Derogatory Statement: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದ ಮುಸ್ಲಿಂ ವ್ಯಕ್ತಿ ವಿರುದ್ಧ ಕೇಸ್‌

Kannadaprabha News   | Asianet News
Published : Feb 11, 2022, 07:57 AM IST
Derogatory Statement: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದ ಮುಸ್ಲಿಂ ವ್ಯಕ್ತಿ ವಿರುದ್ಧ ಕೇಸ್‌

ಸಾರಾಂಶ

* ​ ಅಯೂಬ್‌​ ಖಾನ್‌ ವಿರುದ್ಧ ರಾಜ್ಯದ ವಿವಿಧೆಡೆ ಪ್ರಕರಣ ದಾಖಲು  *  ಗೊಮ್ಮಟೇಶ್ವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಆರೋಪ  *  ಅಯೂಬ್‌​ ಖಾನ್‌ ವಿರುದ್ಧ ಕ್ರಮಕ್ಕೆ ಹಂಪನಾ ಆಗ್ರಹ  

ಮಂಡ್ಯ/ಧರ್ಮಸ್ಥಳ(ಫೆ.11): ಹಿ​ಜಾಬ್‌-ಕೇ​ಸರಿ(Hijab-Saffron) ವಿ​ಚಾರ ಈಗ ಜೈನ ಧರ್ಮಕ್ಕೂ(Jainism) ವ್ಯಾ​ಪಿ​ಸಿದೆ. ಖಾಸಗಿ ವಾಹಿನಿ ಚರ್ಚೆಯಲ್ಲಿ ಬಾಹುಬಲಿ ಬಗ್ಗೆ ಅವಹೇಳನಕಾರಿಯಾಗಿ(Derogatory) ಮಾತಾಡಿದ ಆರೋಪದ ಹಿನ್ನೆಲೆಯಲ್ಲಿ ಮೈ​ಸೂ​ರಿನ ನ್ಯೂ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಅ​ಯೂಬ್‌​ ಖಾನ್‌(Ayub Khan) ವಿ​ರುದ್ಧ ಗುರುವಾರ ಮತ್ತೆ ಮೂರು ದೂರು ದಾಖಲಾಗಿವೆ. 

ಮಂಡ್ಯದಲ್ಲಿ ಅ​ನಂತ​ನಾ​ಥ​ಸ್ವಾಮಿ ದಿ​ಗಂಬರ ಜೈನ ಸ​ಮಾ​ಜ​ದ​ವರು, ಧರ್ಮನಿಂದನೆ ಹಾಗೂ ಜಾತಿ ನಿಂದನೆ ಅಪರಾಧದಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸೆಂಟ್ರಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಧರ್ಮಸ್ಥಳ ಠಾಣೆಯಲ್ಲೂ ದೂರು ದಾಖಲಾಗಿವೆ. ಬುಧವಾರ ಮೂಡುಬಿದಿರೆ ಹಾಗೂ ಬೆಳಗಾವಿಯಲ್ಲಿ ದೂರು ದಾಖಲಾಗಿತ್ತು.

Insulted Hindu God: ಕೊರಗಜ್ಜನ ನಂತರ ಮತ್ತೆ ದಕ್ಷಿಣ ಕನ್ನಡದಲ್ಲಿ ಹಿಂದು ದೇವರ ಅವಹೇಳನ

ಆಯೂಬ್‌ ಖಾನ್‌ ಟಿವಿ ಚರ್ಚೆ ವೇಳೆ ಮೈಸೂರು ಸಂಸದ ಪ್ರತಾಪ್‌ ಸಿಂಹ(Pratap Simha) ಅವರನ್ನು ಟೀಕಿಸುವ ಭ​ರ​ದಲ್ಲಿ, ‘ನಿಮಗೇನಾದರೂ ಈ ದೇಶದ ಮೇಲೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರುವ ಗೊಮ್ಮಟೇಶ್ವರನಿಗೆ(Gommateshwara) ಚಡ್ಡಿ ಹಾಕಿಸಿ’ ಎಂದು ಹೇಳಿದ್ದರು.

ಗೊಮ್ಮಟೇಶ್ವರಗೆ ಚಡ್ಡಿ ತೊಡಿಸಿ ಎಂದಿದ್ದ ಕೈ ಮುಖಂಡನ ವಿರುದ್ಧ ಕ್ರಮಕ್ಕೆ ಹಂಪನಾ ಆಗ್ರಹ

ಬೆಂಗಳೂರು:  ಗೋಮಟೇಶ್ವರನಿಗೆ ಚಡ್ಡಿ ತೊಡಿಸಿ’ ಎಂದು ಅವಹೇಳನಕಾರಿಯಾಗಿ ಮಾತನಾಡಿರುವ ಮೈಸೂರಿನ ಕಾಂಗ್ರೆಸ್‌ ಮುಖಂಡ ಅಯೂಬ್‌ಖಾನ್‌ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ(Dr. H.P. Nararajiah) ಒತ್ತಾಯಿಸಿದರು.

ಕರ್ನಾಟಕ ಜೈನ ಅಸೋಸಿಯೇಷನ್‌(Karnataka Jain Association) ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಮಟೇಶ್ವರ ಮೂರ್ತಿಯ(Gommateshwara statue) ಬಗ್ಗೆ ಅಯೂಬ್‌ ಖಾನ್‌ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಬೆಂಗಳೂರು ನಗರ ಪೋಲಿಸ್‌ ಆಯುಕ್ತ ಕಮಲ್‌ ಪಂಥ್‌ ಅವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯಾವುದೇ ಒಂದು ಧರ್ಮದ ಆಚರಣೆ ಮತ್ತು ನಂಬಿಕೆಯನ್ನು ಅಪಹಾಸ್ಯ ಮಾಡುವ ಹಕ್ಕು ಯಾರಿಗೂ ಇಲ್ಲ. ಕೇಸರಿ ಮತ್ತು ಹಿಜಾಬ್‌ ಸಮರದಲ್ಲಿ ಎಲ್ಲ ಧರ್ಮಗಳನ್ನು ಎಳೆದು ತರುತ್ತಿರುವುದು ತಪ್ಪು. ಬೇರೆ ಧರ್ಮಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಕೇವಲವಾಗಿ ಮಾತನಾಡುವುದರಿಂದ ಅನವಶ್ಯಕ ಕಲಹ ಉಂಟಾಗುತ್ತದೆಯೇ ಹೊರತು, ಬೇರೆ ಯಾವ ಉಪಯೋಗವೂ ಇಲ್ಲ. ಜೈನ ಧರ್ಮ ಮಾತ್ರವಲ್ಲ ಯಾವುದೇ ಧರ್ಮವನ್ನೂ ನಿಂದಿಸುವ ಹಕ್ಕು ಯಾರಿಗೂ ಇಲ್ಲ ಎಂದರು.

Ramesh Kumar Controversy : ರಮೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹ

ಅಸೋಸಿಯೇಷನ್‌ ಅಧ್ಯಕ್ಷ ಬಿ.ಪ್ರಸನ್ನಯ್ಯ ಮಾತನಾಡಿ, ಅಯೂಬ್‌ ಖಾನ್‌ ವಿರುದ್ಧ ರಾಜ್ಯಾದ್ಯಂತ ಈಗಾಗಲೇ 40ಕ್ಕೂ ಅಧಿಕ ದೂರುಗಳನ್ನು ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸೋಷಿಯಲ್ ಮೀಡಿಯಾದಲ್ಲಿ ಧರ್ಮದ ಬಗ್ಗೆ ಅವಹೇಳನ: ಹರಿಹರದಲ್ಲಿ ಕಲ್ಲು ತೂರಾಟ

ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ(Social Media) ತಮ್ಮ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಲಾಗಿದೆಯೆಂದು ಆರೋಪಿಸಿ ಒಂದು ಕೋಮಿನ ಜನರು ಹರಿಹರದ ನಗರ ಪೊಲೀಸ್ ಠಾಣೆ ಎದುರು ಫೆ.07 ರಂದು  ದಿಢೀರ್ ಪ್ರತಿಭಟನೆ(Protest) ನಡೆಸಿದರಲ್ಲದೇ, ಪೊಲೀಸ್ ಜೀಪು ಮೇಲೆ ಕಲ್ಲು ತೂರಾಡಿದ್ದರಿಂದ ವಾಹನ ಜಖಂಗೊಂಡ ಘಟನೆಯೂ ವರದಿಯಾಗಿತ್ತು. 

ಹರಿಹರ(Harihara) ನಗರ ಪೊಲೀಸ್ ಠಾಣೆಯ ಎದುರು ರಾತ್ರಿ ಜಮಾಯಿಸಿದ ಒಂದು ಕೋಮಿನ ಉದ್ರಿಕ್ತ ಜನರು ಘೋಷಣೆ ಕೂಗುತ್ತಿದ್ದರೆ, ಕೆಲವರು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ(Stone Pelting) ನಡೆಸಲಾರಂಭಿಸಿದ್ದರು. ಠಾಣೆಯ ಮುಂಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೊಂದು ಕೋಮಿನ ಯುವಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ್ದ. ಆತನನ್ನು ಬಂಧಿಸಿ, ತಮ್ಮ ಕೈಗೆ ನೀಡುವಂತೆ ಒತ್ತಾಯಿಸಿ ಕೆಲವರು ಘೋಷಣೆ ಕೂಗ ತೊಡಗಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್