರಂಭವಾಗುವ ನಿರೀಕ್ಷೆಯಿದೆ ಎಂದು ದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ಮೊದಲ ಹಂತದಲ್ಲಿ ರನ್‌ವೇ ಮತ್ತು ಕಾಂಪೌಂಡ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 2ನೇ ಹಂತದಲ್ಲಿ ಟರ್ಮಿನಲ್‌ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕಿದ್ದು, ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಾ ಕಾಮಗಾರಿಗಳನ್ನು ಜತೆಯಾಗಿಯೆ ನಡೆಸಲು ಸೂಚನೆ ನೀಡಲಾಗಿದ್ದು, ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ನಿಲ್ದಾಣ ಕಾಮಗಾರಿ ನಿರೀಕ್ಷೆಯಂತೆ ತ್ವರಿತವಾಗಿ ನಡೆಯುತ್ತಿದ್ದು, ಇನ್ನಷ್ಟುವೇಗವಾಗಿ ಯೋಜನೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಎರಡು ತಿಂಗಳ ಬಳಿಕ ಮತ್ತೆ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸುತ್ತೇನೆ. ಇದು ಪೂರ್ಣ ಪ್ರಮಾಣದ ವಿಮಾನ ನಿಲ್ದಾಣವಾಗಿದ್ದು, ರಾತ್ರಿಯೂ ವಿಮಾನಗಳ ಇಳಿಯುವಿಕೆಗೂ ವ್ಯವಸ್ಥೆ ಕಲ್ಪಿಸಲಾಗುವುದು. ವಿಮಾನ ನಿಲ್ದಾಣದಿಂದಾಗಿ ಈ ಭಾಗದ ಕೈಗಾರಿಕಾ ಬೆಳವಣಿಗೆಗೆ ಅನು​ಕೂ​ಲ​ವಾ​ಗ​ಲಿದೆ ಎಂದರು.

click me!