
ನವದೆಹಲಿ (ಮೇ.01): ನಾನು ಬಹಳ ಸರಳವಾಗಿ ಆಡಳಿತ ಮಾಡಿದಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಇಷ್ಟು ತೊಂದರೆಯಾಗಿದೆ. ಇನ್ನು ಬಿರುಸಾಗಿ ಆಡಳಿತ ಮಾಡಿದರೆ ಅವರಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ‘ನನ್ನ ಆಡಳಿತದಲ್ಲಿ ಅವರಿಗೆ ಸಾಕಷ್ಟು ತೊಂದರೆಯಾಗಿದೆ. ಏನೇನೋ ಪ್ರಯತ್ನಗಳನ್ನು ಮಾಡಿದರು. ಯಾವುದೂ ಯಶಸ್ವಿಯಾಗಲಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ತನಿಖೆಗೆ ಒಂದು ವ್ಯವಸ್ಥೆ ಇದೆ. ಕಾನೂನಿನ ಪ್ರಕಾರವೇ ಆಗಬೇಕು. ನಿಮಗೆ ಅದನ್ನು ಎದುರಿಸಲು ತಾಕತ್ತು ಇಲ್ಲ ಎಂದರೆ ಈ ರೀತಿ ದಿಕ್ಕು ಬದಲಾಯಿಸಬಾರದು. ನೀವೇನೋ ಮಾಹಿತಿಯನ್ನು ಹೇಳಿದ್ದೀರಿ. ಅದರ ಪೂರ್ಣ ಮಾಹಿತಿಯನ್ನು ಕೊಡಿ ಎಂದಷ್ಟೇ ಕೇಳಿದ್ದೇವೆ. ಅದಕ್ಕಾಗಿ ಇಷ್ಟುವಾದವಿವಾದ ಮಾಡುವ ಅಗತ್ಯವಿಲ್ಲ. ತನಿಖೆಯಲ್ಲಿ ಯಾರ ಹೆಸರು ಬಂದರೂ ತನಿಖೆ ಮಾಡಬೇಕಾಗುತ್ತದೆ. ಹಿಂದೆಯೂ ಈ ರೀತಿಯಾಗಿದೆ. ಆದ್ದರಿಂದ ಕಾಂಗ್ರೆಸ್‌ನವರು ಹಿಟ್ ಆ್ಯಂಡ್ ರನ್ ಮಾಡಲಾಗುವುದಿಲ್ಲ ಎಂದರು.
'ಶಿಗ್ಗಾವಿ ತಾಲ್ಲೂಕನ್ನು ಭಾರತದ ಟೆಕ್ಸ್ ಟೈಲ್ & ಸಿದ್ದಉಡುಪು ಹಬ್ ಆಗಿಸುವ ಕನಸು'
ಹೈಕಮಾಂಡ್‌ನತ್ತ ಬೊಟ್ಟು ಮಾಡಿದ ಸಿಎಂ: ಕುಂದಾನಗರಿ ಬೆಳಗಾವಿಗೆ ನಿನ್ನೆ(ಗುರುವಾರ) ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಆರ್‌ಎಸ್ಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಜಗನ್ನಾಥ ರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದ್ರು. ಆದ್ರೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತುಟಿಬಿಚ್ಚದ ಸಿಎಂ ಹೈಕಮಾಂಡ್‌ನತ್ತ ಬೊಟ್ಟು ಮಾಡಿ ಜಾರಿಕೊಂಡಿದ್ದಾರೆ. ಇಂದು(ಶುಕ್ರವಾರ) ರಾತ್ರಿ ಸಿಎಂ ದೆಹಲಿಗೆ ತೆರಳುತ್ತಿದ್ದು ಇತ್ತ ಸಚಿವಾಕಾಂಕ್ಷಿಗಳಿಗೆ ಢವಢವ ಶುರುವಾಗಿದೆ. ಬೆಳಗಾವಿಯ ಆರ್‌ಎಸ್ಎಸ್ ಕಚೇರಿ ಬಳಿ ಜನಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜಗನ್ನಾಥ ರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನ ನಿರ್ಮಾಣದ ಭೂಮಿ ಪೂಜೆ ನೇರವೇರಿಸಿದರು. ಇದಕ್ಕೂ ಮುನ್ನ ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳು, ರೈತ ಸಂಘಟನೆಗಳ ಮನವಿ ಸ್ವೀಕರಿಸಿದರು. ರಾಗಿ, ಜೋಳದ ಖರೀದಿ ಕೇಂದ್ರ ತೆರೆಯುವಂತೆ ರೈತ ಮುಖಂಡರು ಸಿಎಂ ಬಳಿ ಮನವಿ ಮಾಡಿದರು.
ಮತ್ತೊಂದೆಡೆ ಹಲಗಾ-ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಹಲಗಾ ಮಚ್ಛೆ ಭಾಗದ ರೈತರು ಮನವಿ ಮಾಡಿದರು. ಅಭಿವೃದ್ಧಿ ದೃಷ್ಟಿಯಿಂದ ಕಾಮಗಾರಿ ನಿಲ್ಲಿಸಲು ಆಗಲ್ಲಾ. ಅದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆ ಮಾಡೋಣ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬೆಳಗಾವಿಯ ಶಾಸಕರಿಗೆ ಸ್ಥಾನಮಾನ ವಿಚಾರವಾಗಿ ಪ್ರತಿಕ್ರಿಯಿಸಿ, 'ಬೆಳಗಾವಿ ವಿಸ್ತೃತ ಜಿಲ್ಲೆ, ದೊಡ್ಡ ಜಿಲ್ಲೆ, ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ದೆಹಲಿಗೆ ಹೋಗುತ್ತಿದ್ದೇನೆ. ಚೀಫ್ ಜಸ್ಟಿಸ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಕೂಡಲೇ ವಾಪಸ್ ಬರ್ತಿನಿ ಯಾವತ್ತು ಹೈಕಮಾಂಡ್ ಚರ್ಚೆ ಮಾಡ್ತದೆ, ಏನ್ ಚರ್ಚೆ ಆಗುತ್ತೆ ನಿರ್ಣಯ ಆದ ತಕ್ಷಣ ತಮಗೆಲ್ಲ ಮಾಹಿತಿ ಒದಗಿಸುವೆ ಎಂದರು.
Covid 19 Spike: ಅನಗತ್ಯವಾಗಿ ಕಠಿಣ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ
ಇನ್ನು 4 ವಾರದಲ್ಲಿ ಬೇಡಿಕೆ ಈಡೇರದಿದ್ರೆ ಮತ್ತೆ ಪ್ರತಿಭಟನೆ ಬಗ್ಗೆ ಸಾರಿಗೆ ನೌಕರರ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದನ್ನು ಸಾರಿಗೆ ಸಚಿವರು ನೋಡಿಕೊಳ್ಳುತ್ತಾರೆ ಎಂದರು. ಇನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, 'ಇಲ್ಲಿಯ ಎಲ್ಲಾ ನಾಯಕರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡೋದಾಗಿ ತಿಳಿಸಿದರು. ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಇನ್ನು ಯಾವುದೇ ನಿರ್ಣಯ ಮಾಡಿಲ್ಲ. ಬೆಳಗಾವಿ ವಿಭಜನೆ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ನಡೀತಿದೆ. ಎರಡು, ಮೂರು ಜಿಲ್ಲೆಗಳ ಬಗ್ಗೆ ಪ್ರಸ್ತಾಪ ಇದೆ. ಗಡಿ ಭಾಗದ ಜಿಲ್ಲೆ ಇದ್ದು ಬೇಡ ಎಂದು ಜೆ.ಎಚ್.ಪಟೇಲ್ ಇದ್ದಾಗ ಹೇಳಿದ್ದರು. ಈಗ ಮತ್ತೆ ಜನರ ಒತ್ತಾಸೆಯನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ, ಜಿಲ್ಲೆ ಹಿತದೃಷ್ಟಿಯಿಂದ ಈ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ' ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ