ನನ್ನ ಜತೆ ವ್ಯವಹಾರ ಮಾಡಿದವರಿಗೆಲ್ಲ ಸಿಬಿಐ ನೋಟಿಸ್‌: ಡಿಕೆಶಿ ಟೀಕೆ

By BK AshwinFirst Published Aug 25, 2022, 12:55 PM IST
Highlights

ಯಾರ್ಯಾರು ನನ್ನ ಹತ್ರ ವ್ಯವಹಾರ ಮಾಡಿದ್ದಾರೋ, ನನ್ನ ಜೊತೆ ಬ್ಯುಸಿನೆಸ್‌ ಇದೆಯೋ, ಅವರೆಲ್ಲರಿಗೂ ನೋಟಿಸ್ ಕೊಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಸಿಬಿಐ ನೋಟಿಸ್‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ವಿಜಯ್ ಮುಳುಗುಂದ್‌ಗೆ ಸಿಬಿಐ ನೋಟಿಸ್‌ ನೀಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ಮುಳುಗುಂದ್ ಅವರು ನಮ್ಮ ಪಾರ್ಟಿಯ ಜನರಲ್ ಸೆಕ್ರೆಟರಿ, ನನ್ನ ಆಪ್ತ. ಇನ್ನು, ಅವರೊಬ್ಬರ ಮೇಲೆ ಮಾತ್ರ ನೋಟಿಸ್‌ ಕೊಟ್ಟಿಲ್ಲ. 30-40 ಜನರ ಮೇಲೆ ನೋಟಿಸ್ ಕೊಟ್ಟಿದ್ದಾರೆ. ಯಾರ್ಯಾರು ನನ್ನ ಹತ್ರ ವ್ಯವಹಾರ ಮಾಡಿದ್ದಾರೋ, ನನ್ನ ಜೊತೆ ಬ್ಯುಸಿನೆಸ್‌ ಇದೆಯೋ, ಅವರೆಲ್ಲರಿಗೂ ನೋಟಿಸ್ ಕೊಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು, ನಾವು ಇದನ್ನು ಮಾತನಾಡಬಾರದು ಲೀಗಲ್ ಆಗಿ ಫೇಸ್ ಮಾಡೋಣ ಎಂದುಕೊಂಡಿದ್ದೇನೆ. ನಾನು ಒಂದು ಲೆಟರ್‌ ಕೂಡ ಬರೆದಿದ್ದೆ. ಚುನಾವಣೆ ಇದೆ, ಪಕ್ಷಕ್ಕ ನನ್ನ‌ ಅಗತ್ಯತೆ ಇದೆ, ಜನರ ಸಮಸ್ಯೆಗಳಿವೆ ಅಂತ ಪತ್ರ ಬರೆದಿದ್ದೆ. ಈ ಮಧ್ಯೆ, ಈಗಿರುವ ಮಂತ್ರಿಗಳು ಶಾಸಕರಾಗಿದ್ದಾಗ ಎಷ್ಟಿತ್ತು ಆಸ್ತಿ, ಈಗ ಬಿಜೆಪಿಯವರದ್ದು ಎಷ್ಟು ಆಗಿದೆ ಆಸ್ತಿ. ಈ ಎಲ್ಲವನ್ನೂ ನಾನು ಆರ್‌ಟಿಐಯಲ್ಲಿ ಮಾಹಿತಿ ತೆಗೆದು ಇಟ್ಟುಕೊಂಡು ಕೂತಿದ್ದೇನೆ ಎಂದೂ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 

ಬರೀ ಹೇಳಿಕೆ ಬೇಡ, ಕೂಡ್ಲೇ ತನಿಖೆ ಮಾಡಿ, ಸಿಐಡಿ- ಇಡಿಗೆ ವಹಿಸಿ: ಸರ್ಕಾರಕ್ಕೆ ಡಿಕೆಶಿ ಸವಾಲ್

ನನಗೆ ಆಂತರಿಕ ಮಾಹಿತಿ ಇದೆ, ನಮಗೂ ಕಿವಿಗೆ ಹೇಳೋರು ಇದ್ದಾರೆ. ಈ ದೇಶದ ಕಾನೂನು ಬಗ್ಗೆ ನನಗೆ ಗೌರವವಿದೆ. ನನ್ನ ಪ್ರಾಮಾಣಿಕತ ಮೇಲೆ ನನಗೆ ನಂಬಿಕೆ ಇದೆ. ನನಗೆ, ನಮ್ಮ ಪಕ್ಷಕ್ಕೆ ಬೆಲೆ ಸಿಗುತ್ತೆ ಅನ್ನುವ ನಂಬಿಕೆ ಇದೆ. ಏನ್ ಬೇಕಾದ್ರೂ ಮಾಡಿಕೊಳ್ಳಲಿ ನಾನು ಎಲ್ಲದನ್ನು ಫೇಸ್ ಮಾಡೋದಕ್ಕೆ ರೆಡಿ ಇದ್ದೇನೆ ಎಂದೂ ಸಿಬಿಐ ನೋಟಿಸ್‌ ನೀಡಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ನನ್ನ ತಾಯಿ ಆಸ್ತಿಯನ್ನ ನನ್ನ ಬೇನಾಮಿ ಅಂತ ಪ್ರಾಪರ್ಟಿನೆಲ್ಲಅವರ ಆಸ್ತಿಯನ್ನೆಲ್ಲ ಸೀಜ್‌ ಮಾಡಿದ್ರು, ನನ್ನ ಕನಕಪುರದ ಮನೆ ಸಹಿತ ಸೀಜ್‌ ಮಾಡಿದ್ರು. ನನ್ನ ತಾಯಿ ಹೆಸರನ್ನಲ್ಲಿರುವ ಪ್ರಾಪರ್ಟಿ ಎಲ್ಲವನ್ನು ಕೂಡ ಸೀಜ್‌ ಮಾಡಿದ್ರು. ಕಿರುಕುಳಕ್ಕೆ ಒಂದು ಲಿಮಿಟೇಶನ್ ಇರಬೇಕು ಎಂದು ಡಿ.ಕೆ. ಶಿವಕುಮಾರ್‌ ಟೀಕೆ ಮಾಡಿದ್ದಾರೆ.

ಹಾಗೂ, ಈ ದೇಶದಲ್ಲಿ ಕಾನೂನು ಇದ್ದು, ಈ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಬಿಜೆಪಿಯವರು ಉಪಯೋಗ ಮಾಡಿಕೊಳ್ಳಲಿ ಅಥವಾ ದುರುಪಯೋಗ ‌ಮಾಡಿಕೊಳ್ಳಲಿ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನ ಮೇಲೆ ಎಷ್ಟು ಕೇಸ್ ಹಾಕಿದ್ದಾರೆ, ಆದಾಯ ತೆರಿಗೆ ಎಷ್ಟು ಫೈಲ್ ಮಾಡಿದ್ದಾರೆ, ಯಾವ ರೀತಿ ಫೈಲ್ ಮಾಡಿದ್ದಾರೆ, ಎಕನಾಮಿಕ್ ಅಫೇರ್ಸ್ ಕೋರ್ಟ್ ಅಲ್ಲಿ ಏನೇನಾಗಿದೆ - ಈ ಎಲ್ಲವನ್ನು ಕೂಡ ಒಂದು ಲಿಸ್ಟ್ ಮಾಡಿ ಇಟ್ಟಿದ್ದೇನೆ, ಈ ಸಂಬಂಧ ಮುಂದೆ ಮಾತನಾಡುತ್ತೇನೆ ಎಂದೂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಾನೇನು ಹಿಂದೂ ಅಲ್ವೇನ್ರಿ?, ಹಿಂದುತ್ವ ಅವರಪ್ಪನ ಆಸ್ತಿನಾ?: ಬಿಜೆಪಿಗರ ವಿರುದ್ಧ ಡಿಕೆಶಿ ಗರಂ

ಅಲ್ಲದೆ, ನಮ್ಮ ಸುತ್ತಮುತ್ತ ಇರುವ ವ್ಯವಹಾರ ವಹಿವಾಟು, ಬ್ಯುಸಿನೆಸ್‌,‌ಅಗ್ರಿಮೆಂಟ್ ಮಾಡಿಕೊಂಡವರು, ಬಾಡಿಗೆದಾರರು ಎಲ್ಲರಿಗೂ ಸೇರಿ ಕಿರುಕುಳ ಕೊಡುತ್ತಿದ್ದಾರೆ. ನಾನು ಎಲ್ಲದಕ್ಕೂ ರೆಡಿ ಇದ್ದೇನೆ. ಒಂದು ತಿಳಿದುಕೊಳ್ಳಿ, ನಮಗೂ ಅದೇ ಅರ್ಜಿ ಹಾಕೋದಕ್ಕೆ ಕೆಪಾಸಿಟಿ ಇದೆ. ಹೆಸರು ಹೇಳೋದು ಬೇಡ, ಹಾಲಿ ಇರುವ ಮಂತ್ರಿಗಳದ್ದೇ  ತೆಗೆಯಿರಿ. ಅವರು ಶಾಸಕರಾಗಿದ್ದಾಗ ಎಷ್ಟಿತ್ತು, ಈಗ ಎಷ್ಟಾಗಿದೆ ಎಂದು..? ಏನು ಇವರೆಲ್ಲ ಈರುಳ್ಳಿ, ಬೆಳ್ಳುಳ್ಳಿ, ಕಾಫಿ, ಅಡಿಕೆ ಬೆಳೆದಿದ್ದಾರಾ ಎಂದೂ ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ಇನ್ನು, ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕಾಂಗ್ರೆಸ್ ಏಜೆಂಟ್ ಆಗಿದ್ದರೆ, ಅವರು ಇವತ್ತಿನ ತನಕ ನನ್ನನ್ನಾಗಲಿ, ಸಿದ್ದರಾಮಯ್ಯನವರನ್ನಾಗಲಿ ಭೇಟಿ ಆಗಿರಲಿಲ್ಲ. ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿಯವ್ರು ಇವರ ಅನುಕೂಲಕ್ಕೋಸ್ಕರ ಆರೋಪ ಮಾಡುತ್ತಾರೆ ಎಂದೂ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. 

click me!