
ಬ್ಯಾಡಗಿ : ಸ್ಥಳೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ದಿಢೀರ್ ಕುಸಿತಗೊಂಡಿದೆ ಎಂದು ಆರೋಪಿಸಿ ರೈತರು ಕೆಲಕಾಲ ಪ್ರತಿಭಟನೆ ನಡೆಸಿದ್ದಲ್ಲದೆ, ಎಪಿಎಂಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ ಘಟನೆ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆಯಿತು. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ 2.55 ಲಕ್ಷ ಮೂಟೆ ಮೆಣಸಿನ ಕಾಯಿ ಆವಕವಾದ ಹಿನ್ನೆಲೆಯಲ್ಲಿ ದರ ಕುಸಿತವಾಗಿತ್ತು.
ಕಳೆದ ಗುರುವಾರವಷ್ಟೇ 8ರಿಂದ 11 ಸಾವಿರದ ವರೆಗೆ ಮಾರಾಟವಾಗಿದ್ದ ಕಡ್ಡಿ ತಳಿ ಮೆಣಸಿನಕಾಯಿ, ಸೋಮವಾರ ಕೇವಲ . 6ರಿಂದ . 9 ಸಾವಿರಕ್ಕೆ ಮಾರಾಟವಾಗಿದ್ದು, ಪ್ರತಿ ಕ್ವಿಂಟಲ್‌ಗೆ ಸುಮಾರು . 2 ಸಾವಿರಗಳಷ್ಟುಕಡಿಮೆಯಾಗಿದೆ ಎಂಬುದು ರೈತರ ಆರೋಪವಾಗಿತ್ತು. ಎಪಿಎಂಸಿ ಕಚೇರಿ ನುಗ್ಗಿದ ಸಾವಿರಾರು ರೈತರು, ವರ್ತಕರು ಸೇರಿ ಎಪಿಎಂಸಿ ಸಿಬ್ಬಂದಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ವ್ಯಾಪಾರಸ್ಥರು ಎಲ್ಲರೂ ಮಾತಾಡಿಕೊಂಡು ಉದ್ದೇಶಪೂರ್ವಕವಾಗಿ ದರ ಕಡಿತಗೊಳಿಸಿದ್ದಾರೆ ಎಂದು ಈ ವೇಳೆ ರೈತರು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ