ಲಾಕ್‌ಡೌನ್ ಪೂರ್ವ ನಿತ್ಯ 35 ಲಕ್ಷ ಮಂದಿ ಪ್ರಯಾಣ| ಬಸ್ ಸೇವೆ ಅಗತ್ಯ ಸೇವೆಯಡಿ ಬರುವುದರಿಂದ ನಷ್ಟದ ನಡುವೆಯೂ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಕಾರ್ಯಾಚರಣೆ| ಪ್ರಯಾಣಿಕರ ಸಂಖ್ಯೆ ಕೊಂಚ ಏರಿಕೆಯಾಗಿದ್ದರೂ ಸಹ ನಷ್ಟ ಮುಂದುವರಿದಿದೆ|
ಬೆಂಗಳೂರು(ಸೆ.11): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಏರಲು ಹಿಂದೇಟು ಹಾಕುತ್ತಿದ್ದ ರಾಜಧಾನಿ ಮಂದಿ ಇದೀಗ ನಿಧಾನಕ್ಕೆ ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ನಿತ್ಯ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ 12 ಲಕ್ಷ ಏರಿಕೆಯಾಗಿದೆ.
ಒಟ್ಟು ಆರೂವರೆ ಸಾವಿರ ಬಸ್ ಹೊಂದಿರುವ ಬಿಎಂಟಿಸಿಯು ಪ್ರಸ್ತುತ ನಾಲ್ಕು ಸಾವಿರ ಬಸ್‌ಗಳನ್ನು ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಅನ್‌ಲಾಕ್ 4.0 ನಂತರ ಪ್ರಯಾಣಿಕರ ಸಂಖ್ಯೆ ಮೊದಲಿಗಿಂತ ಕೊಂಚ ಹೆಚ್ಚಳವಾಗಿದೆ.
undefined
ಲಾಕ್‌ಡೌನ್ ಪೂರ್ವದಲ್ಲಿ ನಿತ್ಯ ಸುಮಾರು 35 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಸರ್ಕಾರ ಅಂತರ್ ಜಿಲ್ಲೆಗಳ ಬಸ್ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಂತೆ ಬಿಎಂಟಿಸಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಹೆಚ್ಚಾಗತೊಡಗಿತು. ಆಗಸ್ಟ್ ತಿಂಗಳಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆ 10 ಲಕ್ಷದವರೆಗೆ ತಲುಪಿತು.
ಪರೀಕ್ಷೆ ದಿನ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ
ಸೆಪ್ಟೆಂಬರ್ ಆರಂಭದಿಂದ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದು, ಪ್ರಸ್ತುತ ನಿತ್ಯ ಪ್ರಯಾಣಿಸುವವರ ಸಂಖ್ಯೆ 12 ಲಕ್ಷಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ವೃದ್ಧಿಸುವ ವಿಶ್ವಾಸವಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಸ್ ಸೇವೆ ಅಗತ್ಯ ಸೇವೆಯಡಿ ಬರುವುದರಿಂದ ನಷ್ಟದ ನಡುವೆಯೂ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಈಗ ಪ್ರಯಾಣಿಕರ ಸಂಖ್ಯೆ ಕೊಂಚ ಏರಿಕೆಯಾಗಿದ್ದರೂ ಸಹ ನಷ್ಟ ಮುಂದುವರಿದಿದೆ.