
ಬಳ್ಳಾರಿ : ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಸಾರ್ವಜನಿಕರ ಕೈಗೆ ಸಿಕ್ಕ ಕಾರು ಚಾಲಕನಿಗೆ ಜನ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ. ಎರಡು ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ನಂತ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಸಾರ್ವನಿಕರ ಕೈಗ ಸಿಕ್ಕ ಕಾರು ಚಾಲಕನಿಗೆ ಸಾರ್ವಜನಿಕರು ತಮ್ಮ ಕೈರುಚಿ ತೋರಿಸಿದ್ದಾರೆ. ಬಳ್ಳಾರಿ ಎಎಸ್ಎಂ ಮಹಿಳಾ ಕಾಲೇಜು ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಎರಡಕ್ಕೂ ಹೆಚ್ಚು ಬೈಕ್ ಕಾರು ಹಾಗೂ ಆಟೋಗೆ ಹಾನಿಯಾಗಿದೆ. ಜೊತೆಗೆ ಪಲ್ಟಿಯಾದ ಕಾರಿಗೂ ತೀವ್ರ ಹಾನಿಯಾಗಿದ್ದು, ಮುಂಭಾಗ ಹಿಂಭಾಗ ಹಾಗೂ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ. ಕಾರು ಚಾಲಕನ ಹುಚ್ಚಾಟದಿಂದ ರೊಚ್ಚಿಗೆದ್ದ ಜನ ಆತ ಗಾಯಗೊಂಡಿರುವುದನ್ನು ಲೆಕ್ಕಿಸದೇ ಬಾರಿಸಿದ್ದು, ಸ್ವಲ್ಪ ಹೊತ್ತಿನಲ್ಲಿ ಇಲ್ಲಿನ ಕಾಲೇಜು ಬಿಡುತ್ತಿತ್ತು, ಆ ಸಮಯದಲ್ಲೇನಾದರೂ ಈತ ಹೀಗೆ ಹುಚ್ಚಾಟವಾಡಿದ್ದರೆ ಹಲವು ಮಕ್ಕಳ ಪ್ರಾಣಕ್ಕೆ ಹಾನಿಯಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರು ಚಾಲಕನ ಅವಾಂತರದಿಂದಾಗಿ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕಾರು ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರರು ಗಾಯಗೊಂಡಿದ್ದು, ಘಟನೆಯಿಂದ ಕುಪಿತರಾದ ಸಾರ್ವಜನಿಕರು ಬಳ್ಳಾರಿ ಎಎಸ್ಎಂ ಮಹಿಳಾ ಕಾಲೇಜು ಬಳಿ ಕಾರು ಪಲ್ಟಿಯಾಗುತ್ತಿದ್ದಂತೆ ಕಾರು ಚಾಲಕನನ್ನು ಹೊರಗೆಳೆದು ಥಳಿಸಿದ್ದು, ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಆಂಧ್ರಪ್ರದೇಶ ನೋಂದಣಿಯ ಕಾರು ಇದಾಗಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇವನ್ಯಾರು ಅಂತ ಒಬ್ರಿಗೂ ಗೊತ್ತಿಲ್ಲ: ಮಗನ ಶಾಲೆಗೆ ಹೋದ ಅಪ್ಪನ ಬೈಗುಳದ ವೀಡಿಯೋ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ