ಚಾಮರಾಜನಗರದಲ್ಲಿ 8 ವರ್ಷದ ಬಾಲಕಿ ಶಾಲೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ತೇಜಸ್ವಿನಿ ಎಂಬ 3ನೇ ತರಗತಿ ವಿದ್ಯಾರ್ಥಿನಿ ನೇಚರ್ ಕಾಲ್ ವೇಳೆ ಹೃದಯಾಘಾತಕ್ಕೊಳಗಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ.
ವರದಿ - ಪುಟ್ಟರಾಜು ಆರ್‌ಸಿ
ಚಾಮರಾಜನಗರ (ಜ.6) ಸಾವು ಅದ್ಯಾವಾಗ ಹೇಗೆ ಬರುತ್ತೊ ಅನ್ನೋದು ಯಾರಿಗೂ ಕೂಡ ಗೊತ್ತಾಗಲ್ಲ. ಮನೆ ಮಂದಿಯ ಜತೆ ನಗು ನಗುತ್ತಾ ಹೊರಟಾಕೆ ವಾಪಸ್ಸು ಮನೆಗೆ ಬಂದಿದ್ದು ಶವವಾಗಿ, ಮ್ಯಾಸೀವ್ ಹಾರ್ಟ್ ಅಟ್ಯಾಕ್ ಗೆ 3ನೇ ತರಗತಿ ವಿದ್ಯಾರ್ಥಿನಿ ಪ್ರಾಣ ಚೆಲ್ಲಿದ ದುರಂತ ಕಥೆ ನಿಮ್ಮ ಮುಂದೆ ನೋಡಿ.
ಆಸ್ಪತ್ರೆ ಮುಂದೆ ಸೇರಿರುವ ಜನ. ಆಂಬ್ಯುಲೆನ್ಸ್ ಮುಂದೆ ಬಿದ್ದು ರೋದಿಸುತ್ತಿರೊ ಪೋಷಕರು.. ಈ ಎಲ್ಲಾ ಕರಳು ಕಿವಿಚೊ ದೃಶ್ಯ ಕಣ್ಣಿಗೆ ಬಿದ್ದಿದ್ದು ಗಡಿ ನಾಡು ಚಾಮರಾಜನಗರದಲ್ಲಿ. ಹೌದು 8 ವರ್ಷದ ಬಾಲಕಿಗೆ ಶಾಲೆಯಲ್ಲೇ ಹೃಧಯಾಘಾತವಾಗಿ ಸಾವನ್ನಪ್ಪಿದ್ದಾಳೆ. ಮಗಳ ಸಾವಿನ ಸುದ್ದಿ ಕೇಳಿದ ಪೋಷಕರು ಅಕ್ಷರ ಶಹ ಕುಸಿದು ಬಿದ್ದಿದ್ದಾರೆ. ಅಂದ ಹಾಗೇ ಜವರಾಯನ ಅವಕೃಪೆಗೆ ಪಾತ್ರಳಾಗಿ ಉಸಿರು ಚೆಲ್ಲಿದ ಪೋರಿಯ ಹೆಸರು ತೇಜಸ್ವಿಸಿ ಅಂತ ಇನ್ನು 8 ವರ್ಷ ನಗರದ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ 3ನೇ ತರಗತಿ ವ್ಯಾಸಾಂಗ ಮಾಡ್ತಾಯಿದ್ಲು. ಇಂದು ಎಂದಿನಂತೆ ಬದನಗುಪ್ಪೆಯ ನಿವಾಸದಿಂದ ಶಾಲೆಗೆ ಬಂದಿದ್ಲು ಎರೆಡು ಪಿರಿಯಡ್ ಮುಗಿಯುತ್ತಿದ್ದಂತೆ ನೇಚರ್ ಕಾರ್ ಗಾಗಿ ಬ್ರೇಕ್ ಕೊಟ್ಟಿದ್ದಾರೆ ಈ ವೇಳೆ ಹೃಧಯಾಘಾತವಾಗಿ ಸಾವನ್ನಪ್ಪಿದ್ದಾಳೆ. ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ,ಆರೋಗ್ಯವಾಗಿದ್ದಳು ಎಂದು ತಂದೆ ತಿಳಿಸಿದ್ದಾರೆ..
ಇದನ್ನೂ ಓದಿ: ಬಾತ್ರೂಮ್‌ನಲ್ಲಿ ಹಾರ್ಟ್ ಅಟ್ಯಾಕ್ ಯಾಕಾಗುತ್ತೆ? ಆಗ ತಕ್ಷಣಕ್ಕೆ ಏನು ಮಾಡಬೇಕು?
ಇನ್ನೂ ಲಿಂಗರಾಜ್ ಹಾಗೂ ಶೃತಿ ದಂಪತಿಯ ಎರಡನೇ ಮಗಳು ತೇಜಸ್ವಿನಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದ ಬಾಲೆ. ಶಾಲೆಯಲ್ಲಿ ಆಟ ಪಾಟದಲ್ಲು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇದ್ದಳು. ಇಷ್ಟೊಂದು ಆಕ್ಟೀವ್ ಆಗಿದ್ದ ಬಾಲಕಿಗೆ 11.30 ರ ವೇಳೆ ಶಾಲೆಯ ಆವರಣದಲ್ಲಿ ಹೃಧಯಾಘಾತವಾಗಿ ಕುಸಿದು ಬಿದ್ದಿದ್ದಾಳೆ ತಕ್ಷಣವೇ ಶಿಕ್ಷಕರು ಆಕೆಯನ್ನ ಜೆಎಸ್ ಎಸ್ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ತೇಜಸ್ವಿನಿಗೆ ಚೆಸ್ಟ್ ಮಸಾಜ್ ಹಾಗೂ ಇಸಿಜಿ ಮಾಡಿದ್ದಾರೆ ಈ ವೇಳೆ ಬಾಲಕಿ ಬ್ರಾಟ್ ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ತಕ್ಷಣವೇ ಶಾಲೆಯ ಆಡಳಿತ ಮಂಡಳಿ ಮೃತ ವಿದ್ಯಾರ್ಥಿನಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಮೃತದೇಹವನ್ನ ಮನೆಗೆ ತೆಗೆದು ಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಹೃದಯಾಘಾತವಾಗುವ ತಿಂಗಳ ಮೊದಲೇ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ!
ಅದೇನೆ ಹೇಳಿ 8 ವರ್ಷದ ಬಾಲೆಗೆ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದು ನಿಜಕ್ಕು ದುರಂತವೇ ಸರಿ. ಸದ್ಯ ಪೋಷಕರು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪದ ಕಾರಣ ಮೃತದೇಹವನ್ನ ಪೋಷಕರಿಗೊಪ್ಪಿಸಿದ್ದು ಚಾಮರಾಜನಗರ ಟೌನ್ ಪೊಲೀಸರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಯಾರಿಗೂ ಇಂತಹ ಸಾವು ಬರದಿರಲೇ ಅಂತಾ ಪೋಷಕರು ಕಣ್ಣೀರು ಸುರಿಸಿದ್ದಾರೆ..