ರಾಜ್ಯ ಸರ್ಕಾರ ಜನರ ಹಿತ ಕಾಪಾಡದೇ ತಮಿಳುನಾಡಿಗೆ ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧ, ಖಂಡನೀಯ ಎಂದು ಹೇಳಿರುವ ಕೇಂದ್ರ ಸಚಿವ ಭಗವಂತ ಖೂಬಾ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ವರದಿ- ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬೀದರ್
ಬೀದರ (ಸೆ.26): ರಾಜ್ಯ ಸರ್ಕಾರ ಜನರ ಹಿತ ಕಾಪಾಡದೇ ತಮಿಳುನಾಡಿಗೆ ನೀರು ಬಿಡುತ್ತಿರುವುದು ಅಕ್ಷಮ್ಯ ಅಪರಾಧ, ಖಂಡನೀಯ ಎಂದು ಹೇಳಿರುವ ಕೇಂದ್ರ ಸಚಿವ ಭಗವಂತ ಖೂಬಾ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೀದರ್ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ಯೆಗಳು ಎದುರಾದರೇ ಧ್ವನಿ ಎತ್ತುವುದು ಪ್ರತಿಯೊಬ್ಬರ ಹಕ್ಕು, ಹೀಗೆ ಧ್ಚನಿ ಎತ್ತಿದವರನ್ನ ಹತ್ತಿಕ್ಕುವಂತ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಆರು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂಬುವುದಕ್ಕೆ ಕಾವೇರಿ ಹೋರಾಟ ಉತ್ತಮ ಉದಾಹರಣೆ ಎಂದರು.
ಕಾಫಿನಾಡಲ್ಲಿ ರಾಜ್ಯದಲ್ಲೇ ಅತಿದೊಡ್ಡ ಭೂ ಹಗರಣ; ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಮಂಜೂರು!
ಕಾವೇರಿ ನೀರು ನಮ್ಮ ಹಕ್ಕು, ನಮ್ಮ ಜನರಿಗೆ ಬೇಕಾಗುವ ನೀರು ಐಎನ್ಡಿಐ ಮೈತ್ರಿಗೋಸ್ಕರ ತಮಿಳುನಾಡಿಗೆ ನೀರು ಬಿಡುತ್ತಿದೆ ಸರಿಯಾದ ಕ್ರಮವಲ್ಲ. ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಪಕ್ಷದ ಎಲ್ಲಾ ನಾಯಕರು ನೀರು ಬಿಡುವ ವಿಚಾರಕ್ಕೆ ವಿರೋದ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮಾತು ಕೇಳಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿರುವವರಿಗೆ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಈ ಸರ್ಕಾರದ ತುಘಲಕ್ ದರ್ಬಾರಗೆ ಯಾರೂ ಜಗ್ಗಲ್ಲ, ಕುಗ್ಗಲ್ಲ, ಮುಂದಿನ ಚುನಾವಣೆಗಳಲ್ಲಿ ಇದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ. ಈ ಕೆಟ್ಟ ಸರ್ಕಾರದಿಂದ ಕನ್ನಡಿಗರು ತಲೆ ಬಾಗುವಂತ ಪರಿಸ್ಥಿತಿ ತಂದಿಟ್ಟಿದ್ದಾರೆ. ಅವರು ಎಷ್ಟೇ ಲಾಠಿ ಪ್ರಹಾರ ಮಾಡಿದರು. ಸಿಎಂ ಕುರ್ಚಿ ಕಿತ್ತಾಕುವವರೆಗೆ ಹೋರಾಟ ಮಾಡೋಣ ಬಿಜೆಪಿ ನಾಯಕರು ಕಾವೇರಿ ಹೋರಾಟ ಮಾಡವವರ ಜೊತೆ ಇದೆ ಎಂದು ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು.
ಕನ್ನಡಿಗರ ಕತ್ತು ಹಿಚುಕುವುದಕ್ಕೆಂದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂತಿದೆ: ಹೆಚ್ಡಿಕೆ
ಸಿದ್ದರಾಮಯ್ಯ ವಿರುದ್ಧ ಭಗವಂತ ಖೂಬಾ ತೀವ್ರ ವಾಗ್ದಾಳಿ
ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಏನೆಲ್ಲ ಸಹಾಯ ಬೇಕು ಎಲ್ಲಾ ಮಾಡಲು ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಕೇಂದ್ರ ನಾಯಕರು ಹೇಳಿದಾರೆ. ಮತ್ತೆ ಪ್ರಧಾನಿ ಅವರ ಮೇಲೆ ಬೊಟ್ಟು ಮಾಡುವುದು ಸಿಎಂ ಸಿದ್ದರಾಮಯ್ಯ ಬಿಡಬೇಕು. ಪ್ರಧಾನಿ ಮೋದಿ ಏನು ಮಾಡಬೇಕೆಂದು ನೀವು ಹೇಳಬೇಕಾಗಿಲ್ಲ, ನೀವು ಐಎನ್ಡಿಐಎ ಕೈಗೊಬ್ಬೆ ಆಗಬೇಡಿ ಸಿದ್ದರಾಮಯ್ಯ ಅವರೇ, ದರ್ಪ ತೋರಿದರೇ ಸಾಲದು ಮುಖ್ಯಮಂತ್ರಿಯಾಗಿ ಜನರ ಸಮಸ್ಯೆ ಬಗೆಹರಿಸಿ ಮೊದಲು. ರಾಜ್ಯದ ಜಲ, ನೆಲ ಸಮಸ್ಯೆ ಬಂದಾಗ ಈ ಹಿಂದೆ ಮುಖ್ಯಮಂತ್ರಿ ಕುರ್ಚಿ ಕೂಡ ಬಿಟ್ಟಿದಾರೆ. ನಿಮ್ಮಿಂದ ಆಗಿಲ್ಲ ನಿಮಗೆ ಯೋಗ್ಯತೆ ಇಲ್ಲ ಅಂದ್ರೆ ಸಿಎಂ ಕುರ್ಚಿ ಬಿಡಬೇಕು ಎಂದು ಸಿಎಂ ವಿರುದ್ಧ ಖೂವಾ ಗುಡುಗಿದರು.