ಕಾವೇರಿ ನದಿ ನೀರು ಹೋರಾಟ, ಮಾಜಿ ಸಿಎಂ ಬಿಎಸ್‌ವೈ ಮತ್ತು ಬೊಮ್ಮಾಯಿ ಅರೆಸ್ಟ್

Published : Sep 23, 2023, 12:36 PM ISTUpdated : Sep 23, 2023, 12:57 PM IST
ಕಾವೇರಿ ನದಿ ನೀರು ಹೋರಾಟ, ಮಾಜಿ ಸಿಎಂ ಬಿಎಸ್‌ವೈ ಮತ್ತು ಬೊಮ್ಮಾಯಿ ಅರೆಸ್ಟ್

ಸಾರಾಂಶ

 ತಮಿಳುನಾಡಿಗೆ ಕಾವೇರಿ ನದಿ ನೀರನ್ನು  ಹರಿಸುವುದನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು,ಯಡಿಯೂರಪ್ಪ ಬೊಮ್ಮಾಯಿ‌ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು (ಸೆ.23): ತಮಿಳುನಾಡಿಗೆ ಕಾವೇರಿ ನದಿ ನೀರನ್ನು  ಹರಿಸುವುದನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಯಲ್ಲಿ ಭಾಗಿಯಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ  ಮೈಸೂರು ಬ್ಯಾಂಕ್ ಸರ್ಕಲ್ ಬಳಿ ರಸ್ತೆ ತಡೆ ಮಾಡಲು ಮುಂದಾದ ಬೊಮ್ಮಾಯಿ‌ ,ಅಶ್ವಥ್ ನಾರಾಯಣ್ ,ಕಾರಜೋಳ  ಸೇರಿದಂತೆ ಎಲ್ಲಾ ಬಿಜೆಪಿ ನಾಯಕರನ್ನು  ಪೊಲೀಸರು ವಶಕ್ಕೆ ಪಡೆದರು.

ಇನ್ನು ಕಾವೇರಿ ನದಿ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಬಹುತೇಕ ಮಂಗಳವಾರ ರಾಜ್ಯ ಬಂದ್‌ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಮಾತನಾಡಿದ  ಮಾಜಿ ಸಿಎಂ ಯಡಿಯೂರಪ್ಪ, ಕಾವೇರಿ ನದಿ ನೀರಿನ ವಿಷಯ ದಲ್ಲಿ ನಾವು ಮೇಲ್ಮನವಿ ಸಲ್ಲಿಸಬೇಕು. ಇಲ್ಲಿಗೆ ತಜ್ಞರ ತಂಡವನ್ನು ಕಳುಹಿಸಿಕೊಡಲಿ. ಜಲಾಶಯದ ನೀರಿನ ಮಟ್ಟ ವನ್ನು ನೋಡಲಿ. ಬೆಂಗಳೂರಿಗೆ ಕುಡಿಯುವ ನೀರು ಕೊಡದೆ ಇರುವ ಪರಿಸ್ಥಿತಿ ಇದೆ. ನಾವು ನೀರು ಬಿಡುವ ಪರಿಸ್ಥಿತಿ ಯಲ್ಲಿ ಇಲ್ಲ. ಇದರ ಬಗ್ಗೆ ಸುಪ್ರೀಂಕೋರ್ಟ್ ಮನವರಿಕೆ ಮಾಡಿಕೊಡುವ ಎಲ್ಲಾ ಪ್ರಯತ್ನ ವನ್ನು ಸರ್ಕಾರ ಮಾಡಬೇಕು.
ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಸರ್ಕಾರ ಆಗ್ರಹ ವಿಚಾರ. ಈಗಾಗಲೇ ನಮ್ಮ ಕುಮಾರಸ್ವಾಮಿ ಯವರು ಕಾವೇರಿ ಬಗ್ಗೆ ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ. ಇದರ ಬಗ್ಗೆಎಲ್ಲರಿಗೂ ಮಾಹಿತಿ ಇದೆ, ಎಲ್ಲರು ಇವರ ಪರವಾಗಿ ಇದ್ದಾರೆ ವಿನಹ ಯಾರು ಕೂಡ ಇದರ ವಿರೋಧ ಇಲ್ಲ. ಇದಕ್ಕೆ ಒಂದೇ ಮಾರ್ಗ,ಮೇಲ್ಮನವಿ ಸಲ್ಲಿಸಬೇಕು. ತಜ್ಞರನ್ನು ಕಳುಹಿಸಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಅವಲೋಕಿಸಬೇಕು. ಆ ನಂತರ ನೀವು ಏನು ತೀರ್ಮಾನ ತಗೊತ್ತೀರೋ ಅದಕ್ಕೆ ಬದ್ದರಾಗಿ ತೀರ್ಮಾನ ಮಾಡ್ತೀವಿ ಎಂದಿದ್ದಾರೆ.

ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಹೇಳಿಕೆ ನೀಡಿ, ಡಿಕೆ ಶಿವಕುಮಾರ್ ಬ್ರಾಂಡ್ ಬೆಂಗಳೂರು ಎಂದು ಕೊಂಡು ರೋಲ್ ಕಾಲ್ ಮಾಡ್ತಾ ಕುಳಿತಿದ್ದಾರೆ. ರಾಜಕೀಯ ಕಾರಣಕ್ಕೆ ತಮಿಳುನಾಡಿನ ಸ್ಟಾಲಿನ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ದ್ರೋಹಿ ಮುಖ್ಯಮಂತ್ರಿ. ಮೇಕೆದಾಟು ಪಾದಯಾತ್ರೆ ಮಾಡಿದ್ರು ಈಗ ತಮಿಳುನಾಡಿಗೆ ಬೇಸರ ಆಗುತ್ತದೆ ಎಂದು ಡಿಕೆ ಶಿವಕುಮಾರ್ ಮೇಕೆದಾಟು ಬಗ್ಗೆ ಮಾತೇ ಆಡಲ್ಲ ಎಂದಿದ್ದಾರೆ.

ಚುನಾವಣೆಗೆ ಸಿದ್ದರಾಮಯ್ಯ ಕುಕ್ಕರ್‌ ಕೊಟ್ಟಿದ್ದಾರೆಂದು ನಾನು ಹೇಳಿಲ್ಲ: ಸಿಎಂ ಪುತ್ರ

ಇನ್ನು ಬೊಮ್ಮಾಯಿ ಮಾತನಾಡಿ, ಈ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಅಭಿವೃದ್ಧಿ ಸಂಪೂರ್ಣ ನಿಂತಿದೆ. ಕರ್ನಾಟಕ ರಾಜ್ಯ ವನ್ನು ಅದೋಗತಿಗೆ ತೆಗೆದುಕೊಂಡು ಹೋಗಿದೆ. ನೆಲ ಜಲ ರಕ್ಷಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಯಾವ ಬದ್ಧತೆಯಿಂದ ಕೆಲಸ ಮಾಡಿಲ್ಲ. ಬರುವಂತ ದಿನದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಬರದಾಗಿ ಹಾಹಾಕಾರ ಉಂಟಾದರೆ ಅದಕ್ಕೆ ಕಾರಣ ಈ ಸರ್ಕಾರ. ಆಜ್ಞೆ ಮಾಡುವ ಮೊದಲೇ ನೀರು ಬಿಡಲು ಶುರು ಮಾಡಿದ್ರು. ಸರ್ವ ಪಕ್ಷ ಸಭೆಯಲ್ಲಿ ಹೇಳಿದ್ವಿ. ಸುಪ್ರೀಂನಲ್ಲಿ ದಾವೆ ಹಾಕಿ ಎಂದ್ವಿ. ಆದರೆ ಇವರು ಹಾಕಿಲ್ಲ. ತಮಿಳುನಾಡು ಅಕ್ರಮವಾಗಿ ವ್ಯವಸಾಯ ಮಾಡ್ತಾ ಇದೆ. ಇದನ್ನು cwma ನಲ್ಲೂ ನಮ್ಮವರೂ ಹೇಳಿಲ್ಲ. ಹೀಗಾಗಿ ನಮ್ಮ ವಿರುದ್ಧ ತೀರ್ಪು ಬರ್ತಾ ಇದೆ. ಸುಪ್ರೀಂ ಕೋರ್ಟ್ ಫಾಲೊ ಮಾಡಿ ರೈತರ ಹಿತ ಕಾಪಾಡುತ್ತೇವೆ ಎಂದು ಡಿಕೆಶಿ ಹೇಳಿದ್ರು. ರೈತರು ಸುಪ್ರೀಂ ಕೋರ್ಟ್ ಗೆ ಹೋಗಲಿ ಎಂದರು
ಈ ರೀತಿ ಯಾರು ಮಾತಾಡಿರಲಿಲ್ಲ. ಬೆಂಗಳೂರು ಬಹುಮುಖ್ಯ ನಗರ ಇಲ್ಲಿ ವಾಣಿಜ್ಯ ಚಟುವಟಿಕೆಗಳು ಇದೆ. ಇವರು ಬ್ರಾಂಡ್ ಬೆಂಗಳೂರು ಎನ್ನುತ್ತಾರೆ. ನೋಡೊಣ ಬ್ರಾಂಡ್ ಮಾಡ್ತಾರೊ ಬ್ಯಾಂಡ್ ಮಾಡ್ತಾರೊ ಎಂದು. ಸಿದ್ದರಾಮಯ್ಯ ನೀರು ಬಿಡಲ್ಲ ಎನ್ನುತ್ತಾರೆ. ಡಿಕೆಶಿ ನೀರು ಬಿಡ್ತೇನೆ ಎನ್ನುತ್ತಾರೆ. ರಾಜಕೀಯ ಕಾರಣಕ್ಕೆ ನೀರು ಬಿಡ್ತಾ ಇದ್ದಾರೆ ಎಂದು ಆರೋಪಿಸದ್ದಾರೆ.

ಕಾವೇರಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಜನತಾ ದಂಗೆ ಖಚಿತ: ಮಾಜಿ ಸಿಎಂ ಬೊಮ್ಮಾಯಿ

ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಇಂದು 100 ಕ್ಕೂ ಹೆಚ್ಚು ಸಂಘಟನೆಗಳ ಮಹತ್ವದ ಸಭೆ ನಡೆದಿದೆ. ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿಕೆ ನೀಡಿದ್ದು, ಕಳೆದ 45 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದ್ರೆ ಸರ್ಕಾರ ನಮ್ಮ ಹೋರಾಟವನ್ನ ಪರಿಗಣಿಸಿಲ್ಲ. ಕಾವೇರಿ ನೀರನ್ನ ಜನ ಕುಡಿಯಲು ಬಳಸುತ್ತಿದ್ದಾರೆ. ಬೆಂಗಳೂರು ನಗರ ನಾಗರಿಕರ ವಿಶ್ವಾಸಗಳಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕನ್ನಡಪರ ಸಂಘಟನೆ, ಹೋಟೆಲ್ ಮಾಲೀಕರ ಸಂಘ, ಅಪಾರ್ಟ್ಮೆಂಟ್ ಅಸೋಸಿಯೇಷನ್. ತಮಿಳುನಾಡಲ್ಲಿ ಪ್ರಾದೇಶಿಕ ಪಕ್ಷವಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ , ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಎಲ್ಲರೂ ಎಲೆಕ್ಷನ್ ಗೆ ತಮ್ಮ ಲಾಭ ಪಡೆದುಕೊಳ್ಳಲು ನೋಡುತ್ತಿದ್ದಾರೆ. ನೆಲ, ಜಲ ವಿಚಾರ ಬಂದಾಗ ನಾವೆಲ್ಲರೂ ಒಂದೆ. ಯಾವುದೇ ಸಂಘಟನೆ ವಿಧಾನಸೌಧ ಮುತ್ತಿಗೆ ಇರಬಹುದು. ಅಥವಾ ಹೋರಾಟ ಮಾಡಿದ್ರು ನಾವು ಭಾಗಿಯಾಗುತ್ತೇವೆ. ಯಾವುದೇ ಪಕ್ಷ ಪ್ರತಿಭಟನೆ ಮಾಡಿದ್ರು ನಾವು ಭಾಗಿಯಾಗಿಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!