ಕಾವೇರಿ ವಿಚಾರವಾಗಿ 1991ರಲ್ಲೇ ಬಂಗಾರಪ್ಪ ಅವರು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಅಂದು ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇತ್ತು, ಈಗ ಅದಕ್ಕಿಂತಲೂ ಭೀಕರ ಬರಗಾಲ ಪರಿಸ್ಥಿತಿ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಚಿತ್ರದುರ್ಗ (ಸೆ.21): ಕಾವೇರಿ ವಿಚಾರವಾಗಿ 1991ರಲ್ಲೇ ಬಂಗಾರಪ್ಪ ಅವರು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. ಅಂದು ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇತ್ತು, ಈಗ ಅದಕ್ಕಿಂತಲೂ ಭೀಕರ ಬರಗಾಲ ಪರಿಸ್ಥಿತಿ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಕಾವೇರಿ ನದಿ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು, ಕನ್ನಡ ಸಂಘಟನೆಗಳು ಹೆದ್ದಾರಿ ತಡೆದು ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ತೀವ್ರ ಖಂಡಿಸುತ್ತಿರುವ ಬೆನ್ನಲ್ಲೇ ಈ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
undefined
ಕಾಂಗ್ರೆಸ್ ರಾಜಕಾರಣ ಸಂಪೂರ್ಣ ಬಡವರ ಪರ: ಸಚಿವ ಮಧು ಬಂಗಾರಪ್ಪ
ಕಾವೇರಿ ನದಿ ನೀರಿನಂತಹ ವಿಚಾರದಲ್ಲಿ ರಾಜ್ಯದ ಜನತೆ, ಪಕ್ಷಾತೀತ ನಿರ್ಧಾರಗಳು ಮುಖ್ಯವಾಗಿರುತ್ತವೆ. ಆ ರೀತಿಯ ನಿರ್ಧಾರ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ನ್ಯಾಯಾಲಯದ ಮೊರೆ ಹೋಗುವ ಅವಕಾಶಗಳು ಹೆಚ್ಚಿವೆ. ಸೆಂಟ್ರಲ್ ವಾಟರ್ ಕಮಿಟಿಗೆ ಹೆಚ್ಚಿನ ಅಧಿಕಾರ ನೀಡಿದ್ದಾರೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ವಾಸ್ತವ ಸ್ಥಿತಿ ಅರಿಯಬೇಕು. ಎರಡೂ ರಾಜ್ಯ ಸಮಾಧಾನ ಆಗುವ ರೀತಿ ವ್ಯವಸ್ಥೆ ಕಲ್ಪಿಸಬೇಕು ಎಂದರು.
ರಾಜ್ಯದಲ್ಲಿ ಮಳೆಯೇ ಬಂದಿಲ್ಲ, ಈ ವರ್ಷ ಕೃಷಿ ಚಟುವಟಿಕೆಗೆ ನೀರಿಲ್ಲ. ಜಲಾಶಯಗಳ ಬರಿದಾಗಿದ್ದು ಕುಡಿಯೋಕೂ ನೀರಿನ ಅಭಾವ ಎದುರಾಗಿದೆ. ಈಗಿರುವಾಗ ತಮಿಳನಾಡಿಗೆ ನೀರು ಕೊಡಿ ಎಂದರೆ ಹೇಗೆ ಕೊಡುವುದು ಎಂದು ಪ್ರಶ್ನಿಸಿದರು.
ಬಿಜೆಪಿ ರಾಜಕೀಯದ ಮೂಲಕ ಬಡವರ ಬದುಕನ್ನು ಬೀದಿಗೆ ತರುತ್ತಿದೆ: ಮಧು ಬಂಗಾರಪ್ಪ
ಕಾವೇರಿ ನೀರಿನ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರು ಯಾವುದೇ ನಿರ್ಧಾರ ಕೈಗೊಂಡರು ನಾವು ಜತೆಗಿರುತ್ತೇವೆ. ಸಹಜವಾಗಿ ಬಂಗಾರಪ್ಪ ಕೈಗೊಂಡ ನಿರ್ಧಾರ ಈಗ ಹೋಲಿಸಲಾಗುತ್ತದೆ. ಆಗ ನೀರು ಬಿಟ್ಟಿರಲಿಲ್ಲ. ಆದರೆ ಬಳಿಕ ಕೆಲ ಸಿಎಂಗಳು ನೀರು ಬಿಟ್ಟರು, ಕೋರ್ಟ್ ಮೊರೆ ಹೋದರು. ಈಗಲೂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಎಲ್ಲಿಗೆ ಬಂದಿದೆ ಎಂಬುದು ತಿಳಿದಿಲ್ಲ. ಕೋರ್ಟ್ ಮೊರೆ, ಬಳಿಕ ಸಿಎಂ ಕೈಗೊಳ್ಳುವ ನಿರ್ಧಾರಕ್ಕೆ ನಾವು ಕೈಜೋಡಿಸುತ್ತೇವೆ ಎಂದರು.