ಮಸಗಲಿ ಮೀಸಲು ಅರಣ್ಯ ವ್ಯಾಪ್ತಿ ಪ್ರದೇಶದ ಜನರಲ್ಲಿ ನಿತ್ಯವೂ ಆತಂಕ

Published : May 12, 2022, 11:30 PM IST
 ಮಸಗಲಿ ಮೀಸಲು ಅರಣ್ಯ ವ್ಯಾಪ್ತಿ ಪ್ರದೇಶದ ಜನರಲ್ಲಿ ನಿತ್ಯವೂ ಆತಂಕ

ಸಾರಾಂಶ

- ಒಂದಡೆ ಸುಪ್ರೀಂಕೋರ್ಟ್ ತೂಗುಗತ್ತಿ,  - ಯಾವಾಗೋ ಜೆಸಿಬಿಗಳು ಬರ್ತಾವೊ ಅನ್ನೊ ಆತಂಕ - ಒತ್ತುವರಿ ತೆರವು ಮಾಡ್ತೀವಿ ಅಂತಾ ಅಧಿಕಾರಿಗಳ ಪಟ್ಟು  - ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ಹರಸಾಹಸ - ಇದು ಚಿಕ್ಕಮಗಳೂರು ಜಿಲ್ಲೆಯ ಮಸಗಲಿ ಮೀಸಲು ಅರಣ್ಯದ ವ್ಯಾಪ್ತಿ ಜನರ ಪರಿಸ್ಥಿತಿ   

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.12): ಒಂದಡೆ ಸುಪ್ರೀಂ ಕೋರ್ಟ್ (Supreem Court) ತೂಗುಗತ್ತಿ , ಬೆಳಗಾಗುತ್ತಿದ್ದಂತೆ ಯಾವಾಗೋ ಜೆಸಿಬಿಗಳು (JCB) ಬರ್ತಾವೋ ಅನ್ನೋ ಆತಂಕದಲ್ಲಿ ಗ್ರಾಮಸ್ಥರು..ಒತ್ತುವರಿ ತೆರವು ಮಾಡ್ತೀವಿ ಅಂತಾ ಅಧಿಕಾರಿಗಳ ಪಟ್ಟು.ಇದ್ರ ನಡುವೇ ಪರ್ಯಾಯವೇನಾದ್ರೂ ಮಾಡ್ಲೇ ಬೇಕು ಅನ್ನೋ ಜನಪ್ರತಿನಿಧಿಗಳು...ತೆರವು ಮಾಡದಿದ್ರೇ ಸುಪ್ರಿಂಕೋರ್ಟ್  ಪ್ರಶ್ನಿಸುತ್ತೇ..ತೆರವು ಮಾಡೋಕೆ ಗ್ರಾಮಸ್ಥರು, ಜನಪ್ರತಿನಿಧಿಗಳು ವಿರೋಧ. ಇದರ ಪರಿಣಾಮ ಜಿಲ್ಲಾಡಳಿತಕ್ಕೆ  ಮಸಗಲಿ ಮೀಸಲು ಅರಣ್ಯ ತೆರವು ಕಾರ್ಯಚರಣೆ ದೊಡ್ಡ ಸಮಸ್ಯೆಯಾಗಿ ಪರಿಣಾಮಿಸಿದೆ. 

ಕಾಫಿನಾಡು ಚಿಕ್ಕಮಗಳೂರಿನ (chikkamagaluru) ಭದ್ರ ಹುಲಿಸಂರಕ್ಷಿತಾರಣ್ಯಕ್ಕೆ (Bhadra Tiger Reserve) ಹೊಂದಿಕೊಂಡಂತೆ ಕೊಂಚ ದೂರದಲ್ಲಿರೋ ಮಸಗಲಿ ಮೀಸಲು ಅರಣ್ಯ ಪ್ರದೇಶ (masagali reserve forest)..ಈ ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತಲ್ಲಲ್ಲಿ ಹಲವು ದಶಕದಿಂದ ಸುಮಾರು 220ಕ್ಕೂ ಹೆಚ್ಚು ಕುಟುಂಬಗಳಿವೇ. ಸುಪ್ರಿಂ ಕೋರ್ಟ್ ಈಗಾಗಲೇ ಮೀಸಲು ಅರಣ್ಯದಲ್ಲಿ ಇರುವ ಜನವಸತಿ ಪ್ರದೇಶವನ್ನು ತೆರವು ಮಾಡುವಂತೇ ಅದೇಶ ಹೊರಡಿಸಿದೇ..ಅಧಿಕಾರಿಗಳಂತೂ ಪುಲ್ ರೆಡಿಯಾಗಿಯೇ ನಿಂತಿದ್ದಾರೆ..144 ಸೆಕ್ಷನ್ ಹಾಕಿ ತೆರೆವು ಕಾರ್ಯಚಾರಣೆಯ ಸಿದ್ದತೆಯನ್ನು ಮಾಡಿದ್ದರೂ,ಇದಕ್ಕೆ ಸ್ಥಳೀಯರ ಜನಪ್ರತಿನಿಧಿಗಳು, ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಇದರ ಪರಿಣಾಮ ತೆರವು ಕಾರ್ಯಚಾರಣೆಗ ತಾತ್ಕಲಿಕವಾಗಿ ಬ್ರೇಕ್ ಬಿದ್ದಿದೆ. ಇದರ ನಡುವೆ ಅಧಿಕಾರಿಗಳು ನೀಡಿರುವ ಹೇಳಿಕೆ ಗ್ರಾಮಸ್ಥರಲ್ಲಿ ಇನ್ನು ಹೆಚ್ಚಿನ ಆತಂಕವನ್ನು ಮೂಡಿಸಿದೆ. ಜೀವನಕ್ಕಾಗಿ ಇಲ್ಲಿನ ಜನರು ಕೃಷಿ ಮಾಡಿ ಬದುಕು ಸಾಗಿಸುತ್ತಿದ್ದಾರೆ,, ಆದ್ರೆ ಅಧಿಕಾರಿಗಳು ಮೊದಲು ಪರಿಹಾರದ ಮಾತುಗಳನ್ನು ಹೇಳಿ ಇದೀಗ ಯಾವುದೇ ಪರಿಹಾರ ನೀಡಿಲ್ಲ ಅನ್ನೋದು ಸ್ಥಳೀಯರಲ್ಲಿ ಆತಂಕ ಹೆಚ್ಚು ಮಾಡಿದೆ. 

ಜಿಲ್ಲಾಧಿಕಾರಿ ಕಛೇರಿಯಲ್ಲಿ ಜನಪ್ರತಿನಿಧಿಗಳ ಸಭೆ: ಇನ್ನೂ ಈ ತೆರವು ವಿವಾದವಂತೂ ಇಂದು ನಿನ್ನೆಯದಲ್ಲ..ಒಂದು ದಶಕದಿಂದ ನಡೆಯುತ್ತಲೇ ಇದೆ..ಅದ್ರೆ ಈಗ ಸುಪ್ರಿಂಕೋರ್ಟ್  ತೀರ್ಪಿನಂತೆ ತೆರವು ಮಾಡ್ಲೇ ಬೇಕು ಇಲ್ಲಾಂದ್ರೆ ಕೋರ್ಟ್ನ  ಆದೇಶ ಉಲ್ಲಂಘನೆಯಾಗುತ್ತೇ ಅನ್ನೋದು ಅಧಿಕಾರಿಗಳಿಗೆ ಗೊತ್ತಾಗ್ತಾ ಇದ್ದಂತೆ ಆಲರ್ಟ್ ಅಗಿ ಕಾರ್ಯಚರಣೆ ನಡೆಸೋಕೆ ಮುಂದಾಗಿದ್ರು.ಅದ್ರೆ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕೊಂಚ ದಿನ ಮುಂದುಡ್ಡಿದ್ದಾರೆ..ಅದ್ರೂ ಸಮಸ್ಯೆಯನ್ನು ಬಗೆಹರಿಸೋಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯ್ತು.

ಮೊದಲ ಬಾರಿ ಸಚಿವ ಸ್ಥಾನದ ಆಸೆ ಕೈಬಿಟ್ಟ ಶಾಸಕ ಕುಮಾರಸ್ವಾಮಿ!

ಪರ್ಯಾಯ ಭೂಮಿಯನ್ನಾದ್ರೂ ಅಥವಾ ಪರಿಹಾರನ್ನಾದ್ರೂ ನೀಡೋಕೆ ಅಗುತ್ತಾ ಅಂತಾ ಸರ್ಕಾರ ಮುಂದೇ ಮನವಿ ಮಾಡೋಕೆ ಮುಂದಾಗಿದ್ಧಾರೆ. ಒತ್ತುವರಿ ತೆರವು ಬದಲು ಡೀಮ್ಡ್ ಫಾರೆಸ್ಟ್ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಅಥವಾ ಒತ್ತುವರಿ ತೆರವು ಅನಿವಾರ್ಯವಾದರೆ ಸೂಕ್ತ ಪರಿಹಾರ ಪ್ಯಾಕೆಜ್ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಸೂಚನೆ ನೀಡಿದರು.

ಆಜಾನ್-ಸುಪ್ರಭಾತ ವಿವಾದ: ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ಕೊಟ್ಟ ಸಿಟಿ ರವಿ

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ತೆರವು ಸಂತ್ರಸ್ತರಿಗೆ ಎರಡು ಎಕರೆ ಜಮೀನು ಹಾಗೂ ಒಂದು ಮನೆಗೆ ರೂ. 5 ಲಕ್ಷ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಜಿಲ್ಲಾಧಿಕಾರಿಗಳಿಗೆ ಕೋರಿದರು ಒಟ್ಟಾರೆ ಮಸಗಲಿ ಮೀಸಲು ಅರಣ್ಯದ ಅಕ್ಕಪಕ್ಕದಲ್ಲಿರೋಗಂತೂ ಅಲ್ಲಿಂದ ಎತ್ತಂಗಡಿ ಮಾಡ್ತಾರೆ ಅನ್ನೋದು ಕನ್ಪರ್ಮ್ ಅದ್ರೆ ಇಷ್ಟು ವರ್ಷವಿದ್ದೋರಿಗೆ ಪರಿಹಾರವೂ ಇಲ್ಲ ಪರ್ಯಾಯ ಭೂಮಿಯು ನೀಡದೇ ಎತ್ತಂಗಡಿ ಮಾಡ್ತಾ ಇದ್ದಾರೆ ನಮಗೆ ಪರಿಹಾರ ಕೊಡಿ ಅಂತಾ ಮನವಿ ಮಾಡ್ತಾ ಇದ್ದಾರೆ.ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದನೆ ನೀಡಲಿದೆ ಎನ್ನುವುದು ಕಾದ್ದು ನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ