ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಭಾಕರ ಕೋರೆ: ಸಿಎಂ ಬೊಮ್ಮಾಯಿ

Published : Oct 16, 2022, 03:27 AM IST
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಭಾಕರ ಕೋರೆ: ಸಿಎಂ ಬೊಮ್ಮಾಯಿ

ಸಾರಾಂಶ

ಮುಂಬೈ ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಗಮನಾರ್ಹ ಕಾರ್ಯನಿರ್ವಹಿಸುವಲ್ಲಿ ಸಮಯ ಕೊಡುವ ಡಾ. ಪ್ರಭಾಕರ ಕೋರೆ ಅವರು, ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ನೀಡಿದ್ದರೆ ಅತ್ಯಂತ ಪ್ರಭಾವಿ ನಾಯಕರಾಗುತ್ತಿದ್ದರು. 

ಬೆಳಗಾವಿ (ಅ.16): ಮುಂಬೈ ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಗಮನಾರ್ಹ ಕಾರ್ಯನಿರ್ವಹಿಸುವಲ್ಲಿ ಸಮಯ ಕೊಡುವ ಡಾ. ಪ್ರಭಾಕರ ಕೋರೆ ಅವರು, ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ನೀಡಿದ್ದರೆ ಅತ್ಯಂತ ಪ್ರಭಾವಿ ನಾಯಕರಾಗುತ್ತಿದ್ದರು. ಆದರೆ ಕೋರೆ ಅವರು ಅದನ್ನು ಕಡೆಗಣಿಸಿ ತಾನೊಬ್ಬ ನಾಯಕನಾಗದೇ ಕೆಎಲ್‌ಇ ಸಂಸ್ಥೆ ಮೂಲಕ ನಾಯಕರನ್ನು ಬೆಳೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮ್ಮ ಬುದ್ಧಿ ಶಕ್ತಿಯಿಂದ ಎದುರಾದ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ವ ಸ್ವತಂತ್ರ ಸಂಸ್ಥೆಯಾಗಿ ಕೆಎಲ್‌ಇ ಬೆಳೆಸಿದ್ದಾರೆ ಎಂದರು. ಕೆಎಲ್‌ಇ ಸಂಸ್ಥೆ ದೇಶದಲ್ಲೇ ದೊಡ್ಡ ವಿವಿಯಾಗಿ ಪರಿವರ್ತನೆಯಾಗಿದೆ. ಗ್ರಾಮೀಣ ಬಡ ಜನರಿಗೆ ಶಿಕ್ಷಣ ಒದಗಿಸುವುದು ಕೋರೆ ಅವರ ಮುಖ್ಯ ಗುರಿಯಾಗಿತ್ತು. ತಮ್ಮ ರಾಜಕೀಯ ಜೀವನ ತ್ಯಾಗದ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿ ಈ ಸಾಧನೆಯ ಶಿಖರವನ್ನು ಏರಿದ್ದಾರೆ. ಸರ್ಕಾರ ಮಾಡುವ ಅನೇಕ ಕೆಲಸಗಳನ್ನು ಕೆಎಲ್‌ಇ ಮಾಡಿದೆ. ಈ ಸಂಸ್ಥೆಯ ಪ್ರೇರಣೆಯಿಂದ ಅನೇಕ ಸೊಸೈಟಿ, ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿ ಉತ್ತಮ ಸೇವೆ ನೀಡುತ್ತಿವೆ. ಪ್ರಭಾಕರ ಕೋರೆ ಅವರು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ ಎಂದರು.

ಗೋವು ದತ್ತು ಸ್ಕೀಂಗೆ ಸರ್ಕಾರಿ ನೌಕರರಿಂದ 100 ಕೋಟಿ : ‘ಪುಣ್ಯಕೋಟಿ ದತ್ತು ಯೋಜನೆ’ಗೆ ಬಲ

ಕೇಂದ್ರ ಶಿಕ್ಷಣ ಹಾಗೂ ಉದ್ಯಮಶೀಲ ಮತ್ತು ಕೌಶಲ ಸಚಿವ ಧಮೇಂದ್ರ ಪ್ರಧಾನ್‌ ಮಾತನಾಡಿ, ಕೋರೆ ಅವರು ಓರ್ವ ಜೀವಂತ ವಿವಿ. 4 ದಶಕಗಳಿಂದ ಕೆಎಲ್‌ಇ ಮೂಲಕ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಎಲ್‌ಇಯ ಹೆಸರನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಈಗ ರಚಿಸಲಾಗಿದೆ. ಆದರೆ, 1000 ವರ್ಷಗಳ ಮೊದಲೇ ಈ ನೀತಿಗಳು ಅದರಲ್ಲಿ ಇದ್ದವು ಎಂದರು. ಬಸವಣ್ಣವರು ವಚನಗಳ ಮೂಲಕ ಕ್ರಾಂತ್ರಿ ಮೂಡಿಸಿದ ನೆಲದಲ್ಲಿ ಕೋರೆ ಅವರು ಶಿಕ್ಷಣ ಹಾಗೂ ಆರೋಗ್ಯದ ಮೂಲಕ ಕ್ರಾಂತಿ ಮೂಡಿಸುತ್ತಿದ್ದಾರೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ನಿಜವಾದ ಸತ್ಪರುಷರು ಎಂದರೆ, ಮಾತು, ಮನಸ್ಸು ಮತ್ತು ಕೃತಿಯಲ್ಲಿ ಒಂದೇ ಆಗಿರುವವರು. ಡಾ. ಪ್ರಭಾಕರ ಕೋರೆ ಅವರು ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದರು. ಈ ಹಿಂದೆ ಕೆಎಲ್‌ಇ ಸಂಸ್ಥಗೆ ಪ್ರಧಾನಿ ಮೋದಿ ಅವರು ಆಗಮಿಸಿದ್ದ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯಿಂದ ಓಲಂಪಿಕ್ಸ್‌ಗೆ ಕನಿಷ್ಠ ನಾಲ್ಕು ಜನರನ್ನಾದರೂ ಕಳುಹಿಸುವಂತೆ ತರಬೇತಿ ನೀಡುವಂತೆ ತಿಳಿಸಿದ್ದರು. ಮೋದಿ ಅವರ ಮಾತಿನಂತೆ ಓಲಂಪಿಕ್ಸ್‌ಗೆ ಕಳುಹಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ, ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಕೆ ಪಾಟೀಲ ಸೇರಿದಂತೆ ಇನ್ನೀತರರು ಮಾತನಾಡಿ, ಕೋರೆ ಅವರೊಂದಗಿನ ಒಡನಾಟವನ್ನು ಸ್ಮರಿಸಿ ಶುಭ ಹಾರೈಯಿಸಿದರು.ಇದೇ ಸಂದರ್ಭದಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ ಗ್ರಂಥ, ಪುಸ್ತಕಗಳ ತುಲಾಭಾರ ಮಾಡಲಾಯಿತು. ಡಾ.ಪ್ರಭಾಕರ ಕೋರೆ 75ನೇ ಅಮೃತ ಮಹೋತ್ಸವ ಅಂಗವಾಗಿ ಅವರ ಜೀವನ ಚರಿತ್ರೆ, ವಿವಿಧ ಕ್ಷೇತ್ರಗಳಲ್ಲಿ ಸಾಧೆಗೈದ ಕುರಿತು ಅನನ್ಯ ಸಾಧನೆ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ.ಪ್ರಭಾಕರ ಕೋರೆ ಹಾಗೂ ಪತ್ನಿ ಆಶಾ ಕೋರೆ ಅವರಿಗೆ ಗೌರವಿಸಿ, ಸನ್ಮಾನಿಸಿದರು.

ಈ ಸಮಾರಂಭದಲ್ಲಿ ಸಚಿವರಾದ ಬಿ.ಸಿ ನಾಗೇಶ, ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಲಕ್ಷ್ಮಣ ಸವದಿ, ಸೊಲ್ಲಾಪುರ ಸಂಸದ ಶ್ರೀ ಜಯಸಿದ್ದೇಶ್ವರ ಸ್ವಾಮಿಜಿ, ಸಂಸದರಾದ ಮಂಗಳಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಶ್ರೀಮಂತ ಪಾಟೀಲ, ಪ್ರಭಾಕರ ಕೋರೆ ಅವದ ಧರ್ಮಪತ್ನಿ ಆಶಾ ಕೋರೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ನಗರ ಪೊಲೀಸ್‌ ಆಯುಕ್ತ ಡಾ.ಎಂ. ಬಿ ಬೋರಲಿಂಗಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಸ್ವಾಗತಿಸಿದರು, ಮಹಾಂತೇಶ ಕವಟಗಿಮಠ ಪ್ರಸ್ತಾವಿಕವಾಗಿ ಮಾತನಾಡಿದರು.

ಸರ್ಕಾರದ ಸಹಯೋಗದಲ್ಲಿ ರೈತ ಮಕ್ಕಳಿಗೆ ಉಚಿತ ಶಿಕ್ಷಣ: ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ .ಪ್ರಭಾಕರ ಕೋರೆ ಅವರು, ದೇಶ, ವಿದೇಶದಲ್ಲಿ ನಡೆಯುತ್ತಿರುವ ಬಹುದೊಡ್ಡ ಚಿಕಿತ್ಸೆಗಳಾದ ಮೂತ್ರಪಿಂಡ, ಹೃದಯ ಕಸಿ ಮಾಡುವಷ್ಟುದೊಡ್ಡ ಆಸ್ಪತ್ರೆಯಾಗಿ ಕೆ.ಎಲ್‌.ಇ ಆಸ್ಪತ್ರೆ ಸಾಧನೆ ಮಾಡಿದೆ. ಜಗತ್ತಿನಲ್ಲಿ ಯಾವುದೇ ಹೊಸ ತಂತ್ರಜ್ಞಾನ ಬಂದರೂ ಅದನ್ನು ಕೆಎಲ್‌ಇ ಆಸ್ಪತ್ರೆಯಲ್ಲಿ ತರಲಾಗುವುದು ಎಂದು ತಿಳಿಸಿದರು.ರಾಜಕೀಯ ವಲಯದಲ್ಲಿ ನನ್ನ ಬೆಳವಣಿಗೆ ಬದಿಗೊತ್ತಿ ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ನಾನು ಕೆ.ಎಲ್‌.ಇ ಸೊಸೈಟಿಗೆ ಉನ್ನತಿಗೆ ಹೆಚ್ಚು ಒತ್ತು ನೀಡಿದೆ. 

ಪ್ರಾರಂಭ ಹಂತದಲ್ಲಿ 300 ಹಾಸಿಗೆಯುಳ್ಳ ಆಸ್ಪತ್ರೆ ಪ್ರಾರಂಭಿಸಿ ಈಗ 2400 ಹಾಸಿಗೆಯುಳ್ಳ ಆಸ್ಪತ್ರೆಯಾಗಿ ಮಾರ್ಪಾಡಾಗಿದೆ. ಅನೇಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ನೀಡಲಾಗುತ್ತಿದೆ. ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ 1000 ಸಾವಿರ ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲಾಗುವದು. ಈ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆ ಇರುವುದರಿಂದ ಅನುಕೂಲ ಆಗುವ ನಿಟ್ಟಿನಲ್ಲಿ ನಿಜಲಿಂಗಪ್ಪ ಸಕ್ಕರೆ ಸಂಶೋಧನೆ ಕಾರ್ಖಾನೆ ನಿರ್ಮಾಣ ಮಾಡಲಾಯಿತು ಎಂದು ಹೇಳಿದರು. ಇಂದಿನ ದಿನ ನಮ್ಮ ಬದುಕಿನ ಅತ್ಯಂತ ಮಹತ್ವದ ದಿನವಾಗಿದೆ. ತಮ್ಮ ಸಾಧನೆಗೆ ತಂದೆ ತಾಯಿ ಹಿರಿಯ ಸಹೋದರ ಚಿದಾನಂದ ಕೋರೆ ಅವರು ಕಾರಣ ಎಂದು ಸ್ಮರಿಸಿದರು.

ಚರ್ಮಗಂಟು ರೋಗ ತಡೆಗೆ 13 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ ಸೂಚನೆ

ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಉದ್ದೇಶದಿಂದ ಕೆಎಲ್‌ಇ ಸಂಸ್ಥೆಯ ಸಭಾಂಗಣವನ್ನು ನೀಡುವುದರ ಜತೆಗೆ ವಿದ್ಯಾರ್ಥಿಗಳ ರಜೆ ನೀಡಿ, ಸಿಬ್ಬಂದಿಯನ್ನು ಅಧಿವೇಶನ ಕಾರ್ಯಕ್ಕೆ ನಿಯೋಜನೆ ಮಾಡಿದ್ದರು. ಡಾ.ಕೋರೆ ಅವರು ಓರ್ವ ಪಕ್ಷಾತೀತ, ಧರ್ಮಾತೀತ, ಜಾತ್ಯತೀತ ಹಿತೈಷಿಗಳನ್ನು ಹೊಂದಿದ್ದಲ್ಲದೆ ಎಲ್ಲರನ್ನೂ ಸಮಾನತೆಯಿಂದ ಕಾಣುವ ವ್ಯಕ್ತಿತ್ವ ಹೊಂದಿದ್ದಾರೆ. ಮುಂಬರುವ ದಿನಗಳಲ್ಲಿ ಕೆಎಲ್‌ಇ ಸಂಸ್ಥೆ ಬಡವರಿಗೆ ಉಚಿತ ಶಿಕ್ಷಣ, ಆರೋಗ್ಯ ನೀಡುವಂತಾಗಲಿ. ಡಾ.ಪ್ರಭಾಕರ ಕೋರೆ ಅವರ ಅಧಿಕಾರವಧಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕು. ಅವರು ಕೇವಲ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಅಲ್ಲ. ಸಮಾಜದ ಏಳ್ಗೆಗೆ ಶ್ರಮಿಸುವವರು. ಅವರ ಈ ಸೇವೆ ಅಪ್ರತಿಮ. ದೇವರು ಅವರಿಗೆ ಇನ್ನಷ್ಟುಸೇವೆ ಸಲ್ಲಿಸಲು ಆಯೂರಾರೋಗ್ಯ ನೀಡಲಿ.
- ಬಿ.ಎಸ್‌ ಯಡಿಯೂರಪ್ಪ, ಮಾಜಿ ಸಿಎಂ

ಕೆಎಲ್‌ಇ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಹೆಸರುವಾಸಿಯಾಗಿ ಈಗ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಗ್ರವಾಗಿದೆ. ಪಿಎಂ ಮೋದಿ ಅವರ ನವಭಾರತದ ಕನಸನ್ನು ಕೆಎಲ್‌ಇ ಸಂಸ್ಥೆಯ ಮೂಲಕ ಡಾ. ಪ್ರಭಾಕರ ಕೋರೆ ನನಸು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೆಎಲ್‌ಇ ಸಂಸ್ಥೆ ಇನ್ನಷ್ಟು ಹೆಸರುಗಳಿಸಲಿ.
- ಪ್ರಮೋದ ಸಾವಂತ, ಗೋವಾ ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ