Free Booster Dose ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Published : Jul 16, 2022, 02:32 PM ISTUpdated : Jul 16, 2022, 02:33 PM IST
Free Booster Dose ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಸಾರಾಂಶ

ರಾಜ್ಯಾದ್ಯಂತ ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ. ಉಚಿತ ಬೂಸ್ಟರ್ ಡೋಸ್ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ  ಚಾಲನೆ ನೀಡಿದ್ದಾರೆ.

ವರದಿ; ಮಮತಾ ಮರ್ಧಾಳ ಸುವರ್ಣನ್ಯೂಸ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು16); 18 ವರ್ಷ ಮೇಲ್ಪಟ್ಟವರಿಗೆ ಉಚಿತ ಬೂಸ್ಟರ್ ಡೋಸ್ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ. ನಿನ್ನೆಯಿಂದ ರಾಜ್ಯಾದ್ಯಂತ ಅಭಿಯಾನ ಶುರುವಾಗಿದ್ದು ಅಧಿಕೃತವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಿದ್ರು. ಕೋವಿಡ್ ಪ್ರಮಾಣ ಹೆಚ್ಚಾಗುವ ಭಯದ ಬೆನ್ನಲ್ಲೆ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿ 3ನೇ ಡೋಸ್‌ ಲಭ್ಯವಿತ್ತು. ಆದ್ರೆ 18 ವರ್ಷ ಮೇಲ್ಪಟ್ಟವರು ಹಣ ಪಾವತಿಸಿ ಬೂಸ್ಟರ್ ಡೋಸ್ ಪಡೆದುಕೊಳ್ತಿದ್ರು. ಇದೀಗ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ಪಡೆಯಬಹುದು. ಇಂದು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ 18 ವರ್ಷ ಮೇಲ್ಪಟ್ಟವರ ಬೂಸ್ಟರ್ ಡೋಸ್ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಈಗಾಗಲೆ ರಾಜ್ಯಾದ್ಯಂತ ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನ ಶುರುವಾಗಿದ್ದು, ಸೆ30 ರವರೆಗೆ 75 ದಿನಗಳ ಕಾಲ ಉಚಿತ ಲಸಿಕೆ ನೀಡುವ ಮೂಲಕ  ಅಭಿಯಾನ ನಡೆಯಲಿದೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ಸಿಗಲಿದ್ದು, 18 ರಿಂದ 59 ವರ್ಷದವರೆಗೆ ಕೊರೊನಾ ಮೂರನೇ ಡೋಸ್ ಲಸಿಕೆ‌ ಉಚಿತವಾಗಿ ಪಡೆಯಬಹುದು.  

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಸುಧಾಕರ್, ಮುರುಗೇಶ್ ನಿರಾಣಿ, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ ಬೂಸ್ಟರ್ ಡೋಸ್ ನೀಡಲಾಗ್ತಿದೆ. ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಲಸಿಕಾ ಅಭಿಯಾನ, ಇದರ ಸಂಪೂರ್ಣ ಶ್ರೇಯ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು. ವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಪಾತ್ರವಹಿಸಿದೆ ಅಂತಂದ್ರು. ರಾಜ್ಯದಲ್ಲಿ 5.94 ಕೋಟಿ‌ ಮೊದಲ ಡೋಸ್ ಹಾಗೂ 5.42 ಕೋಟಿ ಎರಡನೇ ಡೋಸ್ ಲಸಿಕೆ ಕೊಡಲಾಗಿದೆ.  ರಾಜ್ಯದಲ್ಲಿ ಕೇಂದ್ರ ಸರ್ಕಾರ ಕೊರೋನಾ ನಿರ್ವಹಣೆಗೆ ಬಹಳ ದುಡ್ಡು ಕೊಟ್ಟಿದೆ. ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲಾಂದ್ರೆ ಇವತ್ತು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳುತ್ತಿತ್ತು. ಹೀಗಾಗಿ ಬೂಸ್ಟರ್ ಡೋಸ್ ಪ್ರತಿಯೊಬ್ಬರು ಪಡೆಯೋದು ಮುಖ್ಯ ಅಂತಂದ್ರು. 

ಕೋವಿಡ್ ಕಡಿಮೆಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್,  ಇನ್ನೂ ಗಂಭೀರತೆ ಇದೆ ಎಂದಿದೆ. ಹೀಗಾಗಿ ಜನ ನಿರ್ಲಕ್ಷ್ಯ ಮಾಡದೆ ಉಚಿತವಾಗಿ ಸಿಗೋ ಬೂಸ್ಟರ್ ಡೋಸ್ ಅನ್ನು ತೆಗೆದುಕೊಳ್ಳಿ  ಎಂದು ಆರೋಗದಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ. 
75 ದಿನಗಳ ಒಳಗೆ ಬೂಸ್ಟರ್ ಡೋಸ್ ಅನ್ನು ಪ್ರತಿಯೊಬ್ಬರಿಗೂ ಕೊಡ್ಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ. ಅಲ್ಲದೆ ವ್ಯಾಕ್ಸಿನ್ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

 

ಬೂಸ್ಟರ್ ಡೋಸ್ ಪಡೆದವರೆಷ್ಟು?:  ಇದುವರೆಗೂ ರಾಜ್ಯದಲ್ಲಿ ಕೇವಲ ನಾಲ್ಕು ಲಕ್ಷ ಮಂದಿ ಮಾತ್ರವೇ ಶುಲ್ಕ ನೀಡಿ ಮೂರನೇ ಡೋಸ್‌ ಪಡೆದಿದ್ದಾರೆ. ಉಳಿದಂತೆ ಒಂದು ಕೋಟಿಗೂ ಅಧಿಕ ಮಂದಿ ಅರ್ಹತೆ ಪಡೆದಿದ್ದರೂ, ಲಸಿಕೆ ಪಡೆದಿಲ್ಲ. ಇದೀಗ ಉಚಿತ ಬೂಸ್ಟರ್ ಡೋಸ್ ಸಿಗ್ತಿರೋದ್ರಿಂದ ಹೆಚ್ಚಿನ ಸಂಕ್ಯೆಯಲ್ಲಿ ಜನ ಮೂರನೇ ಡೋಸ್ ಲಸಿಕೆ‌ ಪಡೆಯಬಹುದು ಎಂಬ ನಿರೀಕ್ಷೆ ಆರೋಗ್ಯ ಇಲಾಖೆಯದ್ದು. 

ದೇಶಾದ್ಯಂತ ಉಚಿತ ಬೂಸ್ಟರ್‌ ಡೋಸ್‌ ಲಸಿಕಾ ಅಭಿಯಾನ ಶುರು

ನಮ್ಮ ಕ್ಲೀನಿಕ್: ಆರೋಗ್ಯ ಇಲಾಖೆ ನಮ್ಮ ಕ್ಲೀನಿಕ್ ತೆರೆಯಲಿದೆ. ಜುಲೈ 28 ಕ್ಕೆ ಬೊಮ್ಮಾಯಿ ಸರಕಾರ ರಚನೆ ಆಗಿ ಒಂದು ವರ್ಷ ಜೊತೆಗೆ ಅವರ ಹುಟ್ಟು ಹಬ್ಬ ಜುಲೈ 28ಕ್ಕೆ. ಹೀಗಾಗಿ ಆ ದಿನ ನಮ್ಮ‌ ಕ್ಲಿನಿಕ್ ಓಪನ್ ಮಾಡಬೇಕು ಅಂತಾ ಚಿಂತನೆ ಮಾಡಲಾಗ್ತಿದೆಯಂತೆ. ಬೆಂಗಳೂರಿನಲ್ಲಿ 243 ಹಾಗೂ ರಾಜ್ಯಾದ್ಯಂತ 400 ನಮ್ಮ ಕ್ಲೀನಿಕ್ ತೆರೆಯಲು ನಿರ್ಧರಿಸಲಾಗಿದೆ. ನಮ್ಮ ಕ್ಲೀನಿಕ್ ನಿಂದ ಜನರಿಗೆ ಹೇಗೆ ಸೌಲಭ್ಯ ಒದಗಿಸ್ಬೇಕು ಎಂಬ ಬಗ್ಗೆ  ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗ್ತಿದೆ. ಪ್ರತಿಯೊಬ್ಬರಿಗೂ ಇದರ ಸದುಪಯೋಗವಾಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ