ಉಡುಪಿಯಲ್ಲಿ ಇಸ್ರೋ ಘಟಕ ಸ್ಥಾಪಿಸುವಂತೆ ಪ್ರಧಾನಿ ಮೋದಿಗೆ ಕ್ಯಾಂಪ್ಕೊ ಪತ್ರ; ಯಾಕೆ ಗೊತ್ತಾ?

By Ravi Janekal  |  First Published Aug 29, 2023, 11:28 PM IST

ಚಂದ್ರಯಾನ ಯಶಸ್ಸಿನ ಹಿನ್ನೆಲೆಯಲ್ಲಿ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕೇಂದ್ರ ಅಡಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರ ನಿಯಮಿತ (ಕ್ಯಾಂಪ್ಕೊ) ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಉಡುಪಿಯಲ್ಲಿ ಇಸ್ರೋ ಘಟಕ ಸ್ಥಾಪಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.


ಮಂಗಳೂರು (ಆ.29): ಚಂದ್ರಯಾನ ಯಶಸ್ಸಿನ ಹಿನ್ನೆಲೆಯಲ್ಲಿ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕೇಂದ್ರ ಅಡಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರ ನಿಯಮಿತ (ಕ್ಯಾಂಪ್ಕೊ) ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ, ಉಡುಪಿಯಲ್ಲಿ ಇಸ್ರೋ ಪ್ರಯೋಗಾಲಯ ಘಟಕ ಸ್ಥಾಪನೆಗೆ ಮನವಿ ಮಾಡಿದೆ.

ಚಂದ್ರಯಾನ-3(Chandrayan 3) ರ ಮೂಲಕ ವಿಕ್ರಮ ಲ್ಯಾಂಡರ್‌( Vikra lander )ನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಭಾರತದ ಅಭೂತಪೂರ್ವ ಸಾಧನೆಯು ಅಭಿಮಾನ ಮತ್ತು ಹೆಮ್ಮೆ ತಂದುಕೊಟ್ಟಿದೆ. ಈ ಸಾಧನೆಯು ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನ(India's space technology)ದಲ್ಲಿ ಮಾನ್ಯತೆ ಪಡೆದ ಶಕ್ತಿಯನ್ನಾಗಿ ಮಾಡಿರುವುದು ಮಾತ್ರವಲ್ಲದೆ, ನಮ್ಮ ಗೌರವದ ಸಂಸ್ಥೆ ಇಸ್ರೋ(ISRO)ದ ಗಮನಾರ್ಹ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇಸ್ರೋ ಪ್ರಯತ್ನಗಳನ್ನು ಇಷ್ಟುಎತ್ತರಕ್ಕೆ ಕೊಂಡೊಯ್ಯುವಲ್ಲಿ ತಮ್ಮ ದೂರದೃಷ್ಟಿಯ ನಾಯಕತ್ವಕ್ಕಾಗಿ ಕ್ಯಾಂಪ್ಕೊ ಅಭಿನಂದನೆ ಸಲ್ಲಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

Latest Videos

undefined

ಇನ್ಮುಂದೆ ಭಾರತವೇ ಇಡೀ ಜಗತ್ತನ್ನು ಮುನ್ನಡೆಸಲಿದೆ: ಜೋಶಿ ಭರವಸೆ

ಇಸ್ರೋದ ಆರಂಭಿಕ ದಿನಗಳಲ್ಲಿ ಅದರ ಆಧಾರಸ್ತಂಭವಾಗಿ, ಭವಿಷ್ಯದ ಸಾಧನೆಗೆ ಹಗಲಿರುಳು ದುಡಿದು ಭದ್ರ ಬುನಾದಿ ಹಾಕಿದ ಗಣ್ಯ ವ್ಯಕ್ತಿಗಳಲ್ಲಿ ಪೊ›.ಯು.ಆರ್‌. ರಾವ್‌(Pro UR Rao) ಅವರು ಉಡುಪಿ ಜಿಲ್ಲೆಯವರು. ಚಂದ್ರಯಾನ-3ರ ಯಶಸ್ಸಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವಾರು ವಿಜ್ಞಾನಿಗಳು ಗಣನೀಯ ಕೊಡುಗೆ ನೀಡಿದ್ದಾರೆ. ಅವರೆಲ್ಲರ ಕೊಡುಗೆಗೆ ಗೌರವ ನೀಡಿ ಪೋ›ತ್ಸಾಹಿಸುವ ಸಲುವಾಗಿ, ಪ್ರೊ.ಯು.ಆರ್‌. ರಾವ್‌ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಇಸ್ರೋ ಪ್ರಯೋಗಾಲಯ ಘಟಕವನ್ನು ಸ್ಥಾಪಿಸಬೇಕು. ಈ ಉಪಕ್ರಮವು ಈ ಪ್ರದೇಶದ ವಿದ್ಯಾರ್ಥಿಗಳು ಮತ್ತು ಎಂಜಿನಿಯರ್‌ಗಳಿಗೆ ಸ್ಫೂರ್ತಿ ನೀಡುವುದರ ಜತೆಗೆ ದೇಶಕ್ಕೆ ಇನ್ನಷ್ಟುಕೊಡುಗೆ ನೀಡಲು ಉತ್ತೇಜನ ನೀಡಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹೆಸರಾಂತ ಶಿಕ್ಷಣ ಕೇಂದ್ರಗಳಾಗಿವೆ. ಇಸ್ರೋ ಅಭಿವೃದ್ಧಿಗೆ ಮೀಸಲಿರಿಸಲಾದ 15000 ಕೋಟಿ ರು. ಅನುದಾನದ ಒಂದು ಭಾಗವನ್ನು ಉಡುಪಿ ಜಿಲ್ಲೆಯಲ್ಲಿ ಪ್ರಯೋಗಾಲಯದ ಸ್ಥಾಪನೆಗೆ ಮರುಹಂಚಿಕೆ ಮಾಡುವಂತೆ ಕಿಶೋರ್‌ ಕಮಾರ್‌ ಕೊಡ್ಗಿ ವಿನಂತಿಸಿದ್ದಾರೆ.

Chandrayaan 3: ಚಂದ್ರನ ದಕ್ಷಿಣ ಧ್ರುವದಲ್ಲಿ ಆಮ್ಲಜನಕ ಸೇರಿದಂತೆ 9 ಧಾತುಗಳನ್ನು ಪತ್ತೆ ಮಾಡಿದ ಇಸ್ರೋ!

click me!