ಸಿನೆಮಾ ನೋಡಿ ಭಿಕ್ಷಾಟನೆ, ಸ್ಥಳೀಯರ ನೆರನಿಂದ ವಾಪಸ್ ಮನೆಗೆ ಮರಳಿದ ಯುವಕ

By Suvarna News  |  First Published Nov 15, 2020, 9:17 PM IST

ಸಿನೆಮಾಗಳು ಎಂತೆಂಹ ಸಾಮಾಜಿಕ ಪರಿಣಾಮ ಬೀರುತ್ತವೆ ಎಂದರೇ ಇಲ್ಲೊಬ್ಬ ಯುವಕ ಅಮ್ಮ ಐ ಲವ್ ಯು ಎಂಬ ಸಿನೆಮಾ ಮೋಡಿ, ಅದರಲ್ಲಿ 48 ದಿನ ಭಿಕ್ಷೆ ಬೇಡಿ ತಿಂದರೇ ಕಷ್ಟ ಪರಿಹಾರ ಆಗುವುದೆಂದು ತೋರಿಸಿದ್ದನ್ನು ಸತ್ಯ ಎಂದು ತಿಳಿದು, ತನ್ನ ಕಷ್ಟ ಪರಿಹಾರಕ್ಕಾಗಿ ಭಿಕ್ಷಾಟನೆಗೆ ಇಳಿದಿದ್ದಾನೆ.
 


ಉಡುಪಿ, (ನ.15): ಇಲ್ಲಿನ ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ತಾರಾನಾಥ್ ಮೇಸ್ತ ರಕ್ಷಿಸಿದ್ದಾರೆ.

ಪದವೀಧರನಾಗಿರುವ ಚಿತ್ರದುರ್ಗದ ಈ ಯುವಕ ಉದ್ಯೋಗ ದೊರೆಯದೇ ಮನನೊಂದಿದ್ದ. ಈ ಸಂದರ್ಭದಲ್ಲಿ ಸಿನೆಮಾ ನೋಡಿ ತನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ, ಉದ್ಯೋಗ ಸಿಗುತ್ತದೆ ಎಂದು ಭಾವಿಸಿ, ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಾ ಭಿಕ್ಷೆ ಭೇಡಿ ತಿನ್ನುತಿದ್ದ

Latest Videos

undefined

ಯುವಕ ಪರಿಸ್ಥಿತಿ ಕಂಡು  ವಿಶು ಶೆಟ್ಟಿ ಅವರು ಈ ರೀತಿ ಭಿಕ್ಷಾಟನೆಯಿಂದ ಕಷ್ಟ ಪರಿಹಾರವಾಗುವುದಿಲ್ಲ ಮನವರಿಕೆ ಮಾಡಿದ್ದಾರೆ. ಅಲ್ಲದೇ ಆಸ್ಪತ್ರೆಗೆ ದಾಖಲಿಸಿ ನಂತರ ಹೆತ್ತವರಿಗೆ ಮಡಿಲು ಸೇರಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಪ್ಲಾಸ್ಟಿಕ್‌ ಮನೆ ನಿರ್ಮಾಣ: ಚಿಂದಿ ಆಯುವ ಮಹಿಳೆಗೆ ಹಸ್ತಾಂತರ

ವಿಶು ಶೆಟ್ಟಿ ಆತನಿಗೆ ಈ ರೀತಿ ಭಿಕ್ಷಾಟನೆಯಿಂದ ಕಷ್ಟ ಪರಿಹಾರವಾಗುವುದಿಲ್ಲ ಮನವರಿಕೆ ಮಾಡಿ, ಆತನ ಹೆತ್ತವರ ವಿಳಾಸ ಪಡೆದು, ಅವರಿಗೆ ಮಾಹಿತಿ  ನೀಡಿದರು. ಅವರು ಬಂದು ಹೇಳದೇ ಕೇಳದೇ ಮಗ ಮನೆ  ಬಿಟ್ಟಿದ್ದರಿಂದ ನೊಂದ ಮನೆಯವರು ಈ ಬಾರಿ ದೀಪಾವಳಿ ಹಬ್ಬವನ್ನೂ  ಆಚರಿಸುವ ಮನಸ್ಥಿತಿಯಲ್ಲಿರಲಿಲ್ಲ. 

ಇದೀಗ ದೀಪಾವಳಿಯೆಂದೇ ಮಗ ಸಿಕ್ಕಿದ್ದು ತಮ್ಮ ಪಾಲಿಗೆ ನಿಜವಾದ ದೀಪಾವಳಿಯಾಗಿದೆ, ಮಗನನ್ನು ರಕ್ಷಿಸಿ ಆರೈಕೆ ಮಾಡಿದ ಇಬ್ಬರು ಸಮಾಜ ಸೇವಕರು ನಮ್ಮ ಪಾಲಿನ ಆಪತ್ಬಾಂಧವರು ಎಂದು ಹಾರೈಸಿ ಚಿತ್ರದುರ್ಗಕ್ಕೆ ಮಗನೊಂದಿಗೆ ಊರಿಗೆ ಹಿಂತಿರುಗಿದ್ದಾರೆ.

click me!