ಪೌರ ಕಾರ್ಮಿಕರ ಕಾಲು ತೊಳೆದು ಗೌರವಿಸಿದ ಮೊದಲ ಪ್ರಧಾನಿ ಮೋದಿ; ಚಕ್ರವರ್ತಿ ಸೂಲಿಬೆಲೆ

By Ravi JanekalFirst Published Mar 16, 2024, 9:19 PM IST
Highlights

'ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷದಿಂದ ಒಂದೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಅಪರೂಪದ ಪ್ರಧಾನ ಸೇವಕ ಅಂದರೆ ಅದು ಮೋದಿ' ಮಂಡ್ಯದಲ್ಲಿ ನಡೆದ ನಮೋ ಬ್ರಿಗೇಡ್ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತು

ಮಂಡ್ಯ (ಮಾ.16): ನರೇಂದ್ರ ಮೋದಿ ಪ್ರಧಾನಿ ಆಗುವ ಮೊದಲೇ 'ನಮೋ ಬ್ರಿಗೇಡ್' ಕಟ್ಟಿದ್ದೆವು. ನಮ್ಮ ಗುರಿ ಉದ್ದೇಶ ಒಂದೇ. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಂದು ನಮೋ ಬ್ರಿಗೇಡ್ ವತಿಯಿಂದ ಮಂಡ್ಯದ ಫ್ಯಾಕ್ಟರಿ ಸರ್ಕಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮಾತನಾಡಿದರು. ಮೊದಲು ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನಲೆ ಫ್ಯಾಕ್ಟರಿ ಸರ್ಕಲ್‌ ಮೈದಾನಕ್ಕೆ ಶಿಫ್ಟ್ ಮಾಡಲಾಯಿತು. ಸ್ಥಳ ಬದಲಾವಣೆ ಆದರೂ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಅಭಿಮಾನಕ್ಕೆ ಇಲ್ಲಿಗೂ ಬಂದಿದ್ದೀರಿ, ನೂರಾರು ಜನರು ಭಾಗಿಯಾಗಿದ್ದೀರಿ. ಈ ಬಾರಿಯೂ ಬಿಜೆಪಿ ಗೆಲ್ಲುತ್ತದೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Loksabha election 2024: ಉತ್ತರ ಕನ್ನಡದಿಂದ ಅನಂತಕುಮಾರ ಹೆಗ್ಡೆ ಬದಲು ಸೂಲಿಬೆಲೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರು ಚಕ್ರವರ್ತಿ ಸುಳ್ಳು ಹೇಳುತ್ತಾರೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ನನ್ನ ಭಾಷಣದ ಒಂದು ತುಣುಕನ್ನು ತೆಗೆದು ಅಪಪ್ರಚಾರ ಮಾಡಿದ್ದಾರೆ. ವಿಕೃತ ಪ್ರಚಾರ ಮಾಡಿ ಕಲ್ಲು ಹೊಡೆದರು. ಎರಡು ವರ್ಷ ನಾನು ಕಾಂಗ್ರೆಸ್‌ನವರಿಗೆ ಉತ್ತರ ಕೊಡಲಿಲ್ಲ. ಆದರೆ ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಬಿಜೆಪಿ 400 ಸ್ಥಾನಗಳನ್ನು ಗೆಲ್ಲುತ್ತದೆ ಎಂದು. ಹೀಗಾಗಿ ಅವರೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಮೋದಿ ಅಲೆ ಹೇಗಿದೆ ಅಂದ್ರೆ ಮಂತ್ರಿಗಳೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೆದರುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅಪರೂಪದ ಪ್ರಧಾನ ಸೇವಕ ಮೋದಿ:

ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷದಿಂದ ಒಂದೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಅಪರೂಪದ ಪ್ರಧಾನ ಸೇವಕ ಅಂದರೆ ಅದು ಮೋದಿ. ಸಾರ್ಕ್ ಪ್ರಮುಖರನ್ನು ಕರೆದು ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ದೇಶದ ಜನರನ್ನ ರೇಡಿಯೋ ಮೂಲಕ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಮುಟ್ಟಿದ್ದಾರೆ. ಮೋದಿ ಅವರು ವಿಶ್ವದ ಯಾವುದೇ ಮೂಲೆಗೆ ಹೋದರೂ ಹಿಂದೂತ್ವ ಬಿಡಲಿಲ್ಲ. ಶ್ವೇತಭವನಕ್ಕೆ ಹೋದರೂ ನವರಾತ್ರಿ ಉಪವಾಸ ಬಿಡಲಿಲ್ಲ. ಮುಸಲ್ಮಾನರ ಮನಸ್ಸನ್ನು ಕೂಡ ಮೋದಿ ಗೆದ್ದಿದ್ದಾರೆ. ದೀಪಾವಳಿಯನ್ನ ಸೈನಿಕರೊಂದಿಗೆ ಆಚರಣೆ ಮಾಡಿದ್ದಾರೆ. ಪೌರ ಕಾರ್ಮಿಕರ ಕಾಲು ತೊಳೆದು ಗೌರವಿಸಿದ ಮೊದಲ ಪ್ರಧಾನಿ ಮೋದಿ, ದೇಶದ ಆರ್ಥಿಕತೆಗಾಗಿ demonetization ಮಾಡಿದ ಮೊದಲ ಪ್ರಧಾನಿ ಮೋದಿ. Demonetization ನಂತರ ವಿಶ್ವದ 5ನೇ ಶ್ರೀಮಂತ ರಾಷ್ಟ್ರ ಆಯ್ತು ಭಾರತ. ಪಾಕಿಸ್ತಾನ ಇದೀಗ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ಪಾಕಿಸ್ಥಾನಕ್ಕೆ ಯಾಕೆ ಈ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಅವರಿಗೆ ಕೇಳಬೇಕು. ಆರ್ಟಿಕಲ್ 370 ಕಿತ್ತು ಬಿಸಾಡು ಸಾಹಸ ತೋರಿದ್ದು ಪ್ರಧಾನಿ ಮೋದಿ ಎಂದು ಹಾಡಿಹೊಗಳಿದರು.

ಇವತ್ರು ಕಾಶ್ಮೀರದಲ್ಲಿ ನಿರ್ಭಯವಾಗಿ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡಬಹುದು. ಅದಕ್ಕೆ ಕಾರಣ ನರೇಂದ್ರ ಮೋದಿ.  ಕಳೆದ ಐದುನೂರು ವರ್ಷದಲ್ಲಿ ಇಂತಹ ರಾಜ ಬರಲಿಲ್ಲ. 75 ವರ್ಷಗಳಲ್ಲಿ ಶ್ರೇಷ್ಠ ಪ್ರಧಾನಿ ಅನ್ನೊಕ್ಕಿಂತ ರಾಜ ಅನ್ನೋಬಹುದು. ರಾಮಮಂದಿರಕ್ಕೆ ಬರಲು ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಅಹ್ವಾನ ಕೊಟ್ಟರೂ ಮುಸ್ಲಿಂರ ತುಷ್ಟೀಕರಣಕ್ಕಾಗಿ ಬರಲಿಲ್ಲ.

ರಾಮಮಂದಿರ ನಮ್ಮ ಪ್ರೇರಣೆ ಮಂದಿರ. ಕಾಂಗ್ರೆಸ್ ನವರಿಗೆ ಇದೆಲ್ಲ ಹೇಳಿದ್ರೆ ಟೆಕ್ಷನ್ ಆಗುತ್ತಾರೆ. ಕಾಂಗ್ರೆಸ್ ನವರು ಅಂಬೇಡ್ಕರ್ ಅವರಿಗೆ ಯಾಕೆ ಭಾರತ ರತ್ನ ಕೊಡಲಿಲ್ಲ. ಬಾಬ ಸಾಹೇಬರಿಗೆ ಪಂಚತೀರ್ಥ ಅರ್ಪಿಸಿದ್ದು ಮೋದಿ ಅವರು. ಆದರೆ ಅಂಬೇಡ್ಕರ್ ಅವರಿಗೆ ಮೋದಿ ಏನು ಮಾಡಿದ್ರು ಎಂದು ಕಾಂಗ್ರೆಸ್ ‌ನವರು ಪ್ರಶ್ನೆ ಮಾಡುತ್ತಾರೆ. ದೇಶದ ಬದಲಾವಣೆಯ ಹರಿಕಾರ ಮೋದಿ. 22 ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದು ಭ್ರಷ್ಟಾಚಾರದ ಆರೋಪ ಇಲ್ಲ. ಸ್ಕ್ಯಾಮ್ ಗಳ ದೇಶವನ್ನ ಕಾಂಗ್ರೆಸ್ ಮಾಡಿ ಇಟ್ಟಿದ್ದರು ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಜನರ ಹೃದಯಗಳನ್ನೇ ಹ್ಯಾಕ್ ಮಾಡಿದ್ದಾರೆ: ಚಕ್ರವರ್ತಿ ಸೂಲಿಬೆಲೆ

ಯಾರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೋ ಅರವನ್ನ ಸಮರ್ಥನೆ ಮಾಡಿಕೊಳ್ಳುತ್ತಾರೋ ಅವರಿಗೆ ನಯಾ ಪೇಸಾ ಕಿಮ್ಮತಿಲ್ಲ. ನಾವು ಜಗತ್ತಿನ 20 ರಾಷ್ಟಗಳಿಗೆ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿದ್ದೇವೆ. ನೂರು ರಾಷ್ಟ್ರಗಳಿಗೆ 30 ಕೋಟಿ ವ್ಯಾಕ್ಸಿನ್ ಕಳುಹಿಸಿದ್ದಾರೆ. ಮೋದಿ ಅವರ ಬಗ್ಗೆ ನನಗೆ ಗೊತ್ತಿರುವ ವಿಚಾರಗಳನ್ನ ಹೇಳುತ್ತಿದ್ದೇನೆ. ಕಾಂಗ್ರೆಸ್ ನವರ ಮೇಲೆ ಯಾಕೆ ಬೇಜಾರು ಅಂದರೆ
ಕಾಂಗ್ರೆಸ್ ಎಂಎಲ್‌ಎ ಮನೆಗೆ ಬೆಂಕಿ ಹಚ್ಚಿದವರನ್ನ ಬ್ರದರ್ ಅನ್ನುತ್ತಾರೆ ಎಂದು ಡಿಕೆ ಶಿವಕುಮಾರ್ ಹೆಸರೇಳದೇ ತಿವಿದರು.

click me!