ಮಲೆನಾಡಿನ ಈ ಹಳ್ಳಿಗರಿಗೆ ಜೋಳಿಗೆಯೇ ಆಂಬುಲೆನ್ಸ್; ಕಣ್ಣುಮುಚ್ಚಿ ಕುಳಿತ ಸರ್ಕಾರ!

By Ravi Janekal  |  First Published Nov 2, 2023, 8:02 PM IST

ಕಾಫಿನಾಡು ಮಲೆನಾಡು ಭಾಗದಲ್ಲಿ ಇಂದಿಗೂ ಜೋಳಿಗೆ ಸಂಚಾರ ಜೀವಂತವಾಗಿದೆ. ಸರ್ಕಾರ ಕರ್ನಾಟಕ ನಾಮಕರಣಕ್ಕೆ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಇತ್ತ ಹಳ್ಳಿಗರು ಓಡಾಡೋಕು ರಸ್ತೆ ಇಲ್ಲದೆ, ರೋಗಿಗಳನ್ನ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಜೋಳಿಗೆಯಲ್ಲಿ ಹೊತ್ಕೊಂಡ್ ಹೋಗ್ತಾ ಬದುಕು ಸಾಗಿಸ್ತಿರೋದು ದುರಂತ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ನ.2) : ಕಾಫಿನಾಡು ಮಲೆನಾಡು ಭಾಗದಲ್ಲಿ ಇಂದಿಗೂ ಜೋಳಿಗೆ ಸಂಚಾರ ಜೀವಂತವಾಗಿದೆ. ಸರ್ಕಾರ ಕರ್ನಾಟಕ ನಾಮಕರಣಕ್ಕೆ 50ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಇತ್ತ ಹಳ್ಳಿಗರು ಓಡಾಡೋಕು ರಸ್ತೆ ಇಲ್ಲದೆ, ರೋಗಿಗಳನ್ನ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಜೋಳಿಗೆಯಲ್ಲಿ ಹೊತ್ಕೊಂಡ್ ಹೋಗ್ತಾ ಬದುಕು ಸಾಗಿಸ್ತಿರೋದು ದುರಂತ.

Tap to resize

Latest Videos

undefined

 ಕಾಫಿನಾಡ ಕಾಡಂಚಿನ ಕುಗ್ರಾಮಗಳ ಜನರ ಬದುಕು ನಿಜಕ್ಕೂ ಘನಘೋರ. ಫೋನ್ ರಿಂಗಣಿಸಿದ್ರೆ ಮನೆ ಬಾಗಿಲಿಗೆ ಆಂಬುಲೆನ್ಸ್ ಬಂದು ನಿಲ್ಲೋ ಕಾಲ ಇದು. ಆದ್ರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೀನಾರಿ ಗ್ರಾಮದಲ್ಲಿ ಇಂದಿಗೂ ಜೋಳಿಗೆ ಜೀವನ ಪದ್ಧತಿ ಜಾರಿಯಲ್ಲಿದೆ. ಅದಕ್ಕೆ ಕಾರಣ ನಮ್ಮ ವ್ಯವಸ್ಥೆ. ಇಲ್ಲಿನ 36 ಕುಟುಂಬಗಳ ಬದುಕಿನ ಬವಣೆಯನ್ನ ಕೇಳೋರೇ ಇಲ್ಲದಂತಾಗಿದೆ. ಸೂಕ್ತ ರಸ್ತೆ, ಮೂಲಭೂತ ಸೌಕರ್ಯವಿಲ್ಲದೆ ಗ್ರಾಮದ ಜನ ಅನಾರೋಗ್ಯ ಪೀಡಿತ ವ್ಯಕ್ತಿಯನ್ನ ಜೋಳಿಗೆಯಲ್ಲಿ ಒತ್ತೊಯ್ಯುತ್ತಿರುವ ದೃಶ್ಯ ನಿಜಕ್ಕೂ ಮನ ಕಲಕುವಂತಿದೆ. 

ಕಾಫಿನಾಡಲ್ಲಿ ಅಪರೂಪದ ಹಾವು 'Bamboo pit viper' ಪತ್ತೆ, ಹಾವಿನ ವಿಶೇಷ ಏನು ಗೊತ್ತಾ?

ಒಂದೂವರೆ ಕಿ.ಮೀ ದೂರದ ರಸ್ತೆಗೆ 16 ಕಿ.ಮೀ ಸುತ್ತುವ ಹಳ್ಳಿಗರು :

ಹೇಗಾದರೂ ಮಾಡಿ ವ್ಯಕ್ತಿಯ ಜೀವ ಉಳಿಸ್ಲೇಬೇಕು ಅಂತಾ ಹಳ್ಳಿಗರು ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ನರಳಾಟದ ಮಧ್ಯೆ ಜೋಳಿಗೆಯಲ್ಲಿ ಮತ್ತೊಂದಡೆ ಸಾಗಿಸುವುದು ಯಾವ ಶತ್ರುವಿಗೂ ಬೇಡ. ಇಲ್ಲಿನ ಜನ ಸ್ವಾಮಿ ರಸ್ತೆ ನಿರ್ಮಾಣ ಮಾಡಿಕೊಡಿ ಅಂತ ಹತ್ತಾರು ಬಾರಿ ಸರ್ಕಾರ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು, ಮನವಿ ಪತ್ರಗಳ ಸ್ಥಿತಿ ನೀರಲ್ಲಿ ಅಸ್ತಿ ಬಿಟ್ಟಂತಾಗಿದೆ. ಜನರ ಕಣ್ಣೀರಿಗೆ ಬೆಲೆ ಇಲ್ಲದಂತಾಗಿದೆ. 

ಇನ್ನು ಕೇವಲ ಒಂದೂವರೆ ಕಿ.ಮೀ. ದೂರದ ರಸ್ತೆಯನ್ನು ಸಾಗಲು ಯಾವುದೇ ವ್ಯವಸ್ಥೆ ಇಲ್ಲ. ಅದು ಕಾಫಿತೋಟ, ಕಾಡುಮೇಡಿನ ದಾರಿ. ಸರ್ಕಾರದ ರಸ್ತೆ ಇದೆ. 16 ಕಿ.ಮೀ. ದೂರದ ರಸ್ತೆ ಇದೆ. ಆ ರಸ್ತೆ ದೇವರಿಗೆ ಪ್ರೀತಿ. ಅಲ್ಲಿ ಕಲ್ಲು-ಮುಳ್ಳುಗಳ ಮಧ್ಯೆ ರಸ್ತೆಯನ್ನೇ ಹುಡುಕಬೇಕು. ಇನ್ನು ಈ ಗ್ರಾಮಕ್ಕೆ ವಾಹನಗಳು ಬರಬೇಕು ಅಂದ್ರೆ 1500-2000 ಹಣ ಕೊಡಬೇಕು. ನಿತ್ಯ 300-400 ದುಡಿಯೋ ಜನ 2000 ಎಲ್ಲಿಂದ ತರಬೇಕು ಸ್ವಾಮಿ? ಇದರಿಂದ ಬೇಸತ್ತ ಗ್ರಾಮಸ್ಥರು ಜೋಳಿಗೆ ಹೊತ್ತು ಕಿ.ಮೀ.ಗಟ್ಟಲೆ ಸುತ್ತಾಡಿ ಜೋಳಿಗೆಯ ಮೂಲಕ ಅನಾರೋಗ್ಯ ಪೀಡಿತ ವ್ಯಕ್ತಿಯನ್ನ ಸಾಗಿಸ್ತಿದ್ದಾರೆ.

Chikkamagaluru: ಪ್ರಸಿದ್ಧ ಪ್ರವಾಸಿ ತಾಣ ವಸಿಷ್ಠ ತೀರ್ಥಕ್ಕೆ ಹೋಗಲುಬೇಕು ಡಬಲ್ ಗುಂಡಿಗೆ!

ಅನುದಾನ ಬಂದಿದೆ, ರಸ್ತೆ ಮಾಡ್ತೀವಿ ಅಂತಾನೆ ದಶಕ ದೂಡಿದ ಅಧಿಕಾರಿಗಳು!

ಇದು ಒಂದೆಡೆಯಾದ್ರೆ, ಮತ್ತೊಂದೆಡೆ ಮಳೆಗಾಲದಲ್ಲಂತೂ ಈ ಜನರ ಜೀವನ ನಿಜಕ್ಕೂ ನರಕಮಯ. ಚುನಾವಣೆ ವೇಳೆ ಬಣ್ಣದ ಮಾತನಾಡಿದ ಜನನಾಯಕರು ಮತ್ತೆ  ಇತ್ತ ಮುಖ ಮಾಡಿಲ್ಲ ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆ, ಚುನಾವಣೆ ಬಂತಂದ್ರೆ ನೀವು ಬೇಕು, ನಿಮ್ಮವರು ಬೇಕು, ನಿಮ್ಮ ವೋಟು ಬೇಕು ಅಂತ ದುಂಬಾಲು ಬೀಳುವ ರಾಜಕಾರಣಿಗಳು ಹಳ್ಳಿಗರ  ಸಂಕಷ್ಟದ ಸಮಯದಲ್ಲಿ ಕೈ ಕೊಟ್ಟು ಕೂತಿರುವುದು ನಿಜಕ್ಕೂ ದುರಂತ. ಕಾಫಿನಾಡಿನ ಈ ಜೋಳಿಗೆ ಪದ್ಧತಿ ಜೀವನಕ್ಕೆ ಯಾವಾಗ ಕಡಿವಾಣ ಬೀಳುತ್ತೋ ಗೊತ್ತಿಲ್ಲ.

click me!