WATCH: ಗ್ಲಾಸ್ ಒಡೆದ ಬಸ್ ಬೆಂಗಳೂರಿಗೆ ಓಡಿಸಿ ಹಣ ಮಾಡಲು ನಿಂತ ಖಾಸಗಿ ಟ್ರಾವೆಲ್ಸ್ ಮಾಲೀಕ!

By Suvarna News  |  First Published Oct 13, 2024, 4:51 PM IST

ಹೆಲ್ಮೆಟ್ ಹಾಕಿ ಬಸ್ ಓಡಿಸೋಕೆ ಬಂದ ಡ್ರೈವರ್! ಗ್ಲಾಸ್ ಒಡೆದ ಬಸ್ ಬೆಂಗಳೂರಿಗೆ ಓಡಿಸಿ ಹಣ ಮಾಡಲು ನಿಂತನಾ ಟ್ರಾವೆಲ್ಸ್ ಮಾಲಿಕ?| ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ! ಚಾಲಕನ ವಿರುದ್ಧ ಪ್ರಯಾಣಿಕರು ಆಕ್ರೋಶ ವಿಡಿಯೋ ಇಲ್ಲಿದೆ ನೋಡಿ!


 ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಅ.13) : ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕೋದು ಸಾಮಾನ್ಯ. ಆದ್ರೆ ವಿಜಯಪುರದಲ್ಲೊಬ್ಬ ಡ್ರೈವರ್ ಬಸ್ ಓಡಿಸುವಾಗ ಹೆಲ್ಮೆಟ್ ಹಾಕಿ ರಾದ್ದಾಂತ ಸೃಷ್ಟಿಸಿದ್ದಾ‌ನೆ. ಇದನ್ನ ನೋಡಿದ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಅಸಲಿಗೆ ಬಸ್ ಓಡಿಸೋ ಡ್ರೈವರ್ ಹೆಲ್ಮೆಟ್ ಹಾಕೋದಕ್ಕು ಕಾರಣವಿತ್ತು. ಅದೆ ಕಾರಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ರೊಚ್ಚಿಗೆದ್ದು, ಟ್ರಾವೆಲ್ಸ್ ಮಾಲಿಕರೊಂದಿಗೆ ವಾಗ್ವಾದ ಸಹ ಮಾಡಿದ್ದಾರೆ. 

Latest Videos

undefined

ಹೆಲ್ಮೆಟ್ ಧರಿಸಿ ಸ್ಟೇರಿಂಗ್ ಹಿಡಿದ ಬಸ್ ಡ್ರೈವರ್!

ಗುಮ್ಮಟನಗರಿ ವಿಜಯಪುರ ನಗರದ ದಾತ್ರಿ ಮಸೀದಿ ಬಳಿ ನಿನ್ನೆ ತಡರಾತ್ರಿ ವಿಚಿತ್ರ ಘಟನೆ ನಡೆದಿದೆ. ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕ ಮಾರುತಿ ಹೆಲ್ಮೆಟ್ ಹಾಕಿ ಬಸ್ ಓಡಿಸಲು ಮುಂದಾಗಿದ್ದ. ಬಸ್ ಮುಂಭಾಗದ ಗ್ಲಾಸ್ ಇಲ್ಲದ ಕಾರಣ ಚಾಲಕ ಹೆಲ್ಮೆಟ್ ಹಾಕಿ ಬಸ್ ಓಡಿಸಲು ಮುಂದಾಗಿದ್ದಾನೆ. ಇದನ್ನ ನೋಡಿದ ಪ್ರಯಾಣಿಕರು ಕೂಡಲೇ ಬಸ್ ನಿಂದ ಇಳಿದ ಇಳಿದ ಚಾಲಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ

ಒಡೆದು ಹೋಗಿತ್ತು ಬಸ್‌ನ ಗ್ಲಾಸ್!

ಅದ್ಯಾವ ಕಾರಣವೋ ಗೊತ್ತಿಲ್ಲ, ಬಸ್ ನ ಮುಂಭಾಗದ ಸಂಪೂರ್ಣ ಗ್ಲಾಸ್ ಒಡೆದುಹೋಗಿತ್ತು. ಇದೆ ಗ್ಲಾಸ್ ಒಡೆದ ಬಸ್‌ನ್ನ ಬೆಂಗಳೂರಿಗೆ ಕೊಂಡೊಯ್ಯಲ್ಲು ಟ್ರಾವೆಲ್ಸ್ ಮಾಲಿ ಡ್ರೈವರ್ ಗೆ ಸೂಚನೆ ಕೊಟ್ಟಿದ್ದನಂತೆ. ಮಾಲಿಕನ ಮಾತಿನಂತೆ ಡ್ರೈವರ್ ಮಾರುತಿ ಹೆಲ್ಮೆಟ್ ಧರಿಸಿ ಚಾಲನೆಗೆ ಮುಂದಾಗಿದ್ದಾ‌ನೆ. ಆದ್ರೆ ಬಸ್‌ನ ಅವತಾರ ಹಾಗೂ ಡ್ರೈವರ್‌ನ ಹೆಲ್ಮೆಟ್ ಧರಿಸಿದ್ದ ಅವತಾರ ಕಂಡ ಪ್ರಯಾಣಿಕರು ಗಾಭರಿ ಬಿದ್ದು, ಬಸ್ ನಿಂದಾಚೆ ಬಂದಿದ್ದಾರೆ.

ವಿಜಯಪುರ: ನವರಾತ್ರಿ ಆಚರಣೆ ವೇಳೆ ಯುವತಿಯರಿಂದ ಅಶ್ಲೀಲ ನೃತ್ಯ, ಮುಜುಗರಕ್ಕೊಳಗಾದ ಜನ!

ಹಣ ಮಾಡೋ ಖಯಾಲಿ, ಬಸ್ ಡ್ಯಾಮೇಜ್ ಆಗಿದ್ರೂ ರಸ್ತೆಗೆ!

ಹೌದು, ಬಸ್ ನ ಪ್ರಂಟ್ ಗ್ಲಾಸ್ ಸಂಪೂರ್ಣ ಒಡೆದು ಹೋಗಿದೆ. ರಿಪೇರಿಗೆ ಬಿಡಬೇಕಿದ್ದ ಬಸ್‌ನ್ನ ಬೆಂಗಳೂರು ಪ್ರಯಾಣಕ್ಕೆ ಇಳಿಸಿದ್ದು ವಿಜಯಪುರದ ಸುಗಮ ಟ್ರಾವೆಲ್ಸ್‌ನ ಆಸೀಫ್. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದಸರಾ ಹಬ್ಬವಿದ್ದ ಕಾರಣ ಬೆಂಗಳೂರಿನಿಂದ ಊರಿಗೆ ಬಂದಿದ್ದ ಸಾಕಷ್ಟು ಜನರು ವಾಪಸ್ ಆಗ್ತಿದ್ರು. ಹೇಗಿದ್ರು ರಶ್ ಇರುತ್ತೆ, ಇದೆ ರಶ್‌ನಲ್ಲಿ ಒಂದಿಷ್ಟು ಹಣ ಮಾಡಿಕೊಳ್ಳಬೇಕು ಎನ್ನುವ ಉದ್ದೇಶವಿತ್ತೇನೋ ಗೊತ್ತಿಲ್ಲ, ಜನರನ್ನ ಅಪಾಯಕ್ಕೆ ತಳ್ಳಿ ಪ್ರಂಟ್ ಗ್ಲಾಸೇ ಇಲ್ಲದ ಬಸ್‌ನ್ನ ರಾತ್ರಿ ಬೆಂಗಳೂರು ಹೈವೆಯಲ್ಲಿ ಓಡಿಸಲು ಆಸೀಪ್ ಮುಂದಾಗಿದ್ದ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಮಾಲಿಕನ ವಿರುದ್ಧ ಪ್ರಯಾಣಿಕರ ಆಕ್ರೋಶ ; ಸ್ಥಳಕ್ಕೆ ಬಂದ ಪೊಲೀಸರು!

ಬಸ್ ಗ ಗ್ಲಾಸ್ ಒಡೆದು ಹೋಗಿದ್ದರು, ರಿಪೇರಿ ಮಾಡಿಸದೆ ಹಾಗೇ ಓಡಿಸೋಕೆ ತಯಾರಾಗಿದ್ದ ಕಾರಣ ಜನ ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರದಿಂದ ಬೆಂಗಳೂರು 500 ಕಿಲೋ ಮೀಟರ್ ಇದೆ. ಅದು ರಾತ್ರಿ ವೇಳೆ ಹೆಲ್ಮೆಟ್ ಹಾಕಿ ಬಸ್ ಓಡಿಸೋದು ಅಪಾಯಕಾರಿ ಎಂದು ತರಾಟೆಗೆ ತೆಗೆದುಕೊಂಡರು. ಪ್ರಯಾಣಿಕರು ಗಲಾಟೆ ಮಾಡ್ತಿದ್ದಂತೆ ಸ್ಥಳಕ್ಕೆ ಗಾಂಧಿಚೌಕ ಪೊಲೀಸರು ಭೇಟಿ ನೀಡಿ ಟ್ರಾವೆಲ್ಸ್ ಮಾಲಿಕನಿಗೆ ತಾಕೀತು ಮಾಡಿದ್ದಾರೆ.. ಬಳಿಕ ಬದಲಿ ಬಸ್ ವ್ಯವಸ್ಥೆ ಮಾಡಲಾಗಿದೆ.

'ಮೊದಲು ಹಿಂದೂಗಳ ಜಾಗದಲ್ಲಿ ಗೋರಿ ಕಟ್ತಾರೆ, ಬಳಿಕ ನಮ್ದು ಅಂತಾರೆ': ಚಕ್ರವರ್ತಿ ಸೂಲಿಬೆಲೆ

ಮಧ್ಯರಾತ್ರಿ ಬದಲಿ ಬಸ್ ವ್ಯವಸ್ಥೆ, ಪ್ರಯಾಣಿಕರಿಗೆ ಅವಸ್ಥೆ!

ಪ್ರಯಾಣಿಕರು ಗಲಾಟೆ ಮಾಡಿದಾಗ್ಯೂ ಆರಂಭದಲ್ಲಿ ಬದಲಿ ಬಸ್ ವ್ಯವಸ್ಥೆಗೆ ಮಾಲಿಕ ಒಪ್ಪದಲಿಲ್ಲ. ಗ್ಲಾಸ್ ಒಡೆದ ಸ್ಥಿತಿಯಲ್ಲೆ ಬಸ್ ಬಿಡ್ತೇವೆ, ನಮ್ಮ ಜವಾಬ್ದಾರಿ ಎಂದಿದ್ದಾನೆ‌. ಬೇಕಿದ್ದರೆ ನಿಮ್ಮ ಹಣ ರಿಫಂಡ್ ಮಾಡ್ತೀನಿ, ಇನ್ನೊಂದು ಬಸ್ ಅರೆಂಜ್ಮೆಂಟ್ ಸಾಧ್ಯವಿಲ್ಲ ಎಂದಿದ್ದಾನೆ..‌  ಪೊಲೀಸರು ಬದಲಿ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದ ಬಳಿಕ, ಸಿಂದಗಿಯಿಂದ ಮತ್ತೊಂದು ಬಸ್ ತರಿಸಿ ಪ್ರಯಾಣಿಕರನ್ನ ಕಳುಹಿಸಿದ್ದಾನೆ. ರಾತ್ರಿ 10 ಗಂಟೆಗೆ ಹೊರಡಬೇಕಿದ್ದ ಪ್ರಯಾಣಿಕರು ಮಧ್ಯಾರಾತ್ರಿ 2 ಗಂಟೆಗೆ ಬೇರೆ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಖಾಸಗಿ ಬಸ್ ಹಾವಳಿಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!