PSI Recruitment Scam: ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೆ 43 ಸಿಮ್‌ ಖರೀದಿಸಿದ್ದ ಭೂಪ..!

By Kannadaprabha News  |  First Published Feb 3, 2023, 9:30 PM IST

ಬಂಧಿತ ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್‌ ನೌಕರ ಸಂಜೀವ್‌ ಕುಮಾರ್‌ ಬರೊಬ್ಬರಿ 43 ಸಿಮ್‌ ಖರೀದಿಸಿದ್ದ ಮಾಹಿತಿ ತನಿಖೆಯಿಂದ ಬಯಲಾಗಿದೆ.


ಕಲಬುರಗಿ(ಫೆ.03):  545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿ ಬಂಧಿತ ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್‌ ನೌಕರ ಸಂಜೀವ್‌ ಕುಮಾರ್‌ ಬರೊಬ್ಬರಿ 43 ಸಿಮ್‌ ಖರೀದಿಸಿದ್ದ ಮಾಹಿತಿ ತನಿಖೆಯಿಂದ ಬಯಲಾಗಿದೆ.

ಅಕ್ರಮದ ಕುರಿತು ಯಾರಿಗೂ ಮಾಹಿತಿ ಸಿಗಬಾರದು, ತಾನೆಲ್ಲಿಯೂ ಸಿಕ್ಕಿಹಾಕಿಕೊಳ್ಳಬಾರದು ಎನ್ನುವ ಕಾರಣಕ್ಕೆ ಸಂಜೀವ್‌ ಕುಮಾರ್‌ ತನ್ನ ಸೋದರನ ಹೆಸರಿನಲ್ಲಿ ಈ ಸಿಮ್‌ಗಳನ್ನು ಖರೀದಿಸಿದ್ದ ಎನ್ನಲಾಗಿದೆ. ಬುಧವಾರವಷ್ಟೇ ಸಂಜೀವ್‌ ಕುಮಾರ್‌ನನ್ನು ಬಂಧಿಸಿದ್ದ ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದಾಗ ಈ ಸತ್ಯ ಬಯಲಾಗಿದೆ.

Tap to resize

Latest Videos

undefined

ಪಿಎಸ್‌ಐ ನೇಮಕಾತಿ ಅಕ್ರಮ: ಲಂಚ ಆರೋಪದ ಹಿಂದೆ ತನಿಖಾಧಿಕಾರಿ ಬದಲು ಸಂಚು?

ಬಂಧಿತ ಸಂಜೀವ್‌ ಕುಮಾರ್‌ ಹಗರಣದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಜತೆಗೆ ನೇರ ಸಂಪರ್ಕದಲ್ಲಿದ್ದ. ಬ್ಲೂಟೂತ್‌ ಡಿವೈಸ್‌ ಬಳಸಿ ಪಿಎಸ್‌ಐ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಖೋಟಾದಲ್ಲಿ 14ನೇ ರಾರ‍ಯಂಕ್‌ ಪಡೆದಿದ್ದ.

click me!