ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಬಿಎಸ್ ಯಡಿಯೂರಪ್ಪ ಅವರ ವಿಚಾರವನ್ನು ಬಿಜೆಪಿ ಸಂಸದ ಬಹಿರಂಗ ಪಡಿಸಿದ್ದಾರೆ. ಯಾರು ಆ ಬಿಜೆಪಿ ಸಂಸದ..? ಬಿಎಸ್ ವೈ ವಿಚಾರವೇನು? ಎನ್ನುವುದು ಈ ಕೆಳಗಿನಂತಿದೆ.
ತುಮಕೂರು, [ನ.02]: ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ಮಾಡಿದ್ದಾರೆ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಇಂದು [ಶನಿವಾರ] ಗಾಂಧಿ ಸಂಕಲ್ಪ ಯಾತ್ರೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಕಾಲದಲ್ಲಿ ಏನಾದರೂ ಮಾಡಿ ಮದ್ಯ ನಿಷೇಧಿಸಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಯಡಿಯೂರಪ್ಪನವರು ನನ್ನ ಬಳಿ ಮಾತನಾಡುವಾಗ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದರು.
ಅನರ್ಹರ ಬೆನ್ನಿಗೆ ನಿಂತ Bsy ಸರ್ಕಾರ, ಕುಸಿಯಿತು ಚಿನ್ನದ ದರ; ಇಲ್ಲಿವೆ ನ.02ರ ಟಾಪ್ 10 ಸುದ್ದಿ!
ಮದ್ಯ ಬ್ಯಾನ್ ಮಾಡಿದ ನಂತರ ಉಂಟಾಗುವ ಬೊಕ್ಕಸದ ಹೊರೆಯನ್ನು ಭರಿಸುವ ಬಗ್ಗೆಯೂ ಯಡಿಯೂರಪ್ಪನವರು ತುಂಬಾ ಚಿಂತನೆ ನಡೆಸಿದ್ದಾರೆ. ಮದ್ಯ ನಿಷೇಧದ ಬಗ್ಗೆ ನಾವೂ ಕೂಡ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.
ಈಗಾಗಲೇ ಗುಜರಾತ್ ಮತ್ತು ಬಿಹಾರದಲ್ಲಿ ಮದ್ಯ ನಿಷೇಧವಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಸಹ ಮದ್ಯ ನಿಷೇಧವಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿ ಬಳಿ ಇನ್ನಷ್ಟು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.