ಇಂದು ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ: ಜಯಪ್ರಕಾಶ ಹೆಗ್ಡೆ

By Kannadaprabha NewsFirst Published Feb 29, 2024, 6:44 AM IST
Highlights

ಮುಖ್ಯಮಂತ್ರಿಯವರು ಇಂದು ಸಮಯ ನೀಡಿದ್ದು, ವರದಿ ಕೊಡುತ್ತೇವೆ. ಈ ಹಿಂದೆ ಕಾಂತರಾಜು ಅವರು ಅಧ್ಯಕ್ಷರಾಗಿದ್ದ ಸಂಗ್ರಹಿಸಿರುವ ದತ್ತಾಂಶ ಆಧಾರದ ಮೇಲೆ ವರದಿ ನೀಡುವಂತೆ ಸರ್ಕಾರ ಹೇಳಿತ್ತು. ಅದರಂತೆ, ವರದಿ ಸಿದ್ಧಪಡಿಸಲಾಗಿದೆ ಎಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ 

ಬೆಂಗಳೂರು(ಫೆ.29): ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಯನ್ನು ಗುರುವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಇಂದು(ಗುರುವಾರ) ಸಮಯ ನೀಡಿದ್ದು, ವರದಿ ಕೊಡುತ್ತೇವೆ. ಈ ಹಿಂದೆ ಕಾಂತರಾಜು ಅವರು ಅಧ್ಯಕ್ಷರಾಗಿದ್ದ ಸಂಗ್ರಹಿಸಿರುವ ದತ್ತಾಂಶ ಆಧಾರದ ಮೇಲೆ ವರದಿ ನೀಡುವಂತೆ ಸರ್ಕಾರ ಹೇಳಿತ್ತು. ಅದರಂತೆ, ವರದಿ ಸಿದ್ಧಪಡಿಸಲಾಗಿದೆ ಎಂದರು.

ಜಾತಿ ಗಣತಿ ವರದಿಗೆ ಸರ್ಕಾರ ಬದ್ಧ; 29ರೊಳಗೆ ವರದಿಸಲ್ಲಿಕೆ ನಿರೀಕ್ಷೆ: ಸಚಿವ ತಂಗಡಗಿ

ಅಂದು ರಾಜ್ಯದೆಲ್ಲೆಡೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಾಗಿದೆ. ಪ್ರತಿ ಮನೆಯ ಕುಟುಂಬದ ಸದಸ್ಯರು, ಉದ್ಯೋಗ, ಜಾತಿ, ಶಿಕ್ಷಣ, ಆಸ್ತಿ ಸೇರಿದಂತೆ ಒಟ್ಟು 54 ಪ್ರಶ್ನೆಗಳನ್ನು ಕೇಳಿ ದತ್ತಾಂಶ ಸಂಗ್ರಹಿಸಲಾಗಿದೆ. ಅದನ್ನು ಬಿಇಎಲ್ ಸಾಫ್ಟ್‌ವೇರ್‌ನಲ್ಲಿ ಸಂಗ್ರ ಹಿಸಿಡಲಾಗಿದೆ. ಈ ವರದಿ ಆಧಾರದ ಮೇಲೆ ಜನರಿಗೆ ಮುಂದಿನ ದಿನಗಳಲ್ಲಿ ಅಗತ್ಯ ಸೌಕರ್ಯಗಳನ್ನು ನೀಡಲು ಸಾಧ್ಯವಾಗುತ್ತದೆ. ಯಲ್ಲಿ ಏನಿದೆ ವರದಿ ಎಂದು ಗೊತ್ತಿಲ್ಲದ ಕಾರಣ ವರದಿ ಗುವ ಬಹಿರಂಗವಾಗುವ ಮೊದಲೇ ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ ಎಂದು ಹೆಗ್ಡೆ

2015-16ರಲ್ಲಿ ಸಮೀಕ್ಷೆ: 

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ 154 ಕೋಟಿ ರೂ. ವೆಚ್ಚದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ವಿರೋಧ ವ್ಯಕ್ತವಾದ ಕಾರಣ ಹಿಂದಿನ ಅವಧಿಯಲ್ಲಿ ಬಿಡುಗಡೆ ಮಾಡಿರಲಿಲ್ಲ. ವರದಿಯು ಲೋಪದೋಷಗಳಿಂದ ಕೂಡಿದ್ದು, ಮನೆ ಮನೆಗೆ ತೆರಳಿ ಸರಿಯಾದ ಮಾಹಿತಿ ಸಂಗ್ರಹಿಸಿಲ್ಲ. ವರದಿ ಅಧಿಕೃತ ವಾಗಿ ಸರ್ಕಾರಕ್ಕೆ ಸಲ್ಲಿಕೆಯಾ ಮಾಹಿತಿ ಸೋರಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. 

Caste census: ಜಾತಿಗಣತಿ ವರದಿ ತಿರಸ್ಕರಿಸಿ ಯಾವ್ಯಾವ ಸಚಿವರ ಸಹಿ ? ವರದಿ ಸ್ವೀಕರಿಸಿ ಸಹಿ ಹಾಕಿದ ಸಚಿವರು ಯಾರು ?

ವಿರೋಧಾಭಾಸ: 

ಸಾಮಾಜಿಕ, ಶೈಕ್ಷಣಿಕ ವರದಿಗೆ ರಾಜ್ಯದ ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಎರಡು ಸಮುದಾಯಗಳ ಮಠಾಧೀಶರು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಹಲವು ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಯ ವರನ್ನು ಭೇಟಿ ಮಾಡಿ ವರದಿಗೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.

ದಲಿತ, ಸಣ್ಣ ಸಮುದಾಯಗಳ ಸ್ವಾಗತ: ದಲಿತ ಸಂಘಟನೆಗಳು ಹಾಗೂ ರಾಜ್ಯದ ಕೆಲವು ಸಣ್ಣ ಸಮುದಾಯಗಳು ಸಾಮಾ ಜಿಕ, ಶೈಕ್ಷಣಿಕ ವರದಿ ಬಿಡುಗಡೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದವು. ವರದಿಗೆ ಬೆಂಬಲಿಸಿರುವ ಈ ಸಮುದಾಯಗಳ ಮುಖಂಡರು, ಮಠಾಧೀಶರುಗಳ ನಿಯೋಗಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಶೀಘ್ರದಲ್ಲೇ ವರದಿಯನ್ನು ಸ್ವೀಕರಿಸಿ, ಬಹಿರಂಗಪಡಿಸಿ, ಅದರಲ್ಲಿನ ಅಂಶಗಳನ್ನು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದ್ದರು.

click me!