ಕ್ರಿಸ್ಮಸ್, ಹೊಸವರ್ಷಕ್ಕೆ ಊರಿಗೆ ಹೊರಟವರಿಗೆ ಶಾಕ್; ಖಾಸಗಿ ಬಸ್ ಬುಕಿಂಗ್ ಆಪ್‌ಗಳಿಂದ ಪ್ರಯಾಣಿಕರ ಸುಲಿಗೆ!

By Ravi JanekalFirst Published Dec 24, 2023, 5:26 PM IST
Highlights

ಸ್‌ಮಸ್, ಹೊಸ ವರ್ಷಾಚರಣೆ ಆಚರಿಸಲು ಊರಿಗೆ ಹೊರಟಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಬುಕಿಂಗ್ ಆಪ್‌ಗಳು ಶಾಕ್ ನೀಡಿವೆ. ಏಕಾಏಕಿ ಪ್ರಯಾಣ ದರ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಮೂಲಕ ಸುಲಿಗೆ ಇಳಿದಿದ್ದಾರೆ.

ಬೆಂಗಳೂರು (ಡಿ.24): ಕ್ರಿಸ್‌ಮಸ್, ಹೊಸ ವರ್ಷಾಚರಣೆ ಆಚರಿಸಲು ಊರಿಗೆ ಹೊರಟಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್ ಬುಕಿಂಗ್ ಆಪ್‌ಗಳು ಶಾಕ್ ನೀಡಿವೆ. ಏಕಾಏಕಿ ಪ್ರಯಾಣ ದರ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವ ಮೂಲಕ ಸುಲಿಗೆ ಇಳಿದಿದ್ದಾರೆ.

ಕ್ರಿಸ್ಮಸ್, ಹೊಸ ವರ್ಷಾಚರಣೆ, ವಾರಂತ್ಯ ಹೀಗೆ ಸಾಲು ಸಾಲು ರಜೆಗಳು ಬಂದಿರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬುಕಿಂಗ್ ಆಪ್‌ಗಳು ಬಸ್ ಪ್ರಯಾಣ ದರ ದುಪ್ಪಟ್ಟಾಗಿಸಿ ಪ್ರಯಾಣಿಕರಿಂದ ಅಕ್ಷರಶಃ ಸುಲಿಗೆ ಮಾಡುತ್ತಿದ್ದಾರೆ.

ತಾಕತ್ತು ಇದ್ರೆ ಹಿಂದೂ ರಾಷ್ಟ್ರವಾಗೋದನ್ನು ತಡೆಯಲಿ: ಸಿಎಂ ಸಿದ್ದರಾಮಯ್ಯಗೆ ಸಂಸದ ಅನಂತಕುಮಾರ ಹೆಗಡೆ ಸವಾಲು!

ಖಾಸಗಿ ಬಸ್ ಬುಕ್ಕಿಂಗ್ ವೆಬ್ ಸೈಟ್‌ನಲ್ಲಿ ಒನ್ ಟು ಡಬಲ್ ಆದ ಟಿಕೆಟ್ ದರ. ಶಕ್ತಿ ಯೋಜನೆ ಬಳಿಕ ಸಾಕಷ್ಟು ಬಸ್ ಸೌಲಭ್ಯಗಳು ಲಭ್ಯವಿಲ್ಲ. ಇದ್ರು ಕಿಕ್ಕಿರಿದು ತುಂಬಿರುವ ಬಸ್ ಗಳು. ಇತ್ತ ಖಾಸಗಿ ಬಸ್‌ನಲ್ಲಿ ತೆರಳಲು ಬುಕಿಂಗ್ ಆಪ್ ತೆರೆದರೆ ದುಪ್ಪಟ್ಟು ದರ. ಖಾಸಗಿ ಆಪ್‌ಗಳು ಹೀಗೆ ಮನಸಿಗೆ ಬಂದಂತೆ ದರ ಏರಿಕೆ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಯಾವಾಗ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ಹೊರಡುವ ಬಹುತೇಕ ಊರುಗಳಿಗೆ ದುಪ್ಪಟ್ಟು ದರ ನಿಗದಿ ಮಾಡಲಾಗಿದೆ.  ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾದ ಎಸಿ ವೋಲ್ವೋ ಮಲ್ಟಿ ಆ್ಯಕ್ಸಲ್ ಬಸ್ ಟಿಕೆಟ್ ಗಳ ದರ. ನಿನ್ನೆ ಇಂದು ಮತ್ತು ನಾಳೆ ಮೂರು ದಿನಗಳ ಕಾಲ ರಜೆ‌ ಹಿನ್ನೆಲೆ. ಖಾಸಗಿ ಬಸ್‌ಗಳ ಅಂಧಾ ದರ್ಬಾರ್. ಟಿಕೆಟ್ ದರ ಏರಿಕೆಗೆ ಹೇಳೋರು ಇಲ್ಲ ಕೇಳೋರಿಲ್ಲ ಎಂಬಂತಾಗಿದೆ. ಪ್ರತಿ ಹಬ್ಬದ ಸಂಧರ್ಭದಲ್ಲಿ ಪ್ರಯಾಣಿಕರನ್ನ‌ ಸುಲಿಗೆ ಮಾಡುತ್ತಿರುವ ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್ ಗಳು. ಬೇಕಾ ಬಿಟ್ಟಿ ದರ ಹೆಚ್ಚಿಸುತ್ತಿದ್ದಾರೆ ಈ ಬಗ್ಗೆ ದೂರು ಕೊಟ್ಟು ಕ್ರಮ ಇಲ್ಲ. ಖಾಸಗಿ ಬಸ್ ಮಾಲೀಕರಿಗೆ ಕಡಿವಾಣ‌ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶಾಲೆಗಳಲ್ಲಿ ಇನ್ಮುಂದೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ! ಏನಿದು ಹೊಸ ರೂಲ್ಸ್!?

ಎಲ್ಲಿಂದ ಎಲ್ಲಿಗೆ ಎಷ್ಟು ದರ - ಇಂದಿನ ದರ ಹೀಗಿದೆ

  • ಬೆಂಗಳೂರು-ಶಿವಮೊಗ್ಗ :  450-650 - 1000-1400
  • ಬೆಂಗಳೂರು- ಹುಬ್ಬಳಿ :  600-850 - 1550-2000
  • ಬೆಂಗಳೂರು-ಮಂಗಳೂರು : 600-900 - 1500-1800
  • ಬೆಂಗಳೂರು - ಉಡುಪಿ: 700-800 -1600-1900
  • ಬೆಂಗಳೂರು-ಧಾರವಾಡ: 650-850-1500-2100
  • ಬೆಂಗಳೂರು-ಬೆಳಗಾವಿ: 700-900 - 1500-2100
  • ಬೆಂಗಳೂರು - ದಾವಣಗೆರೆ:    450-700 - 1200-1650
  • ಬೆಂಗಳೂರು - ಚಿಕ್ಕಮಗಳೂರು: 600-650- 1250-1500
  • ಬೆಂಗಳೂರು - ಹಾಸನ: 650-850 - 1600-1850
  • ಬೆಂಗಳೂರು-ಕುಮಟಾ : 650-750- 1200-1600
  • ಬೆಂಗಳೂರು -ಕಲಬುರಗಿ: 850-1000 - 1800-2300
click me!