ಕಾರು ನಿಲ್ಲಿಸಿ ಮಹಿಳೆಯ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ

By Kannadaprabha NewsFirst Published Aug 20, 2021, 7:21 AM IST
Highlights

*  ಮನವಿ ಸ್ವೀಕರಿಸಿಲ್ಲವೆಂದು ಮಹಿಳೆ ಅಸಮಾಧಾನ
*  ಆಕೆಯ ಮನವಿ ಸ್ವೀಕರಿಸಿ ಸ್ಪಂದಿಸಿದ ಬೊಮ್ಮಾಯಿ
* ‘ಮುಖ ನೋಡಿ ಸಿಎಂ ಮಣೆ ಹಾಕಬಾರದು’ ಎಂದು ಜೋರಾಗಿ ಕೂಗಿದ ಮಹಿಳೆ 
 

ಬೆಂಗಳೂರು(ಆ.20): ಮುಖ್ಯಮಂತ್ರಿಗಳು ತನ್ನ ಮನವಿ ಸ್ವೀಕರಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಹಿಳೆಯೊಬ್ಬಳನ್ನು ನೋಡಿದ ಬಸವರಾಜ ಬೊಮ್ಮಾಯಿ, ಕಾರು ನಿಲ್ಲಿಸಿ ಸಮಸ್ಯೆ ಆಲಿಸಿದ ಪ್ರಸಂಗ ಗುರುವಾರ ನಡೆಯಿತು. 

ಆರ್‌.ಟಿ.ನಗರ ನಿವಾಸದಲ್ಲಿ ಗುರುವಾರ ಸಾರ್ವಜನಿಕರ ಅಹವಾಲುಗಳನ್ನು ಬೊಮ್ಮಾಯಿ ಆಲಿಸಿದ್ದಾರೆ. ಈ ವೇಳೆ ಬೇರೆ ಕಾರ್ಯ ನಿಮಿತ್ತ ಅವರು ಹೋಗಬೇಕಾಗಿದ್ದರಿಂದ ಸ್ವೀಕರಿಸದೆ ಅಧಿಕಾರಿಗಳ ಬಳಿ ಮನವಿ ಸಲ್ಲಿಸುವಂತೆ ಸೂಚಿಸಿ ಹೊರಟರು. 

ರಾಜ್ಯ ಸಂಪುಟ ಸಭೆ : ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಸೇರಿ ಹಲವು ತೀರ್ಮಾನ

ಈ ವೇಳೆ ಸಿಎಂ ಹೊರಬರುತ್ತಿದ್ದಂತೆ ಆ ಮಹಿಳೆ ‘ಮುಖ ನೋಡಿ ಸಿಎಂ ಮಣೆ ಹಾಕಬಾರದು’ ಎಂದು ಜೋರಾಗಿ ಕೂಗಿದರು. ಇದನ್ನು ಕೇಳಿಸಿಕೊಂಡ ಬೊಮ್ಮಾಯಿ, ಕಾರು ನಿಲ್ಲಿಸಿ ಮಹಿಳೆಯ ಸಮಸ್ಯೆ ಆಲಿಸಿದರು. ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ರೊಬ್ಬರು ತೊಂದರೆ ನೀಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಸಿಎಂ ಅಧಿಕಾರಿಗಳಿಗೆ ಗೃಹ ಸಚಿವರಿಗೆ ಹೇಳಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅಲ್ಲಿಂದ ತೆರಳಿದರು.
 

click me!