ಕೆಲಸಕ್ಕಿದ್ದ ಹೊಟೇಲ್‌ನಲ್ಲೇ ಬಾಂಬ್‌ ತಯಾರಿಸಿದ್ದನೇ ಆದಿತ್ಯ?

By Web Desk  |  First Published Jan 23, 2020, 7:25 AM IST

ಕೆಲಸಕ್ಕಿದ್ದ ಹೊಟೇಲ್‌ನಲ್ಲೇ ಬಾಂಬ್‌ ತಯಾರಿಸಿದ್ದನೇ?| ಕುಡ್ಲ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕಿದ್ದ ಆದಿತ್ಯ, ಬಾಂಬ್‌ ಇಡುವ ವಾರದ ಮೊದಲು ಕೆಲಸ ಬಿಟ್ಟ, ಆತನ ಬ್ಯಾಗ್‌ನಲ್ಲೇನಿತ್ತು?


ಮಂಗಳೂರು[ಜ.23]: ಆದಿತ್ಯ ರಾವ್‌ ತಾನು ಕೆಲಸಕ್ಕಿದ್ದ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲೇ ಬಾಂಬ್‌ ತಯಾರಿಸಿರುವ ಸಂಶಯ ಈಗ ವ್ಯಕ್ತವಾಗಿದೆ. ಆತನ ಅನುಮಾನಾಸ್ಪದ ವರ್ತನೆಗಳ ಕುರಿತು ಹೊಟೇಲ್‌ ಸಿಬ್ಬಂದಿಯ ಮಾತುಗಳು ಇದನ್ನು ಪುಷ್ಟೀಕರಿಸಿವೆ.

ನಗರದ ಬಲ್ಮಠ ಸಮೀಪದ ಕುಡ್ಲ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಡಿಸೆಂಬರ್‌ 16ರಿಂದ ಜನವರಿ 13ರವರೆಗೆ ಬಿಲ್ಲಿಂಗ್‌ ಸೆಕ್ಷನ್‌ನಲ್ಲಿ ಆತ ಕೆಲಸದಲ್ಲಿದ್ದ. ಒಂದು ತಿಂಗಳು ಕೆಲಸ ಮಾಡಿ ಬಳಿಕ ವೇತನ ಪಡೆದು ಕೆಲಸ ಬಿಟ್ಟಿದ್ದಾನೆ. ಕೃತ್ಯಕ್ಕೆ ಸಂಪೂರ್ಣ ಪೂರ್ವ ತಯಾರಿ ನಡೆಸಿದ ಬಳಿಕವೇ ಆತ ಕೆಲಸ ಬಿಟ್ಟು ಹೋಗಿರುವ ಸಾಧ್ಯತೆಯಿದೆ. ಕೆಲಸ ಬಿಟ್ಟವಾರದೊಳಗೆ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದಾನೆ.

Tap to resize

Latest Videos

ಯೂಟ್ಯೂಬ್‌ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಆದಿತ್ಯ ರಾವ್

ಆ ಬ್ಯಾಗ್‌ನಲ್ಲೇನಿತ್ತು?:

‘ಆದಿತ್ಯನ ಬಳಿ ಯಾವಾಗಲೂ ಒಂದು ಬ್ಯಾಗ್‌ ಇರುತ್ತಿತ್ತು. ಅವನು ಎಲ್ಲೋ ಹೋಗಲಿ, ಆ ಬ್ಯಾಗ್‌ ಕೊಂಡೊಯ್ಯುತ್ತಿದ್ದ. ಬಾತ್‌ರೂಮ್‌ಗೆ ಹೋಗುವಾಗಲೂ ಬ್ಯಾಗ್‌ನೊಂದಿಗೇ ಹೋಗುತ್ತಿದ್ದ. ಹೊಟೇಲ್‌ನ ಬಿಲ್ಲಿಂಗ್‌ ಸೆಕ್ಷನ್‌ನಲ್ಲಿ ತಾನು ಕೂರುವ ಕುರ್ಚಿ ಪಕ್ಕದಲ್ಲೇ ಆ ಬ್ಯಾಗ್‌ ಇಟ್ಟುಕೊಳ್ಳುತ್ತಿದ್ದ. ಆತ ಎಕ್ಸರ್‌ಸೈಜ್‌ ಮಾಡಲು ಡಂಬೆಲ್ಸ್‌ ಇಟ್ಕೊಂಡಿದ್ದ. ಒಮ್ಮೆ ಅವನ ಬಳಿ ಬಿಳಿ ಬಣ್ಣದ ಹುಡಿ ಇರುವುದು ಗೊತ್ತಾಯಿತು. ಅದೇನೆಂದು ಕೇಳಿದಾಗ ಡಂಬೆಲ್ಸ್‌ ಹಿಡಿಯಲು ಗ್ರಿಪ್‌ಗಾಗಿ ಎಂದಿದ್ದ. ನಮಗೆ ಯಾವುದೇ ರೀತಿಯ ಅನುಮಾನ ಬಂದಿರಲಿಲ್ಲ. ಆಗಾಗ ಇಂಗ್ಲೀಷ್‌ನಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದ’ ಎಂದು ಹೆಸರು ಹೇಳಲಿಚ್ಛಿಸದ ಹೊಟೇಲ್‌ನ ಸಿಬ್ಬಂದಿ ಹೇಳಿದ್ದಾರೆ.

ಸದಾ ಟೋಪಿ ವಾಲಾ:

ಆದಿತ್ಯ ಯಾವಾಗಲೂ ಟೋಪಿ ಧರಿಸದೆ ಹೊರಬರುತ್ತಿರಲಿಲ್ಲವಂತೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಲು ತೆರಳಿದಾಗಲೂ ಟೋಪಿಯೊಂದಿಗೇ ಹೋಗಿದ್ದ. ಮಾಧ್ಯಮಗಳಲ್ಲಿ ಈತನ ಚಲನವಲನದ ಕುರಿತ ಸಿಸಿಟಿವಿ ಫäಟೇಜ್‌ನ್ನು ವೀಕ್ಷಿಸಿದ ತಕ್ಷಣವೇ ಆತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಪೊಲೀಸರು ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ’ ಎನ್ನುತ್ತಾರೆ ಹೊಟೇಲ್‌ ಸಿಬ್ಬಂದಿ.

'ಬಾಂಬರ್‌ ಬೆಂಗಳೂರಿಗೆ ಬಂದು ಶರಣಾಗಿದ್ದೇಕೆ? ಇದೊಂದು ನಾಟಕ'

ಇಂಟರ್ನೆಟ್‌ ಬಳಸುತ್ತಿದ್ದ:

ಆರೋಪಿ ಕೆಲಸಕ್ಕಿದ್ದ ಹೊಟೇಲ್‌ನಲ್ಲಿ ಹೊಟೇಲ್‌ ಕೆಲಸಕ್ಕಾಗಿ ಅಂತರ್ಜಾಲದ ಸೌಲಭ್ಯ ಕಲ್ಪಿಸಲಾಗಿತ್ತು. ಆದಿತ್ಯ ರಾವ್‌ ವೈಯಕ್ತಿಕ ಬಳಕೆಗೆ ಈ ಅಂತರ್ಜಾಲವನ್ನು ಬಳಕೆ ಮಾಡಬಹುದೇ ಎಂದು ಕೇಳಿಕೊಂಡಿದ್ದ. ಆದರೆ ಅದಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಆದರೂ ಆತ ಆಗಾಗ ಇಂಟರ್ನೆಟ್‌ ಬಳಕೆ ಮಾಡುತ್ತಿರುವುದು ಸಿಬ್ಬಂದಿಗೆ ತಿಳಿದಿತ್ತು.

ಅಮೆಜಾನ್‌ನಿಂದ ವೈಟ್‌ ಸಿಮೆಂಟ್‌ ತರಿಸಿದ್ದ

ಆದಿತ್ಯನಿಗೆ ಆನ್‌ಲೈನ್‌ನಲ್ಲಿ ವಸ್ತುಗಳನ್ನು ತರಿಸುವ ಹವ್ಯಾಸವಿತ್ತು. ಅವುಗಳನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಪ್ರಶ್ನಿಸಿದರೆ ನಂಬುವಂತಹ ಕಾರಣಗಳನ್ನೇ ಮುಂದಿಡುತ್ತಿದ್ದ ಎಂದು ಹೊಟೇಲ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಒಂದು ಬಾರಿ ಈತ ಅಮೆಜಾನ್‌ನಲ್ಲಿ ವೈಟ್‌ ಸಿಮೆಂಟ್‌ ಖರೀದಿಸಿದ್ದ. ಸಹೋದ್ಯೋಗಿಗಳು ಪ್ರಶ್ನಿಸಿದಾಗ ಮನೆಗೆ ಬೇಕು ಎಂದು ಉತ್ತರಿಸಿದ್ದ ಎನ್ನುವ ಅಂಶವೂ ತಿಳಿದುಬಂದಿದೆ. ಪೊಲೀಸರು ಈ ದಿಕ್ಕಿನಲ್ಲಿಯೂ ತನಿಖೆ ಆರಂಭಿಸಿದ್ದಾರೆ. ಅದೇ ವೈಟ್‌ ಸಿಮೆಂಟ್‌ ಬಳಸಿ ಹುಸಿ ಬಾಂಬ್‌ ಸೃಷ್ಟಿಮಾಡಿದ್ದನೇ? ಆತ ಸದಾ ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ಬ್ಯಾಗ್‌ನಲ್ಲಿ ಬಾಂಬ್‌ ತಯಾರಿಕೆಯ ಇತರ ವಸ್ತುಗಳಿದ್ದವೇ ಇತ್ಯಾದಿ ಅಂಶಗಳು ತನಿಖೆಯಿಂದ ಹೊರಬರಬೇಕಿದೆ.

'ನನ್ನ ಹೆಸರು ದೇಶಕ್ಕೇ ಗೊತ್ತಾಗಬೇಕು!'

click me!