ಯಾದಗಿರಿಯಿಂದ ಬೆಂಗಳೂರಿಗೆ ವ್ಯಾಪಿಸಿದ ಕೆಇಎ ಪರೀಕ್ಷಾ ಅಕ್ರಮ; ಸಿಸಿಟಿವಿ ಮುಚ್ಚಿ ಪರೀಕ್ಷೆ ನಡೆಸಿದ್ದೇಕೆ ಜ್ಯೋತಿ ನಿವಾಸ ಕಾಲೇಜು?

Published : Oct 31, 2023, 11:28 AM ISTUpdated : Oct 31, 2023, 11:30 AM IST
ಯಾದಗಿರಿಯಿಂದ ಬೆಂಗಳೂರಿಗೆ ವ್ಯಾಪಿಸಿದ ಕೆಇಎ ಪರೀಕ್ಷಾ ಅಕ್ರಮ; ಸಿಸಿಟಿವಿ ಮುಚ್ಚಿ ಪರೀಕ್ಷೆ ನಡೆಸಿದ್ದೇಕೆ  ಜ್ಯೋತಿ ನಿವಾಸ ಕಾಲೇಜು?

ಸಾರಾಂಶ

ಯಾದಗಿರಿ ಕೆಇಎ ಪರೀಕ್ಷಾ ಅಕ್ರಮದ ಘಟನೆ ಬೆಚ್ಚಿಬೀಳಿಸಿರುವ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಿನಲ್ಲೂ ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕಾಲೇಜು ಡಿಗ್ರಿ ಬ್ಲಾಕ್ ನಲ್ಲಿ ನಡೆದ SDA ಪರೀಕ್ಷೆ. ಪರೀಕ್ಷೆ ನಡೆಯುವ ವೇಳೆ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು (ಅ.31): ಯಾದಗಿರಿ ಕೆಇಎ ಪರೀಕ್ಷಾ ಅಕ್ರಮದ ಘಟನೆ ಬೆಚ್ಚಿಬೀಳಿಸಿರುವ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಿನಲ್ಲೂ ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.

ಅ.29 ಭಾನುವಾರ ಬೆಂಗಳೂರಿನಲ್ಲಿ ನಡೆದ ಕೆಇಎ ಎಸ್‌ಡಿಎ ಪರೀಕ್ಷೆ. ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕಾಲೇಜು ಡಿಗ್ರಿ ಬ್ಲಾಕ್ ನಲ್ಲಿ ನಡೆದ SDA ಪರೀಕ್ಷೆ. ಪರೀಕ್ಷೆ ನಡೆಯುವ ವೇಳೆ ಹಾಲ್‌ನಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮೆರಾ ಮುಚ್ಚಲಾಗಿತ್ತು. ಸಿಸಿಟಿವಿ ಮುಚ್ಚಿರುವ ಫೋಟೊ ವಿಡಿಯೋಗಳು ವೈರಲ್.  ಅಭ್ಯರ್ಥಿಗಳಿಗೆ ಪರೀಕ್ಷಾ ಅಕ್ರಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಸಿ ಕ್ಯಾಮೆರಾ ಮುಚ್ಚಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. 

80000 ಸಂಬ್ಳದ ಕೆಲ್ಸ ಬಿಟ್ಟು ಸರ್ಕಾರಿ ನೌಕ್ರಿಗೆ ಅಡ್ಡದಾರಿ ಹಿಡಿದವ ಜೈಲಿಗೆ!

ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಕ್ಕೆ ಸಿಸಿ ಕ್ಯಾಮೆರಾ ಹಾಳಾಗಿದೆ ಎಂದಿದ್ದ ಕಾಲೇಜು ಸಿಬ್ಬಂದಿ. ವಿವಿಧ ಇಲಾಖೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುವಾಗ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ಸಿಸಿಟಿವಿ ಕ್ಯಾಮೆರಾ ಇರಲೇಬೇಕು. ಪರೀಕ್ಷೆ ನಡೆಯುವ ಕೊಠಡಿಯಲ್ಲಿ ಸಿಸಿಟಿವಿ ಹಾಳಾಗಿರುವುದು ಮೊದಲೇ ಪರೀಕ್ಷಿಸಲಿಲ್ಲವೇಕೆ ಎಂಬುದು ಪ್ರಶ್ನೆ. ನಿಜಕ್ಕೂ ಸಿಸಿ ಕ್ಯಾಮೆರಾ ಹಾಳಾಗಿತ್ತೇ ಅಥವಾ ಪರೀಕ್ಷಾ ಅಕ್ರಮಕ್ಕೆ ಅನುಕೂಲ ಮಾಡಿಕೊಡಲು ಮುಚ್ಚಲಾಗಿತ್ತೆ..? ಪರೀಕ್ಷಾ ಅಕ್ರಮ ನಡೆದಿದೆ ಎಂದೇ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. 

ಗುಪ್ತಾಂಗದಲ್ಲಿ ಬ್ಲೂಟೂತ್‌ ಇಟ್ಟುಕೊಂಡ ಎಫ್‌ಡಿಎ ಪರೀಕ್ಷಾರ್ಥಿಗಳು: ಮೆಟಲ್‌ ಡಿಟೆಕ್ಟರ್‌ಗೂ ಸಿಗ್ತಿರಲಿಲ್ಲ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಕಲಬುರಗಿ, ಯಾದಗಿರಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ  ಬರೆಯಲು ಯತ್ನಿಸಿ ಸಿಕ್ಕಿಬಿದ್ದಿರುವ ಆರೋಪಿಗಳು ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿದ ಬೆನ್ನಲ್ಲೇ ಇದೀಗ ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ