ಶಿಕ್ಷಕರ ಕೆಲಸಕ್ಕಿಂತ ಗುಮಾಸ್ತನೇ ಮೇಲು: ಎಂಎಲ್‌ಸಿ ಪುಟ್ಟಣ್ಣ

By Suvarna NewsFirst Published Jan 19, 2020, 8:12 AM IST
Highlights

ಶಿಕ್ಷಕರ ಕೆಲಸಕ್ಕಿಂತ ಗುಮಾಸ್ತನೇ ಮೇಲು: ಎಂಎಲ್‌ಸಿ ಪುಟ್ಟಣ್ಣ |  ಪೂರ್ಣಪ್ರಮಾಣದಲ್ಲಿ ಬೋಧನೆ ಮಾಡಲು ಆಗದೇ ಗುಣಮಟ್ಟದ ಶಿಕ್ಷಣದ ಮೇಲೆ ಪರಿಣಾಮ

ಬೆಂಗಳೂರು[ಜ.19]: ಸರ್ಕಾರದ ಬೇರೆ ಬೇರೆ ಕೆಲಸಗಳಲ್ಲಿ ಶಿಕ್ಷಕರು ತೊಡಗಿಕೊಳ್ಳುವುದರಿಂದ ಅವರಿಗೆ ಪೂರ್ಣಪ್ರಮಾಣದಲ್ಲಿ ಬೋಧನೆ ಮಾಡಲು ಆಗದೇ ಗುಣಮಟ್ಟದ ಶಿಕ್ಷಣದ ಮೇಲೆ ಪರಿಣಾಮ ಬೀರುವುದರಿಂದ ಈ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಹೇಳಿದರು.

ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶನಿವಾರ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ‘ಉತ್ತಮ ಶಿಕ್ಷಕರು, ಆಡಳಿತ ಮಂಡಳಿ, ನಿವೃತ್ತರಿಗೆ ಸನ್ಮಾನ’ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕನ್ನು ಸರ್ಕಾರ ಬೇರೆ ಕೆಲಸಗಳಿಗೆ ತೊಡಗಿಸಿಕೊಂಡ ಪರಿಣಾಮ ಪೂರ್ಣಕಾಲ ಪಾಠ ಮಾಡಲು ಆಗದ ಅಂತಿಮವಾಗಿ ಶಿಕ್ಷಣದ ಗುಣಮಟ್ಟಕುಸಿಯಲು ಕಾರಣವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಠ ಮತ್ತು ಇತರೆ ಕೆಲಸಗಳ ಒತ್ತಡ ಹೆಚ್ಚಳವಾಗುತ್ತಿರುವುದರಿಂದ ಗುಮಾಸ್ತನ ಜೀವನವೇ ಉತ್ತಮವಾಗಿದೆ ಎಂದರು.

ಜೆಡಿಎಸ್ ಮುಖಂಡ ಪುಟ್ಟಣ್ಣ ಪಕ್ಷದಿಂದ ಉಚ್ಛಾಟನೆ

ಅನುದಾನಿತ ಶಾಲೆಗಳಿಗೆ ಸರ್ಕಾರ ಹೊರಡಿಸುತ್ತಿರುವ ಸುತ್ತೋಲೆ ಮತ್ತು ನಿಯಮಗಳು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಹೆಚ್ಚಿನ ಸಮಸ್ಯೆಗೆ ಇದು ಕಾರಣವಾಗಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಬೇಕೆಂದರೆ, ಮಕ್ಕಳನ್ನು ಹುಡುಕಿ ತರಬೇಕಾದ ಸ್ಥಿತಿ ಇದೆ. ಇದರಿಂದ ಬೇಸತ್ತ ಶಿಕ್ಷಕರು ನಿವೃತ್ತಿ ಸಮಯ ಹತ್ತಿರ ಬಂದರೆ ಸಾಕು ಎಂದು ಜಪಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಟಿ.ರವಿಕುಮಾರ್‌ ಉಪಸ್ಥಿತರಿದ್ದರು.

click me!