ಬಿಜೆಪಿ ಟಿಕೆಟ್‌ ಡೀಲ್‌ ಪ್ರಕರಣ: ಚೈತ್ರಾ ಕುಂದಾಪುರ ಖ್ಯಾತಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಾರಣ..!

By Girish Goudar  |  First Published Sep 15, 2023, 11:39 AM IST

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಒಂದೇ ಒಂದು ಟ್ವೀಟ್‌ನಿಂದ ಚೈತ್ರಾ ಕುಂದಾಪುರ ಅವರು ಪ್ರವರ್ಧಮಾನಕ್ಕೆ ಬಂದಿದ್ದರು. ಈ ಟ್ವೀಟ್‌ ಬಳಿಕ ಚೈತ್ರಾ ಕುಂದಾಪುರ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದರು. 


ಉಡುಪಿ(ಸೆ.15):  ಉದ್ಯಮಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ಪಡೆದು ವಂಚಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಚೈತ್ರಾ ಕುಂದಾಪುರ ಅವರು ಹೇಗೆಲ್ಲ ಪ್ರಖ್ಯಾತಿ ಗಳಿಸಿದ್ದರು ಎಂಬ ಸಂಗತಿ ಬಲು ರೋಚಕವಾಗಿದೆ. 
ಚೈತ್ರಾ ಕುಂದಾಪುರ ಖ್ಯಾತಿಗೆ ಕಾರಣವಾಗಿತ್ತು ಆ ಒಂದು ಟ್ವೀಟ್!

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಒಂದೇ ಒಂದು ಟ್ವೀಟ್‌ನಿಂದ ಚೈತ್ರಾ ಕುಂದಾಪುರ ಅವರು ಪ್ರವರ್ಧಮಾನಕ್ಕೆ ಬಂದಿದ್ದರು. ಈ ಟ್ವೀಟ್‌ ಬಳಿಕ ಚೈತ್ರಾ ಕುಂದಾಪುರ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದರು. 

Tap to resize

Latest Videos

undefined

ಬಿಜೆಪಿ ಟಿಕೆಟ್‌ ಡೀಲ್‌ ಕೇಸ್‌: ಚೈತ್ರಾ ಕುಂದಾಪುರ ಬಾಯಿಯಲ್ಲಿ ನೊರೆ, ಆಸ್ಪತ್ರೆಗೆ ದಾಖಲು

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೈತ್ರಾ ಕುಂದಾಪುರಳನ್ನು 'ಡೇರಿಂಗ್ ಗರ್ಲ್' ಎಂದಿದ್ದರು. 2018 ರಲ್ಲಿ ಚೈತ್ರಾ ಡೇರಿಂಗ್ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದರು.  ಚೈತ್ರಾ ಅಂದು ಕಾಂಗ್ರೆಸ್, ಎಡಪಕ್ಷಗಳ ಭಾರತ್ ಬಂದ್‌ ಅನ್ನು ವಿರೋಧಿಸಿದ್ದರು. ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಚೈತ್ರಾ ಜಗಳಕ್ಕಿಳಿದಿದ್ದರು. ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದಳು. ಕಾಂಗ್ರೆಸ್ ವಿರುದ್ಧ ಒಬ್ಬಂಟಿಯಾಗಿ ಮಾಡಿದ ಹೋರಾಟದ ವಿಡಿಯೋ ಭಾರೀ ಸದ್ದು ಮಾಡಿತ್ತು. ಆ ಒಂದು ವೀಡಿಯೋ ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿತ್ತು. 

ವಿಡಿಯೋ‌ ರೀಟ್ವೀಟ್ ಮಾಡಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚೈತ್ರಾ ಕುಂದಾಪುರಳನ್ನ ಹೊಗಳಿದ್ದರು. ಆ ಮೂಲಕ ಚೈತ್ರಾ ಕುಂದಾಪುರ ತನ್ನ ಮಾರ್ಕೆಟಿಂಗ್ ಹೆಚ್ಚಿಸಿದ್ದರು. 

ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಂದು ಅಬ್ಬರಿಸಿದ್ದಳು. ನಿರ್ಮಲಾ ಸೀತರಾಮನ್ ಟ್ವೀಟ್‌ನಿಂದ ತನಗೆ ಕೇಂದ್ರದ ಜೊತೆಗೆ ಲಿಂಕ್ ಇರುವುದಾಗಿ ಬಿಂಬಿಸಿಕೊಂಡಿದ್ದಳು. ಇದನ್ನೇ ನಂಬಿದ ಗೋವಿಂದ ಪೂಜಾರಿಗೆ ಚೈತ್ರಾ ಪಂಗನಾಮ ಹಾಕಿದ್ದರು. ಇಂದಿಗೂ ನಿರ್ಮಲಾ ಸೀತಾರಾಮನ್ ಜೊತೆಗೆ ಸಂಪರ್ಕವಿರುವುದಾಗಿ ಚೈತ್ರಾ ಕುಂದಾಪುರ ಬಿಂಬಿಸಿಕೊಂಡಿದ್ದಳು. 

click me!