BMTC ನೌಕರರಿಗಿಲ್ಲ ಸಂಬಳ: ಹಬ್ಬದ ಟೈಂನಲ್ಲೇ ವೇತನ ನೀಡದೇ ಸತಾಯಿಸುತ್ತಿರುವ ಇಲಾಖೆ

By Suvarna News  |  First Published Jan 12, 2021, 12:08 PM IST

ಅರ್ಧ ತಿಂಗಳು ಕಳೆದ್ರು ಬಿಎಂಟಿಸಿ ನೌಕರರಿಗಿಲ್ಲ ಸಂಬಳ | ನೌಕರರಿಗೆ ಸಂಬಳ ನೀಡದೇ ಸತಾಯಿಸುತ್ತಿರುವ ಇಲಾಖೆ


ಬೆಂಗಳೂರು(ಜ.12): ಅರ್ಧ ತಿಂಗಳು ಕಳೆದರೂ ಬಿಎಂಟಿಸಿ ನೌಕರರಿಗೆ ಸಂಬಳ ನೀಡಿಲ್ಲ. ಹಬ್ಬದ ಟೈಂನಲ್ಲೇ ನೌಕರರಿಗೆ ಸಂಬಳ ನೀಡದೇ ಸತಾಯಿಸುತ್ತಿರುವ ಇಲಾಖೆ ಬಗ್ಗೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರ್ಷದ ಮೊದಲ ಹಬ್ಬವನ್ನ ಖುಷಿಯಿಂದ ಆಚರಣೆ ಮಾಡುವ ಪ್ಲಾನ್‌ನಲ್ಲಿದ್ದ ನೌಕರರು ಸಂಕ್ರಾಂತಿ ಹಬ್ಬ ಹತ್ತಿರವಾದರೂ ವೇತನ ಬಂದಿಲ್ಲ ಎಂಬ ಬೇಸರದಲ್ಲಿದ್ದಾರೆ. ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಇದ್ದರೂ ಸಂಬಳ ಆಗಿಲ್ಲ.

Latest Videos

undefined

ಕಾಂಗ್ರೆಸ್ ನಾಲ್ಕೂಟೈರ್ ಪಂಕ್ಚರ್ ಆಗಿರೋ ಬಸ್‌ನಂತೆ: ಬೊಮ್ಮಾಯಿ ವ್ಯಂಗ್ಯ

ಪ್ರತಿ ಹಬ್ಬದ ಟೈಂನಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿರುವ ಸಂಸ್ಥೆ ಬಗ್ಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೋನಾ ಟೈಂನಲ್ಲಿ ನಮಗೆ ಸರಿಯಾಗಿ ಡ್ಯೂಟಿ ಕೊಟ್ಟಿಲ್ಲ. ಮಾಡಿರುವ ಡ್ಯೂಟಿಗೂ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂದು ನೌಕಕರು ಆರೋಪಿಸಿದ್ದಾರೆ.

ಕಳೆದ ದೀಪಾವಳಿ ಹಬ್ಬದ ವೇಳೆ ಕೂಡ ಸಂಸ್ಥೆ ಸಂಬಳ ಕೊಡದೇ ಕತ್ತಲಲ್ಲಿ ದೀಪಾವಳಿ ಆಚರಣೆ ಮಾಡುವ ಹಾಗೆ ಮಾಡಿತ್ತು. ಈಗ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೂ ಸಂಬಳ ನೀಡುತ್ತಿಲ್ಲ. ಸಂಬಳ ಕೊಟ್ಟಿಲ್ಲ ಅಂದ್ರೆ ಹಬ್ಬ ಆಚರಣೆ ಮಾಡೋದು ಹೇಗೆ? ಎಂದು ಬಿಎಂಟಿಸಿ ನೌಕರರು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಕಷ್ಟ 

click me!