ಬಸ್ ಗಳು ಮುಖಾಮುಖಿ ಡಿಕ್ಕಿ : ಓರ್ವ ಬಲಿ, 18 ಮಂದಿಗೆ ಗಾಯ

By Web Desk  |  First Published Feb 4, 2019, 11:12 AM IST

2 ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವಿಗೀಡಾದ ಘಟನೆ ಬಳ್ಳಾರಿಯಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದೆ. 


ಬಳ್ಳಾರಿ: ಎರಡು ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 50 ಮೊರಬ ಕ್ರಾಸ್ ಬಳಿ ಎಸ್.ಆರ್.ಎಸ್ ಸ್ಲೀಪರ್ ಮತ್ತು ಎನ್ ಇ ಕೆ ಎಸ್ ಆರ್ ಟಿ ಸಿ ಯ ಕರೋನ ಸ್ಲೀಪರ್  ಮುಖಾಮುಖಿ ಡಿಕ್ಕಿಯಾಗಿವೆ. 

Tap to resize

Latest Videos

ಅಪಘಾತದ ವೇಳೆ  ಕರೋನ ಸ್ಲೀಪರ್ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 18 ಮಂದಿಯನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಕೂಡ್ಲಿಗಿ ಪೋಲಿಸರು ಸ್ಥಳಕ್ಕೆ‌ ಭೇಟಿ  ನೀಡಿ ಪರಿಶಿಲನೆ ನಡೆಸಿದ್ದು,  ಉಳಿದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. 

click me!