ತಂದೆ-ತಾಯಿ ಕೊಂದ ಅಣ್ಣನೇ ಅಂತ್ಯಸಂಸ್ಕಾರ ಮಾಡಲಿ ಎಂದ ಸಹೋದರಿ!

Kannadaprabha News, Ravi Janekal |   | Kannada Prabha
Published : Feb 14, 2026, 07:15 AM IST
Karnataka High Court

ಸಾರಾಂಶ

ಬೆಂಗಳೂರಿನಲ್ಲಿ ಪುತ್ರನಿಂದಲೇ ಹತ್ಯೆಯಾದ ದಂಪತಿಯ ಮಗಳು ಅಮೆರಿಕಾದಿಂದ ಆಗಮಿಸಿದ್ದಾರೆ. ತಮ್ಮ ಪೋಷಕರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆರೋಪಿ ಸಹೋದರನಿಗೆ ಅವಕಾಶ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರು (ಫೆ.14): ಪುತ್ರನಿಂದಲೇ ಹತ್ಯೆಯಾದ ತಂದೆ-ತಾಯಿಯ ಮರಣೋತ್ತರ ಪರೀಕ್ಷೆ ಪುತ್ರಿಯ ಸಮ್ಮುಖದಲ್ಲಿ ಶನಿವಾರ ನಡೆಯಲಿದೆ. ಮತ್ತೊಂದೆಡೆ ಪಾಲಕರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ತನ್ನ ಸಹೋದರನಿಗೆ ಅವಕಾಶ ನೀಡುವಂತೆ ಕೋರಿ ಆರೋಪಿಯ ಸಹೋದರಿ ರಶ್ಮಿ ಚಂದ್ರ ಭಟ್‌ ಕೋರ್ಟ್‌ ಮೊರೆ ಹೋಗಿದ್ದಾರೆ.

ಆರೋಪಿ ರೋಹನ್‌ ಚಂದ್ರ ಭಟ್‌ ಅವರ ತಂಗಿಯಾಗಿರುವ ರಶ್ಮಿ ಚಂದ್ರ ಭಟ್‌ ಅಮೆರಿಕಾದಿಂದ ಶುಕ್ರವಾರ ನಗರಕ್ಕೆ ಆಗಮಿಸಿದ್ದು, ಇದೀಗ ಇವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ನಮ್ಮ ಪಾಲಕರಾದ ನವೀನ್‌ ಚಂದ್ರ ಭಟ್‌(60), ಶ್ಯಾಮಲಾ ಭಟ್‌(55) ಅವರ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡುವಂತೆ ರಶ್ಮಿ ಕೋರ್ಟ್‌ಗೆ ಅರ್ಜಿ ಸಲ್ಲಿದ್ದಾರೆ. ನಮ್ಮ ತಂದೆ ತಾಯಿಗೆ ರೋಹನ್‌ ಏಕೈಕ ಪುತ್ರನಾಗಿದ್ದು, ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಆರೋಪಿಯು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನನ್ನು ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು. ಆದರೆ ಆತನ ಮೆಡಿಕಲ್‌ ಫಿಟ್‌ನೆಸ್‌ ಸರ್ಟಿಫಿಕೇಟ್‌ಗಾಗಿ ಕಾಯುತ್ತಿದ್ದೇವೆ. ಅದು ನಮ್ಮ ಕೈಸೇರಿದ ಕೂಡಲೇ ಆತನನ್ನು ನಮ್ಮ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕದ್ದ ವಸ್ತುಗಳನ್ನು ಪೊಲೀಸರು ಕೇಳಿದಾಗ ಒಪ್ಪಿಸಲೇಬೇಕು ನಿರಾಕರಿಸುವ ಹಕ್ಕು ಇಲ್ಲ: ಹೈಕೋರ್ಟ್
Karnataka News Live: ತಂದೆ-ತಾಯಿ ಕೊಂದ ಅಣ್ಣನೇ ಅಂತ್ಯಸಂಸ್ಕಾರ ಮಾಡಲಿ ಎಂದ ಸಹೋದರಿ!