
ಬೆಂಗಳೂರು(ಜ.12): ವಿಮಾನದ ಟಿಕೆಟ್ ಬುಕ್ ಮಾಡುವಾಗಲೇ ಇನ್ನುಮುಂದೆ ಬಿಎಂಟಿಸಿ ಟಿಕೆಟ್‌ನ್ನೂ ಬುಕ್ ಮಾಡಬಹುದಾಗಿದೆ. ವಿಮಾನದ ಜೊತೆಗೆ ಬಿಎಂಟಿಸಿ ವಾಯುವಜ್ರ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದ್ದು, ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ವಿಮಾನಯಾನ ಕಂಪನಿಗಳೊಂದಿಗೆ ಬಿಎಂಟಿಸಿ ಮಾತುಕತೆ ನಡೆಸಿದ್ದು, ಏರ್ಪೋರ್ಟ್ ಟ್ರೈನ್ ಗೆ ಪೈಪೋಟಿ ನೀಡಲು ಬಿಎಂಟಿಸಿಯಿಂದ ಪ್ಲಾನ್ ಯೋಜಿಸಲಾಗಿದೆ. ವಿಮಾನ ಇಳಿಯುವಾಗ್ಲೆ ಬಿಎಂಟಿಸಿ ವೋಲ್ವೋ ಬಸ್ ಟಿಕೆಟ್ ರೆಡಿ ಇದ್ರೆ ಬೇರೆ ಯೋಚನೆ ಮಾಡದೆ ಪ್ರಯಾಣಿಕರು ಬಸ್ ಹಿಡಿಯುವ ಸಾಧ್ಯತೆ ಇರುತ್ತದೆ.
ವಿದ್ಯಾರ್ಥಿಗಳು ಕಂಡಲ್ಲಿ ಬಸ್ ನಿಲ್ಲಿಸಲು ಸಚಿವ ಸುರೇಶ್ ಸೂಚನೆ
ಈಗಾಗಲೇ ಪ್ರತ್ಯೇಕವಾಗಿ ವಾಯು ವಜ್ರ ಟಿಕೆಟ್ ಬುಕ್ಕಿಂಗ್ ಆರಂಭಿಸಿರುವ ಬಿಎಂಟಿಸಿ ವಿಮಾನ ಕಂಪನಿಗಳೊಂದಿಗೆ ಒಪ್ಪಂದವಾದ್ರೆ ಬಿಎಂಟಿಸಿಗೆ ಬರುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಈಗಾಗಲೇ ಏರ್‌ಪೋರ್ಟ್‌ಗೆ ಟ್ರೈನ್ ವ್ಯವಸ್ಥೆ ಮಾಡಲಾಗಿದ್ದು, 10 ರೂಪಾಯಿಯಲ್ಲಿ ಆರಾಮವಾಗಿ ವಿಮಾನ ನಿಲ್ಧಾಣಕ್ಕೆ ಹೋಗಬಹುದು. ಇದೀಗ ಬಿಎಂಟಿಸಿ ಕೂಡಾ ನೂತನ ಯೋಜನೆಯ ಬಗ್ಗೆ ಚಿಂತಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ