
ಬೆಂಗಳೂರು ಏ.25: ಬಿಎಂಟಿಸಿ ತನ್ನ ಸ್ಮಾರ್ಟ್ ಟಿಕೆಟಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಮುಂದಾಗಿದ್ದು, ಅದಕ್ಕಾಗಿ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ ಮೇಲೆ ನಿಗಾ ಇಡಲು ಮತ್ತು ಲೋಪಗಳನ್ನು ಪತ್ತೆ ಮಾಡಲು ಸ್ವತಂತ್ರ ಬಾಹ್ಯ ಮೇಲ್ವಿಚಾರಣಾ ಸಂಸ್ಥೆ ನೇಮಿಸಲು ನಿಗಮ ನಿರ್ಧರಿಸಿದೆ.
ಬಿಎಂಟಿಸಿಯಲ್ಲಿ ಕೆಲ ತಿಂಗಳ ಹಿಂದಷ್ಟೇ 11 ಸಾವಿರ ಹೊಸ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂ) ಪರಿಚಯಿಸಿದೆ. ಮುಂದಿನ 5 ವರ್ಷಗಳಿಗೆ ಅದನ್ನು 15 ಸಾವಿರಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಇಟಿಎಂಗಳು ಆಂಡ್ರ್ಯಾಯ್ಡ್ ಆಧಾರಿತವಾಗಿ ಕಾರ್ಯನಿರ್ವಹಿಸಲಿವೆ. ಈ ಇಟಿಎಂಗಳು ಯುಪಿಐ, ಕ್ಯೂಆರ್ ಕೋಡ್, ಶಕ್ತಿ ಸ್ಮಾರ್ಟ್ ಕಾರ್ಡ್ ಮತ್ತು ರಾಷ್ಟ್ರೀಯ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಮೂಲಕ ಪ್ರಯಾಣ ಶುಲ್ಕ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಇದರಲ್ಲಿ ಶಕ್ತಿ ಸ್ಮಾರ್ಟ್‌ಕಾರ್ಡ್ ಮತ್ತು ಎನ್‌ಸಿಎಂಸಿ ಬಳಕೆಯಿಂದ ಪ್ರಯಾಣಿಕರ ಮಾಹಿತಿಯು ಇಟಿಎಂಗಳಲ್ಲಿ ಲಭ್ಯವಾಗಲಿದೆ.
ಈ ದತ್ತಾಂಶ ಕಳವಾಗದಂತೆ ತಡೆಯಲು ಮತ್ತು ಶೇಖರಣೆ ಮಾಡಲು ಸ್ವತಂತ್ರ ಬಾಹ್ಯ ಮೇಲ್ವಿಚಾರಣಾ ಸಂಸ್ಥೆ ನೇಮಿಸಲಾಗುತ್ತಿದೆ. ದತ್ತಾಂಶ ಸುರಕ್ಷತೆಗೆ ಈ ಸಂಸ್ಥೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದರ ಜತೆಗೆ ಟಿಕೆಟ್ ವಿತರಣೆಯಲ್ಲಿ ನಡೆಯಬಹುದಾದ ಅಕ್ರಮಗಳನ್ನು ಪತ್ತೆ ಮಾಡುವುದು ಹಾಗೂ ಆದಾಯ ಸೋರಿಕೆ ತಡೆಯುವ ಕೆಲಸವನ್ನೂ ಸಂಸ್ಥೆ ಮಾಡಲಿದೆ. ಅದರಲ್ಲೂ ಯುಪಿಐ, ಎನ್‌ಸಿಎಂಸಿ ಮೂಲಕ ಸಂಗ್ರಹವಾಗುವ ಪ್ರಯಾಣ ಶುಲ್ಕ ಬಿಎಂಟಿಸಿ ನಿಗದಿ ಪಡಿಸುವ ಬ್ಯಾಂಕ್ ಖಾತೆಗೆ ಪಾವತಿಯಾಗುತ್ತಿದೆಯೇ ಎಂಬುದನ್ನೂ ನಿರಂತರ ನಿಗಾ ವಹಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ