ನಾಳೆ ಚಿತ್ರಸಂತೆಗೆ ಹೋಗೋರಿಗೆ ಗುಡ್ ನ್ಯೂಸ್ ಕೊಟ್ಟ ಬಿಎಂಟಿಸಿ, ಕುಮಾರ ಕೃಪ ರಸ್ತೆಗೆ ಹೇಗೆ ತಲುಪೋದು? ಇಲ್ಲಿದೆ ವಿವರ

Published : Jan 06, 2024, 09:13 AM ISTUpdated : Jan 04, 2025, 10:42 PM IST
ನಾಳೆ ಚಿತ್ರಸಂತೆಗೆ ಹೋಗೋರಿಗೆ ಗುಡ್ ನ್ಯೂಸ್ ಕೊಟ್ಟ ಬಿಎಂಟಿಸಿ, ಕುಮಾರ ಕೃಪ ರಸ್ತೆಗೆ ಹೇಗೆ ತಲುಪೋದು? ಇಲ್ಲಿದೆ ವಿವರ

ಸಾರಾಂಶ

ಜನವರಿ 5 ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ 22ನೇ ಚಿತ್ರಸಂತೆ ಕೃಮಾರಕೃಪ ರಸ್ತೆಯಲ್ಲಿ ನಡೆಯಲಿದೆ. ಚಿತ್ರಸಂತೆಗೆ ಬರುವವರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು, ರಿಯಾಯಿತಿ ದರದಲ್ಲಿ ಮೆಟ್ರೋ ಫೀಡರ್ ಸೇವೆ ಲಭ್ಯವಿರುತ್ತದೆ.

ಬೆಂಗಳೂರು (ಜ.4): ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷದ ಆರಂಭದ ಹೊತ್ತಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ 22ನೇ ಚಿತ್ರಸಂತೆ ನಾಳೆ(ಜ.5ರಂದು) ಕೃಮಾರಕೃಪ ರಸ್ತೆಯಲ್ಲಿ ಚಿತ್ರಸಂತೆ ಆಯೋಜನೆ ಮಾಡಲಾಗಿದೆ. ಇದೇ ವೇಳೆ 'ಚಿತ್ರಕಲಾ ಸಮ್ಮಾನ' ಪ್ರಶಸ್ತಿ ಸಮಾರಂಭವೂ ಇರುವುದರಿಂದ ಲಕ್ಷಾಂತರ ಜನರು ಬರುವ ಸಾಧ್ಯತೆ ಹಿನ್ನೆಲೆ ಚಿತ್ರಸಂತೆಗೆ ಬರುವವರ ಅನಕೂಲಕ್ಕಾಗಿ ಬಿಎಂಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಚಿತ್ರಸಂತೆ ಕಾರ್ಯಕ್ರಮಕ್ಕೆ ಬರುವವರಿಗೆ ರಿಯಾಯಿತಿ ದರದಲ್ಲಿ ಮೆಟ್ರೋ ಫೀಡರ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ7 ಗಂಟೆಯವರೆಗೆ ಮೆಟ್ರೋ ಫೀಡರ್ ಸೇವೆ ಇರಲಿದೆ. ಕೇವಲ 15 ರೂ.ಪ್ಲಾಟ್ ಫೇರ್ ವಿಧಿಸಿ ಮೆಟ್ರೋ ಫೀಡರ್ ಬಸ್ ಕಾರ್ಯಾಚರಣೆ ನಡೆಸಲಿದೆ.

ಎಲ್ಲಿಂದ ಎಲ್ಲಿವರೆಗೆ ಮೆಟ್ರೋ ಫೀಡರ್ ಸೇವೆ?

ಕೆಂಪೇಗೌಡ ಬಸ್ ನಿಲ್ದಾಣದಿಂದ ವಿಧಾನಸೌಧಕ್ಕೆ 4 ಬಸ್ ಕಾರ್ಯಾಚರಣೆ, ಮೆಜೆಸ್ಟಿಕ್ ನಿಂದ ಆನಂದರಾವ್ ಸರ್ಕಲ್, ಶಿವಾನಂದ ಸ್ಟೋರ್ಸ್ ಮಾರ್ಗವಾಗಿ ವಿಧಾನಸೌಧ ತಲುಪಲಿದೆ ಬಸ್, ಮಂತ್ರಿಮಾಲ್ ಮೆಟ್ರೋ ನಿಲ್ದಾಣದಿಂದ ವಿಧಾನಸೌಧ ಮೆಟ್ರೋ ಫೀಡರ್ ಬಸ್ ವ್ಯವಸ್ಥೆ. ಈ ಮಾರ್ಗದಲ್ಲಿ ಒಟ್ಟು 4 ಬಸ್ ಕಾರ್ಯಚರಣೆಗೆ ಮುಂದಾಗಿರುವ ಬಿಎಂಟಿಸಿ. ನಾಲ್ಕು ಬಸ್ಸುಗಳು ಮಂತ್ರಿಮಾಲ್ ನಿಂದ ಸೆಂಟ್ರಲ್ ಟಾಕೀಸ್, ಲಿಂಕ್ ರಸ್ತೆ ಹಾಗೂ ಶಿವಾನಂದ ಸ್ಟೋರ್ಸ್ ಮಾರ್ಗವಾಗಿ ವಿಧಾನಸೌಧ ತಲುಪಲಿವೆ. ಪ್ರತಿ  10 ನಿಮಿಷಕ್ಕೊಂದರಂತೆ ಫೀಡರ್ ಬಸ್ ಸೇವೆ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!