ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆ ಹೇಗಿರಲಿದೆ : ಸಿಎಂ ಸಭೆ

Suvarna News   | Asianet News
Published : Sep 03, 2021, 03:01 PM IST
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆ ಹೇಗಿರಲಿದೆ : ಸಿಎಂ ಸಭೆ

ಸಾರಾಂಶ

ಈ ಬಾರಿ ಮೈಸೂರು ದಸರಾ ಆಚರಣೆ ಹೇಗಿರಬೇಕು ಎನ್ನುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಪೂರ್ವಸಿದ್ಧತಾ ಸಭೆ    ಇಂದು ಸಂಜೆ 4 ಘಂಟೆಗೆ ವಿಧಾನಸೌಧದ ಸಮ್ಮೇಳನ ಕೊಠಡಿಯಲ್ಲಿ ಸಭೆ ನಿಗದಿ

ಬೆಂಗಳೂರು (ಸೆ.03) : ಈ ಬಾರಿ ಮೈಸೂರು ದಸರಾ ಆಚರಣೆ ಹೇಗಿರಬೇಕು ಎನ್ನುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಪೂರ್ವಸಿದ್ಧತಾ ಸಭೆ  ನಡೆಯಲಿದೆ.

 ಇಂದು ಸಂಜೆ 4 ಘಂಟೆಗೆ ವಿಧಾನಸೌಧದ ಸಮ್ಮೇಳನ ಕೊಠಡಿಯಲ್ಲಿ ಸಭೆ ನಿಗದಿಯಾಗಿದೆ.  ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ‌.ರವಿಕುಮಾರ್, ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಡಾ.ಕೆ. ಸುಧಾಕರ್ ಸೇರಿದಂತೆ ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು ಭಾಗಿಯಾಗಿ ದಸರಾ ಆಚರಣೆ ಹೇಗಿರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಈಗಾಗಲೇ, ಸಾರ್ವಜನಿಕ ಗಣೇಶೋತ್ಸವ ಹಾಗೂ ದಸರಾ ಆಚರಣೆ ಸಂಬಂಧ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಿಂದ ಸರ್ಕಾರಕ್ಕೆ ವರದಿಯ ಮೂಲಕ ಶಿಫಾರಸ್ಸು ರವಾನೆಯಾಗಿದ್ದು, ಹಲವು ರೀತಿಯ ಸಲಹೆಗಳನ್ನು ನೀಡಿದ್ದಾರೆ.  ಸಲಹೆ ಶಿಫಾರಸುಗಳ ಆಧಾರದಲ್ಲಿ ನಿರ್ಧಾರವಾಗಲಿದೆ.

ಈ ಬಾರಿಯೂ ಸರಳ ದಸರಾ ಆಚರಣೆಗೆ ಚಿಂತನೆ: ಎಸ್.ಟಿ. ಸೋಮಶೇಖರ್

ಇನ್ನು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ದಸರಾ ಆಚರಣೆಯ ಹಿನ್ನೆಲೆಯಲ್ಲಿ  ಮಾಡಿದ ಶಿಫಾರಸುಗಳು 

1. ನವರಾತ್ರಿ ಆಚರಣೆ ಮಾಡಲು ಜನಜಂಗುಳಿ ಸೇರಿಸುವುದು ಬೇಡ.

2. ಕೇರಳದಲ್ಲಿ ಓಣಂ ಆಚರಣೆ ಮಾಡಿದ ಮೇಲೆಯೇ ಕೊರೊನಾ ವೈರಸ್‌ನ ಹರಡುವಿಕೆ ಮತ್ತೆ ಹೆಚ್ಚಾಗಿದ್ದನ್ನು ಗಮನದಲ್ಲಿಟ್ಟುಕೊಂಡು ದಸರಾ ಆಚರಣೆ ಎಚ್ಚರಿಕೆಯಿಂದ ಆಚರಿಸಬೇಕು.

3. ನಾಡಹಬ್ಬ ದಸರಾ ಆಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ಇಲ್ಲವಾದ್ರೆ, ರಾಜ್ಯದಲ್ಲೂ ಕೊರೋನಾ ಸ್ಫೋಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

4. ಈ ನಿಟ್ಟಿನಲ್ಲಿ ಅನಗತ್ಯ ವಿಜೃಂಭಣೆಗೆ ಈ ಬಾರಿಯು ಬ್ರೇಕ್ ಹಾಕುವುದು ಒಳಿತು.

5. ಯುವ ದಸರಾ ಆಚರಣೆ ಬೇಡ.

6. ಸಂಜೆಯ ವೇಳೆಯಲ್ಲಿ ನವರಾತ್ರಿಯಲ್ಲಿ ಆಯೋಜನೆಯಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮಾಡಬೇಕು.

7. ಕವಿಗೋಷ್ಠಿ, ಸಾಹಿತ್ಯ ಆಸಕ್ತರಿಗೆ ಆಯೋಜನೆಯಾಗುವ ಕಾರ್ಯಕ್ರಮಗಳು ನಿರ್ಬಂಧ.

8. ಮೈಸೂರು ಅರಸರು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಖಾಸಗಿ ದರ್ಬಾರ್‌ಗೆ ಮಾತ್ರ ಅವಕಾಶ. ಅಂಬಾರಿಯ ಮೆರವಣಿಗೆಗೆ ನಿಗದಿತ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡುವುದು. 

9. ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಈ ಸಂದರ್ಭದಲ್ಲಿ ಬರುವ ಪ್ರವಾಸಿಗರಿಗೆ ಬೆಟ್ಟದಲ್ಲಿ ಸಮಯ ನಿಗದಿಪಡಿಸಿ, ದರ್ಶನಕ್ಕೆ ಅನುವು ಮಾಡಿಕೊಡಿ‌. ಸಾಧ್ಯವಾದ್ರೆ, ದಸರಾ ಆಚರಣೆಯ ಸಂದರ್ಭದಲ್ಲಿ ನವರಾತ್ರಿಯಲ್ಲಿ ಮೈಸೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗೆ ರಾತ್ರಿ 8 ಘಂಟೆಯ ಬಳಿಕ ನೈಟ್ ಕರ್ಫ್ಯೂ ಜಾರಿಗೊಳಿಸಿದ್ರೆ ಉತ್ತಮ. 

10. ಯಾರೇ ಪ್ರವಾಸಿಗರು, ರಾಜ್ಯದ ಯಾವುದೇ ಭಾಗದಿಂದ ಬರುತ್ತಾರೆ ಅಂದರೆ, ಅವರಿಗೆ ಕೊರೋನಾ ಪರೀಕ್ಷೆಯ ಫಲಿತಾಂಶ ಕಡ್ಡಾಯಗೊಳಿಸಿ.

11. ಮೈಸೂರಿನ ನಗರ ಭಾಗಗಳಲ್ಲಿ ಮೊಬೈಲ್ ಪರೀಕ್ಷಾ ಕೇಂದ್ರಗಳು ತೆರೆಯುವುದು. ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪರೀಕ್ಷಾ ಕೇಂದ್ರಗಳ ನಿರ್ಮಾಣ ಮಾಡಬೇಕು. 

12. ಮೈಸೂರಿನ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ನವರಾತ್ರಿ ಆಚರಣೆ ವೇಳೆ ನಿರ್ಬಂಧ ಜಾರಿಗೊಳಿಸಿ.

13. ಇನ್ನು ದಸರಾ ಸಂದರ್ಭದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು, ಅಂಗಡಿ ಮುಗ್ಗಟ್ಟು ಹಾಕಿಕೊಳ್ಳುತ್ತಾರೆ. ಇದನ್ನು ಕೂಡ ನಿರ್ಬಂಧಿಸಿ. ಫುಡ್ ಕ್ಯಾಂಪ್‌ಗಳನ್ನು ಬಂದ್ ಮಾಡಿಸಿ. 

14. ಕೊರೋನಾ ಪರೀಕ್ಷೆಯ ಜೊತೆಗೆ ಲಸಿಕೆ ತೆಗೆದುಕೊಂಡಿದ್ದು ಬಂದಿದ್ದರೆ ಬಹಳ ಒಳಿತು.

15. ಹಿರಿಯ ನಾಗರಿಕರು ಹಾಗೂ 5 ವರ್ಷದ ಕೆಳಗಿನವರಿಗೆ ದಸರೆಗೆ ಬರುವುದನ್ನು ನಿಷಿದ್ಧಗೊಳಿಸಿ.
  
ಈ ಎಲ್ಲಾ ಅಂಶಗಳ ಬಗ್ಗೆ ಇಂದಿನ ಸಭೆಯಲ್ಲಿ ‌ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ