ಅಮರನಾಥ ಗುಹೆ ಬಳಿ ಮೇಘ ಸ್ಪೋಟ: ಬಂಟ್ವಾಳದ 30 ಯಾತ್ರಿಕರು ಸುರಕ್ಷಿತ

By Govindaraj S  |  First Published Jul 9, 2022, 1:46 PM IST

ಅಮರನಾಥದಲ್ಲಿ ನಡೆದಿರುವ ಮೇಘ ಸ್ಪೋಟದಲ್ಲಿ ನಡೆದಿರುವ ಜೀವಹಾನಿಯ ಸುದ್ದಿಯ ಬೆನ್ನಲ್ಲೇ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥಕ್ಕೆ ತಲುಪಿದ್ದು, ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ. 


ಬಂಟ್ವಾಳ (ಜು.09): ಅಮರನಾಥದಲ್ಲಿ ನಡೆದಿರುವ ಮೇಘ ಸ್ಪೋಟದಲ್ಲಿ ನಡೆದಿರುವ ಜೀವಹಾನಿಯ ಸುದ್ದಿಯ ಬೆನ್ನಲ್ಲೇ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥಕ್ಕೆ ತಲುಪಿದ್ದು, ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ. 

ಘಟನೆ ನಡೆದ ಬೆನ್ನಲ್ಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನಿರ್ದೇಶನದಂತೆ  ಬಂಟ್ವಾಳ‌ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿಯವರು ಯಾತ್ರಿಕ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇಂದು ಬೆಳಿಗ್ಗೆ ಕನ್ನಡಪ್ರಭದ  ಜೊತೆ ಮಾತನಾಡಿದ ಯಾತ್ರಾ ತಂಡದ ಸುರೇಶ್ ಕೋಟ್ಯಾನ್ ಅವರು, ಇನ್ನು 28 ಕಿ.ಮೀ‌.ಸಂಚರಿಸಿದರೆ ನಾವು ಯಾತ್ರಾ ಸ್ಥಳಕ್ಕೆ ತಲುಪುತ್ತೇವೆ, ಇಲ್ಲಿ ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ. ನಾಳೆ ಬೆಳಿಗ್ಗೆ ಅಮರನಾಥದಲ್ಲಿ‌ ದರ್ಶನ ಭಾಗ್ಯ ಸಿಗುವ ನಿರೀಕ್ಷೆ ಇದೆ ಎಂದವರು ತಿಳಿಸಿದ್ದಾರೆ.

Tap to resize

Latest Videos

Amarnath : ಮೇಘಸ್ಫೋಟಕ್ಕೆ ಈವರೆಗೂ 16 ಭಕ್ತರ ಸಾವು, ಸೇನಾ ಹೆಲಿಕಾಪ್ಟರ್‌ ಬಳಸಿ ರಕ್ಷಣಾ ಕಾರ್ಯ

ಕೂದಲೆಳೆ ಅಂತರದಲ್ಲಿ ಪಾರಾದ ಮೈಸೂರಿನ ಯಾತ್ರಿಕರು: ಮೈಸೂರಿನಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಅಮರನಾಥ್‌ ಇತರ 10 ಜನರೊಂದಿಗೆ ಅಮರನಾಥಕ್ಕೆ ತೆರಳಿದ್ದರು. ಮೇಘಸ್ಪೋಟದ ಸಮಯದಲ್ಲಿ ಇವರೆಲ್ಲರೂ ಅದೇ ಪ್ರದೇಶದಲ್ಲಿದ್ದರು. ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ. ಸದ್ಯ ಹತ್ತು ಮಂದಿಯೂ ಸುರಕ್ಷಿತರಾಗಿದ್ದು, ಎಲ್ಲರೂ ಮೈಸೂರಿಗೆ ವಾಪಾಸು ಬರುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

ಬೀದರ್‌ ಜಿಲ್ಲೆಯ ಯಾತ್ರಿಕರು ಸೇಫ್‌: ಬೀದರ್ ಜಿಲ್ಲೆಯಿಂದ ಅಮರಮಾಥ ಯಾತ್ರೆಗೆ ಹೋಗಿದ್ದ 10 ಜನ ಸುರಕ್ಷಿತರಾಗಿದ್ದಾರೆ. 10 ಜನರ ಪೈಕಿ 6 ಜನರು ಈಗಾಗಲೇ ಅಮರನಾಥನ ದರ್ಶನ ಮಾಡಿದ್ದರೆ, ನಾಲ್ವರ ದರ್ಶನ ಇನ್ನೂ ಬಾಕಿ ಉಳಿದಿತ್ತು. ಬೀದರ್‌ನ ಭಾಲ್ಕಿ ತಾಲೂಕಿನ 6, ಬಸವ ಕಲ್ಯಾಣ ತಾಲೂಕಿನ 2 ಜನ ಸೇರಿದಂತೆ ಒಟ್ಟು 10 ಜನ ಅಮರನಾಥ ಯಾತ್ರಗೆ ತೆರಳಿದ್ದರು. ಮೇಘಸ್ಪೋಟದ ಕಾರಣದಿಂದಾಗಿ ಉಳಿದ ನಾಲ್ವರು ದರ್ಶನ ಪಡೆಯದೇ ರಾಜ್ಯಕ್ಕೆ ವಾಪಸಾಗುತ್ತಿದ್ದಾರೆ.

16 ಸಾವುಗಳು ಈವರೆಗೂ ದೃಢಪಟ್ಟಿವೆ, ಸುಮಾರು 40 ಜನ ಇನ್ನೂ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಭೂಕುಸಿತವಾಗಿಲ್ಲ. ಆದರೆ, ನಿರಂತರ ಮಳೆ ಶುಕ್ರವಾರ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಎನ್‌ಡಿಆರ್‌ಎಫ್‌ನ ನಾಲ್ಕು ತಂಡಗಳು ಸ್ಥಳದಲ್ಲಿದೆ. ಅದರೊಂದಿಗೆ ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಸಿಆರ್‌ಪಿಎಫ್ ಮತ್ತು ಇತರರು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಎನ್‌ಡಿಆರ್‌ಎಫ್ ಡಿಜಿ ಅತುಲ್ ಕರ್ವಾಲ್ ತಿಳಿಸಿದ್ದಾರೆ. ಇನ್ನು ಬಿಎಸ್ಎಫ್‌ ಎಂ-17 ಹೆಲಿಕಾಪ್ಟರ್‌ನಿಂದ ಈವರೆಗೂ 9 ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಬಿಎಸ್ಎಫ್‌ ಪ್ರಕಟಣೆ ನೀಡಿದೆ.

ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ವಲಯದಲ್ಲಿ ಮೇಘಸ್ಫೋಟ, ಹಲವು ಭಕ್ತರ ಸಾವು!

ಸಹಾಯವಾಣಿ ನಂಬರ್‌ಗಳು
ಎನ್‌ಡಿಆರ್‌ಎಫ್‌: 011-23438252, 011-23438253
ಕಾಶ್ಮೀರ ವಿಭಾಗೀಯ ಸಹಾಯವಾಣಿ: 0194-2496240
ದೇವಳ ಮಂಡಳಿಯ ಸಹಾಯವಾಣಿ : 0194-2313149

click me!