ಸಾಮಾನ್ಯ ಮಾಸಿಕ ಪಾಸ್ ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸು ವಿತರಣೆ| ನಿಗಮದ ಟಿಟಿಎಂಸಿಗಳು ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ 65 ಸ್ಥಳಗಳಲ್ಲಿ ಮಾಸಿಕ ಪಾಸ್ ವಿತರಣೆ| 200 ಬೆಂಗಳೂರು ಒನ್ ಕೇಂದ್ರಗಳು ಹಾಗೂ ಖಾಸಗಿ ಏಜೆನ್ಸಿಗಳಲ್ಲಿಯೂ ಪಾಸ್‌ಗಳು ಲಭ್ಯ|
ಬೆಂಗಳೂರು(ಜು.29): ಬಿಎಂಟಿಸಿಯು ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ(ಜು.29) ಆಗಸ್ಟ್ ತಿಂಗಳ ರಿಯಾಯಿತಿ ದರದ ಮಾಸಿಕ ಪಾಸ್ ವಿತರಿಸಲಿದೆ.
ಸಾಮಾನ್ಯ ಮಾಸಿಕ ಪಾಸ್ (1,050 ರು.) ಹಾಗೂ ಹಿರಿಯ ನಾಗರಿಕರ ಮಾಸಿಕ ಪಾಸು (945 ರು.) ವಿತರಣೆ ಮಾಡಲಾಗುವುದು. ನಿಗಮದ ಟಿಟಿಎಂಸಿಗಳು ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ 65 ಸ್ಥಳಗಳಲ್ಲಿ ಮಾಸಿಕ ಪಾಸ್ ವಿತರಿಸಲಾಗುವುದು.
ಇಂದಿನಿಂದ ಬೆಂಗ್ಳೂರು ಫ್ರೀ.. ಫ್ರೀ.; ರಸ್ತೆಗಿಳಿದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ
ಜತೆಗೆ 200 ಬೆಂಗಳೂರು ಒನ್ ಕೇಂದ್ರಗಳು ಹಾಗೂ ಖಾಸಗಿ ಏಜೆನ್ಸಿಗಳಲ್ಲಿಯೂ ಈ ಮಾಸಿಕ ಪಾಸ್‌ಗಳು ಲಭ್ಯವಿದೆ ಎಂದು ಬಿಎಂಟಿಸಿ ತಿಳಿಸಿದೆ.