ಕೊರೋನಾ: 2000 ಗಡಿ ದಾಟಿದ ಸಾವಿನ ಸಂಖ್ಯೆ| 102 ಮಂದಿ ಸಾವು, ಮೃತರ ಸಂಖ್ಯೆ 2055ಕ್ಕೇರಿಕೆ| ದಾಖಲೆಯ 5,536 ಮಂದಿಗೆ ಸೋಂಕು| ಈವರೆಗೆ 40,504 ಮಂದಿ ಚೇತರಿಕೆ| ದಾಖಲೆಯ 2819 ಮಂದಿ ಗುಣಮುಖ, ಡಿಸ್‌ಚಾಜ್‌ರ್| ಸಕ್ರಿಯ ಸೋಂಕಿತರು 64,434| ಪರೀಕ್ಷಾ ವೇಗ ಹೆಚ್ಚಳ: 37,720 ಜನರ ಪರೀಕ್ಷೆ| ಐಸಿಯುನಲ್ಲಿ 612 ಮಂದಿ, 331 ಗಂಭೀರ
ಬೆಂಗಳೂರು(ಜು.29): ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಮಂಗಳವಾರ ಮತ್ತೆ ದಾಖಲೆಯ 5,536 ಮಂದಿಗೆ ಸೋಂಕು ಹರಡಿದೆ. ಜೊತೆಗೆ ಇದೇ ದಿನ ಸೋಂಕಿನಿಂದ ಗುಣಮುಖರಾದ ದಾಖಲೆಯ 2819 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರ ನಡುವೆ ಕೆಲ ದಿನಗಳ ಬಳಿಕ ಮತ್ತೆ ಸಾವಿನ ಸಂಖ್ಯೆ ಶತಕ ದಾಟಿದ್ದು ಒಂದೇ ದಿನ 102 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ವರೆಗೆ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ ಎರಡು ಸಾವಿರ ಗಡಿ ದಾಟಿ 2055ಕ್ಕೆ (ಆತ್ಮಹತ್ಯೆ ಸೇರಿ ಎಂಟು ಅನ್ಯ ಕಾರಣದ ಸಾವು ಹೊರತುಪಡಿಸಿ) ಏರಿಕೆಯಾಗಿದೆ.
undefined
ಜು.27ರ ಸೋಮವಾರವಷ್ಟೇ ಒಂದೇ ದಿನ 5324 ಮಂದಿಗೆ ಸೋಂಕು ದೃಢಪಟ್ಟಿದ್ದು ಹಾಗೂ ಜು.25ರಂದು ಒಂದೇ ದಿನ 2403 ಮಂದಿ ಗುಣಮುಖರಾಗಿದ್ದೇ ಇದುವರೆಗಿನ ಏಕದಿನದ ಅತಿ ಹೆಚ್ಚು ಸೋಂಕು ಮತ್ತು ಚೇತರಿಕೆಯಲ್ಲಿನ ದಾಖಲೆಯಾಗಿತ್ತು. ಮಂಗಳವಾರದ ಹೊಸ ದಾಖಲೆಯ ಪ್ರಕರಣಗಳೊಂದಿಗೆ ರಾಜ್ಯದ ಈ ವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾದರೆ, ಚೇತರಿಸಿಕೊಂಡು ಮನೆಗೆ ಮರಳಿದವರ ಸಂಖ್ಯೆ 40,504ಕ್ಕೆ ಏರಿಕೆಯಾಗಿದೆ. ಉಳಿದಂತೆ ಬೆಂಗಳೂರಿನಲ್ಲಿನ 35,102 ಮಂದಿ ಸೇರಿ ಒಟ್ಟು 64,434 ಮಂದಿ ಸಕ್ರಿಯ ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಲ್ಲಿ ಬೆಂಗಳೂರಿನ 331 ಮಂದಿ ಸೇರಿ ಗಂಭೀರ ಆರೋಗ್ಯ ಸ್ಥಿತಿಯ 612 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚಿದ ಪರೀಕ್ಷಾ ವೇಗ:
ಈ ಮಧ್ಯೆ, ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯನ್ನು ಮತ್ತಷ್ಟುಹೆಚ್ಚಿಸಿದ್ದು ಸೋಮವಾರ 16,340 ರಾರಯಪಿಡ್ ಆಂಟಿಜನ್ ಟೆಸ್ಟ್ ಹಾಗೂ 21,380 ಆರ್‌ಟಿಪಿಸಿಆರ್ ಹಾಗೂ ಇತರೆ ಪರೀಕ್ಷೆ ಸೇರಿ ಒಟ್ಟು 37,720 ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರಲ್ಲಿ 1898 ಕೇಸ್:
ಸೋಮವಾರ ಬೆಂಗಳೂರು ನಗರ ಜಿಲ್ಲೆಯಲ್ಲೇ 1989 ಮಂದಿಗೆ ಸೋಂಕು ಹರಡಿದೆ. ಇನ್ನು, ಬಳ್ಳಾರಿಯಲ್ಲಿ 452, ಕಲಬುರಗಿ 283, ಬೆಳಗಾವಿ 228, ಮೈಸೂರು 220, ತುಮಕೂರು 207, ಕೋಲಾರ 174, ದಕ್ಷಿಣ ಕನ್ನಡ, ಧಾರವಾಡ ತಲಾ 173, ವಿಜಯಪುರ 153, ಕೊಪ್ಪಳ 144, ದಾವಣಗೆರೆ 135, ಬಾಗಲಕೋಟೆ 115, ಉಡುಪಿ 109, ಹಾಸನ 108, ಬೆಂಗಳೂರು ಗ್ರಾಮಾಂತರ 107, ರಾಮ ನಗರ 101, ಮಂಡ್ಯ 96, ರಾಯಚೂರು 93, ಗದಗ 73, ಚಿಕ್ಕಬಳ್ಳಾಪುರ 72, ಯಾದಗಿರಿ 67, ಚಿತ್ರದುರ್ಗ 66, ಚಿಕ್ಕ ಮಗಳೂರು 55, ಶಿವಮೊಗ್ಗ 54, ಚಾಮರಾಜ ನಗರ 52, ಉತ್ತರ ಕನ್ನಡ 47, ಹಾವೇರಿ 40, ಬೀದರ್ 39 ಮತ್ತು ಕೊಡಗಿನಲ್ಲಿ 2 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಸಾವು ಎಲ್ಲಿ ಎಷ್ಟು?:
ಸೋಮವಾರ ಬೆಂಗಳೂರಿನಲ್ಲೇ 40 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 8, ಉಡುಪಿ 7, ಕಲಬುರಗಿ, ಬೆಳಗಾವಿ, ಧಾರವಾಡ ತಲಾ 6, ಹಾಸನ 5, ದಾವಣಗೆರೆ 4, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ತಲಾ 3, ಬಾಗಲಕೋಟೆ, ಗದಗ, ಬೀದರ್ ತಲಾ 2, ತುಮಕೂರು, ಕೋಲಾರ, ವಿಜಯನಗರ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗಿನಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 74 ಸಾರಿ (ಉಸಿರಾಟ ತೊಂದರೆ), 17 ಐಎಲ್‌ಐ (ವಿಷಮಶೀತ ಜ್ವರ) ಹಿನ್ನೆಲೆಯ ಪ್ರಕರಣಗಳಾಗಿವೆ. ಉಳಿದ ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.